ETV Bharat / state

'ಅಗ್ನಿಪಥ್' ಯೋಜನೆ ವಿರೋಧಿಸಿ ಹಿಂಸಾಚಾರ: ರಾಜ್ಯ ರೈಲ್ವೇ ಪೊಲೀಸರಿಂದ ಕಟ್ಟೆಚ್ಚರ - ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ಉದ್ದೇಶಿತ ಅಗ್ನಿಪಥ್‌ ಯೋಜನೆ ವಿರೋಧಿಸಿ ಬಿಹಾರ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಿಳಿದಿರು ದುಷ್ಕರ್ಮಿಗಳು ರೈಲು ತಡೆ, ರೈಲು ಬೋಗಿಗಳಿಗೆ ಬೆಂಕಿ ಹಾಗು ಕಲ್ಲು ತೂರಾಟ ನಡೆಸಿದ್ದಾರೆ.

State Railway Police is alert about protester who against agneepath

author img

By

Published : Jun 17, 2022, 3:19 PM IST

Updated : Jun 17, 2022, 6:35 PM IST

ಬೆಂಗಳೂರು: ರಕ್ಷಣಾ ಪಡೆಯ ಮಹತ್ವಾಕಾಂಕ್ಷಿ ಯೋಜನೆ ಹಾಗು ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಅಗ್ನಿಪಥ್ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಈ ರೀತಿಯ ಹಿಂಸಾಚಾರ ರಾಜ್ಯದಲ್ಲೂ ನಡೆಯುವ ಸಾಧ್ಯತೆಯಿದ್ದು, ನೈರುತ್ಯ ರೈಲ್ವೇ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಆರ್​​ಪಿಎಫ್‌ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಭದ್ರತಾ ವಿಭಾಗದ ರೈಲ್ವೇ ಅಧಿಕಾರಿಗಳು‌ ಆಯಾ ವಿಭಾಗದ‌ ರೈಲ್ವೇ ಪೊಲೀಸರಿಗೆ ಅಲರ್ಟ್ ಆಗಿರುವಂತೆ ತಿಳಿಸಿದ್ದಾರೆ.

ಬೆಂಗಳೂರಿ‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೈಯ್ಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ರೈಲು ನಿಲ್ದಾಣ, ಯಶವಂತಪುರ,‌ ಕಂಟೋನ್ಮೆಂಟ್‌ ರೈಲು ನಿಲ್ದಾಣ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಮೈಸೂರು ಹಾಗೂ ಬಳ್ಳಾರಿ ಸೇರಿದಂತೆ ಜಿಲ್ಲೆಯ‌‌ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ಎಚ್ಚರಿಕೆ ಕೊಡಲಾಗಿದೆ. ರೈಲ್ವೇ ಹಳಿಗಳ‌ ಮೇಲೆಯೂ ಪ್ರತಿಭಟನಾಕಾರರು ಪ್ರತಿಭಟನೆ‌ ನಡೆಸಿ‌ ರೈಲು ತಡೆಯುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ವಿಶೇಷ ಗಸ್ತಿಗೆ ತಿಳಿಸಿದ್ದಾರೆ.

ಪ್ರಯಾಣಿಕರಂತೆ ಬಂದು ಪ್ರತಿಭಟನೆ: ಕಾನೂನು ಪ್ರಕಾರ ರೈಲ್ವೇ ನಿಲ್ದಾಣದಲ್ಲಿ ಅಥವಾ ರೈಲ್ವೇ ಹಳಿಗಳ ಮೇಲೆ ಪ್ರತಿಭಟನೆ, ಧರಣಿ ಅಥವಾ ರೈಲು ತಡೆಗೆ ಮುಂದಾಗುವುದು‌ ನಿಷಿದ್ಧ. ಹೀಗಾಗಿ ಕೆಲ‌ ಪ್ರತಿಭಟನಾಕಾರರು ಪ್ರಯಾಣಿಕರಂತೆ ಬಂದು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.

ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ವಶಕ್ಕೆ‌ ಪಡೆಯುವಂತೆಯೂ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದೇವೆ. ಕಾನೂನು‌ ಸುವ್ಯವಸ್ಥೆ‌ಗೆ ಧಕ್ಕೆ ಸಾಧ್ಯತೆ ಇದ್ದು ಸ್ಥಳೀಯ ಪೊಲೀಸರಿಗೂ ಅಲರ್ಟ್ ಆಗಿರುವಂತೆ ಸಂಬಂಧಪಟ್ಟ ಹಿರಿಯ‌ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ‌ ನೀಡಿದ್ದೇವೆ ಎಂದು ರೈಲ್ವೆ ಎಸ್​ಪಿ ಸಿರಿಗೌರಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಚಾಮರಾಜನಗರ : ಮತ್ತೆ ಆನೆ ದಾದಾಗಿರಿ ಪ್ರಾರಂಭ, ಲಾರಿ ತಡೆಗಟ್ಟಿ ಕಬ್ಬು ವಸೂಲಿ!!

Last Updated : Jun 17, 2022, 6:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.