ಬೆಂಗಳೂರು: ಕೊರೊನಾ ಸಂಕಷ್ಟದಲ್ಲೂ ಭವಿಷ್ಯದ ಪರೀಕ್ಷೆ ಬರೆದಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಪ್ರಕಟಿಸಿದ್ದಾರೆ. ಮಲ್ಲೇಶ್ವರಂನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಲ್ಲಿ 2019-20ನೇ ಸಾಲಿನ ಫಲಿತಾಂಶವನ್ನು ಪ್ರಕಟಿಸಿದ ಅವರು, ಈ ಬಾರಿ ರ್ಯಾಂಕಿಂಗ್ ಸಿಸ್ಟಂ ಬದಲು ಗ್ರೇಡ್ ನೀಡಲಾಗಿದೆ ಎಂದರು.
ಕಳೆದ ಬಾರಿ ಶೇಕಡಾ 73.70% ಫಲಿತಾಂಶ ಬಂದಿತ್ತು, ಈ ಬಾರಿ 71.80 % ಬಂದಿದ್ದು ಕಳೆದ ವರ್ಷಕ್ಕಿಂತ ಶೇ. 2ರಷ್ಟು ಕಡಿಮೆ ಆಗಿದೆ. ಇನ್ನು ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗಾಗಿ 8,48,203 ನೋಂದಣಿ ಮಾಡಿದ್ದು, 1986 ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗಿಲ್ಲ. 8,11,050 ವಿದ್ಯಾಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಿದ್ದಾರೆ. 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 1867 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಎಸ್ಎಸ್ಎಲ್ಸಿ ಬೋರ್ಡ್ ನ ಅಧಿಕೃತ ವೆಬ್ಸೈಟ್
www.sslc.kar.nic.in , karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಮಧ್ಯಾಹ್ನ 3 ಗಂಟೆ ನಂತರ ಇಲಾಖೆ ವೆಬ್ ಸೈಟ್ನಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು, ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಸಂದೇಶವೂ ಬರಲಿದೆ. ನಾಳೆ ಬೆಳಗ್ಗೆ ಶಾಲೆಯಲ್ಲೂ ಪ್ರಕಟಗೊಳ್ಳಿದ್ದು, ಪ್ರಾವಿಷನ್ ಮಾರ್ಕ್ಸ್ ಕಾರ್ಡ್ ಕೂಡ ಕೊಡುತ್ತಾರೆ ಎಂದಿದ್ದಾರೆ.
625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳು
- ಶ್ರೀನಿಧಿ ಮಹಬಲೇಶ್ವರ ಹೆಗಡೆ- ಸರ್ಕಾರಿ ಮಾರಿಕಾಂಬ ಪಿಯು ಕಾಲೇಜು ಸಿರಸಿ
- ಚಿರಾಯು ಕೆ.ಎಸ್-ಸೈಂಟ್ ಮೇರಿ ಹೈಸ್ಕೂಲ್ ತುಮಕೂರು
- ನಿಖಿಲೇಶ್ ಎನ್ ಮರಲಿ-ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆ ಬೆಂಗಳೂರು
- ದೀರಜ್ ರೆಡ್ಡಿ ಎಂ.ಪಿ-ಶ್ರೀ ಸತ್ಯಸಾಯಿ ಸರಸ್ವತಿ ಆಂಗ್ಲ ಮಾಧ್ಯಮ ಹೈಸ್ಕೂಲ್ ಮಂಡ್ಯ ಜಿಲ್ಲೆ
- ಅನುಷ್ ಎ.ಎಲ್-ಕುಮಾರಸ್ವಾಮಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ವಿದ್ಯಾನಗರ್ ದಕ್ಷಿಣ ಕನ್ನಡ
- ತನ್ಮಯಿ ಐ.ಪಿ-ಸೈಂಟ್ ಜೋಸೆಫ್ ಕಾನ್ವೆಂಟ್ ಹೈಸ್ಕೂಲ್ ಚಿಕ್ಕಮಗಳೂರು
ಕಳೆದ ಬಾರಿ ಫಲಿತಾಂಶ(2018-2019)
ಮೊದಲ ಸ್ಥಾನ ಹಾಸನ- 89.33
ಎರಡನೇ ಸ್ಥಾನ- ರಾಮನಗರ- 88.49
ಮೂರನೇ ಸ್ಥಾನ-ಬೆಂಗಳೂರುಗ್ರಾಮಾಂತರ- 88.34
ಕೊನೆಯ ಸ್ಥಾನ- ಯಾದಗಿರಿ- 53.95
ಕೋವಿಡ್ ಸೋಂಕಿತ 33 ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಪರೀಕ್ಷೆಯನ್ನು ನಿರಾಕರಿಸಿಲಾಗಿತ್ತು. ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟಿವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯಿತಿ ನೀಡಲಾಗಿತ್ತು. ಈ ಎಲ್ಲರಿಗೂ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗಿದೆ.
ಲಿಂಗವಾರು ಫಲಿತಾಂಶ
ಬಾಲಕಿಯರು- 77.74%
ಬಾಲಕರು- 66.41
ಶಾಲಾವಾರು ಫಲಿತಾಂಶ
ಸರ್ಕಾರಿ- 72.79
ಅನುದಾನಿತ- 70.60
ಅನುದಾನ ರಹಿತ- 82.31
100ಕ್ಕೆ 100 ಅಂಕಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ
ವಿಷಯಗಳು-ಗರಿಷ್ಠ ಅಂಕಗಳು-ವಿದ್ಯಾರ್ಥಿಗಳು
ಪ್ರಥಮ ಭಾಷೆ- 8,995
ದ್ವಿತೀಯ ಭಾಷೆ-6,044
ತೃತೀಯ ಭಾಷೆ- 21,745
ಗಣಿತ - 1,796
ವಿಜ್ಞಾನ -910
ಸಮಾಜ ವಿಜ್ಞಾನ - 4,171
ನಗರ ಮತ್ತು ಗ್ರಾಮೀಣವಾರು ಫಲಿತಾಂಶ
ನಗರ- 73.41
ಗ್ರಾಮೀಣ- 77.18