ETV Bharat / state

ಕರ್ನಾಟಕ ಬಜೆಟ್​​​ 2020: ಸಿಎಂ ಯಡಿಯೂರಪ್ಪ ಆಯವ್ಯಯದ ಹೈಲೈಟ್ಸ್​​​​​

ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಳನೇ ಬಾರಿ ಬಜೆಟ್ ಮಂಡನೆ ಮಾಡಿದ್ದು, ಯಾವ ಯಾವ ವಲಯಗಳಿಗೆ ಎಷ್ಟೆಲ್ಲಾ ಅನುದಾನ ನೀಡಿದ್ದಾರೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಕರ್ನಾಟಕ ಬಜೆಟ್​ 2020
Karnataka State Budget
author img

By

Published : Mar 5, 2020, 8:58 PM IST

ಬೆಂಗಳೂರು: ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಳನೇ ಬಾರಿ ಬಜೆಟ್ ಮಂಡನೆ ಮಾಡಿದ್ದು, ಈ ಬಾರಿ ಇಲಾಖಾವಾರು ಬಜೆಟ್ ಮಂಡಿಸುವ ಬದಲು ಆರು ವಲಯಗಳಾಗಿ ಹಂಚಿಕೆ ಮಾಡಿ ಹೊಸ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ.

ಸಿಎಂ ಮಂಡಿಸಿದ ಬಜೆಟ್​​ನ ಪ್ರಮುಖಾಂಶಗಳು:

  • ಮದ್ಯದ ಮೇಲಿನ ಸುಂಕ ಶೇ. 6ರಷ್ಟು ದರ ಹೆಚ್ಚಳ
  • ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ 1500 ಕೋಟಿ ರೂ. ಅನುದಾನ
  • ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ 3060 ಕೋಟಿ ರೂ. ಅನುದಾ‌ನ
  • ಪಂಚಾಯತ್ ರಾಜ್ ಆಯುಕ್ತಾಲಯ ಪ್ರಾರಂಭಿಸಲು ನಿರ್ಧಾರ
  • ಗ್ರಾಮೀಣ ರಸ್ತೆಗಳ ಸುಧಾರಣೆಗೆ ಗ್ರಾಮೀಣ ಸುಮಾರ್ಗ ಯೋಜನೆ ಜಾರಿ. ಐದು ವರ್ಷದಲ್ಲಿ 20,000 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ್ದು, ಒಟ್ಟು 780 ಕೋಟಿ ರೂ. ಅನುದಾನ ಮೀಸಲು
  • ರಾಜ್ಯದ 17 ನದಿ ಪಾತ್ರದ ಮಲಿನತೆ ತಡೆಗಟ್ಟಲು 1690 ಕೋಟಿ ರೂ. ಮೊತ್ತದಲ್ಲಿ 20 ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ100 ಕೋಟಿ ರೂ. ಅನುದಾನ
  • ರಾಮನಗರದ ಹಾರೋಹಳ್ಳಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಸ್ಥಾಪನೆಗೆ 10 ಕೋಟಿ ರೂ. ಅನುದಾನ
  • ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಅಭಿವೃದ್ಧಿ
  • ಹಾವೇರಿಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ
  • ನೇಕಾರರ ಸಾಲಮನ್ನಾ ಯೋಜನೆಗೆ 79.57 ಕೋಟಿ ರೂ. ಅನುದಾನ
  • ಧಾರವಾಡ- ಬೆಳಗಾವಿ ನಡುವೆ ಕಿತ್ತೂರಿನ ಮೂಲಕ ರೈಲು ಮಾರ್ಗ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ನಿರ್ಧರಿಸಿದ್ದು, ಶೇ. 50ರಷ್ಟು ಕಾಮಗಾರಿ ವೆಚ್ಚ ಭರಿಸಲು ಒಪ್ಪಿಗೆ
  • ಆನಂದ್ ರಾವ್ ವೃತ್ತದಲ್ಲಿ ಸರ್ಕಾರಿ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ತರಲು 25 ಅಂತಸ್ತಿನ ಬಹುಮಹಡಿ ಅವಳಿ ಗೋಪುರವನ್ನು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಿರ್ಧಾರ
  • ಕೇಂದ್ರ ಸರ್ಕಾರದ ಭಾರತೀಯ ಒಳನಾಡು ಜಲ ಸಾರಿಗೆ ಪ್ರಾಧಿಕಾರ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲ ಸಾರಿಗೆ ನದಿಗಳಾದ ಕಾಳಿ, ಶರವಾತಿ, ಹಂಗಾರಕಟ್ಟೆ, ಗುರುಪುರ ಮತ್ತು ನೇತ್ರಾವತಿ ಜಲ ಸಾರಿಗೆ ಮಾರ್ಗ ಹಾಗೂ ದ್ವೀಪಗಳ ಅಭಿವೃದ್ಧಿಗಾಗಿ ಕಾರ್ಯಕ್ರಮ ಜಾರಿಗೆ ನಿರ್ಧಾರ
  • ಇನ್ನೋವೇಷನ್ ಹಬ್ ಸ್ಥಾಪನೆಗೆ 4 ಕೋಟಿ ರೂ. ಮೀಸಲು
  • ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದವರ ಆಶ್ರಯದಲ್ಲಿ ಕೃಷಿ ನಾವೀನ್ಯತಾ ಕೇಂದ್ರ ಸ್ಥಾಪನೆಗೆ 20 ಕೋಟಿ ರೂ. ಅನುದಾನ
  • ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಫ್ಲೂ ಗ್ಯಾಸ್ ಡಿಸಲ್ಫರೈಸೇಷನ್ ವ್ಯವಸ್ಥೆಯನ್ನು ಒಟ್ಟು 2510 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ನಿರ್ಧಾರ
  • ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 ಹೆಚ್​ಪಿವರೆಗಿನ ಪಂಪ್​​ಸೆಟ್‌ಗಳ ವಿದ್ಯುತ್ ಶುಲ್ಕ ಮರುಪಾವತಿಸಲು ಯೋಜನೆ ರೂಪಿಸಲು ನಿರ್ಧಾರ, 2020-21 ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿ ಪ್ರಚೋದನೆಗಾಗಿ ಒಟ್ಟು 55,732 ಕೋಟಿ ರೂ. ಅನುದಾನ
  • 2020-21ನೇ ವರ್ಷಕ್ಕೆ ಸರ್ಕಾರಿ ನೌಕರರ ವೇತನ, ಪಿಂಚಣಿ ಸೇರಿ ಒಟ್ಟು 10,000 ಕೋಟಿ ರೂ. ಹೆಚ್ಚಳ
  • 2019-20ನೇ ಸಾಲಿನಲ್ಲಿ ಸುಮಾರು 75,000 ಕೋಟಿ ರೂ. ಸರ್ಕಾರಿ ನೌಕರರ ವೇತನ, ಪಿಂಚಣಿ ಹೊರೆ
  • ಶಿಕ್ಷಣ ಇಲಾಖೆ - 29,768 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ - 27,952 ಕೋಟಿ ರೂ.
  • ಜಲಸಂಪನ್ಮೂಲ ಇಲಾಖೆ - 21,308 ಕೋಟಿ ರೂ.
  • ಇಂಧನ ಇಲಾಖೆ - 17,290 ಕೋಟಿ ರೂ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ - 15,595 ಕೋಟಿ ರೂ.
  • ಕಂದಾಯ ಇಲಾಖೆ - 11,860 ಕೋಟಿ ರೂ.
  • ಲೋಕೋಪಯೋಗಿ ಇಲಾಖೆ - 11,463 ಕೋಟಿ ರೂ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - 10,122 ಕೋಟಿ ರೂ.
  • ಒಳಾಡಳಿತ ಮತ್ತು ಸಾರಿಗೆ ಇಲಾಖೆ - 10,108 ಕೋಟಿ ರೂ.
  • ಸಮಾಜ ಕಲ್ಯಾಣ ಇಲಾಖೆ - 9,444 ಕೋಟಿ ರೂ.
  • ಕೃಷಿ ಮತ್ತು ತೋಟಗಾರಿಕೆ ಇಲಾಖೆ - 7,889 ಕೋಟಿ ರೂ.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ - 4,650 ಕೋಟಿ ರೂ.
  • ವಸತಿ ಇಲಾಖೆ - 2,971 ಕೋಟಿ ರೂ.
  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ - 2,68 ಕೋಟಿ ರೂ.
  • ಇತರೆ - 84,023 ಕೋಟಿ ರೂ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.