ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 9,579 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 52 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
-
Karnataka reports 9,579 new #COVID19 cases, 2,767 discharges and 52 deaths
— ANI (@ANI) April 12, 2021 " class="align-text-top noRightClick twitterSection" data="
Total cases: 10,74,869
Total dicharges: 9,85,924
Active cases: 75,985
Total deaths: 12,941 pic.twitter.com/mHrnOjIpUN
">Karnataka reports 9,579 new #COVID19 cases, 2,767 discharges and 52 deaths
— ANI (@ANI) April 12, 2021
Total cases: 10,74,869
Total dicharges: 9,85,924
Active cases: 75,985
Total deaths: 12,941 pic.twitter.com/mHrnOjIpUNKarnataka reports 9,579 new #COVID19 cases, 2,767 discharges and 52 deaths
— ANI (@ANI) April 12, 2021
Total cases: 10,74,869
Total dicharges: 9,85,924
Active cases: 75,985
Total deaths: 12,941 pic.twitter.com/mHrnOjIpUN
ವಿವಿಧ ಆಸ್ಪತ್ರೆಗಳಿಂದ 2,767 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 9,85,924 ಜನರು ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 10,74,869 ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಇದರಲ್ಲಿ 75,985 ಸಕ್ರೀಯ ಪ್ರಕರಣಗಳಿದ್ದು, 470 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ ಸೋಂಕಿನಿಂದ ಇಲ್ಲಿಯವರೆಗೆ 12,941 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ವ್ಯಾಕ್ಸಿನ್ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದ ವೃದ್ಧನೊಂದಿಗೆ ಅನುಚಿತ ವರ್ತನೆ.. ವಿಡಿಯೋ!
ಬೆಂಗಳೂರಿನಲ್ಲಿ 6,387 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 40 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಬೀದರ್ನಲ್ಲಿ 465, ಕಲಬುರ್ಗಿಯಲ್ಲಿ 335, ಮೈಸೂರಿನಲ್ಲಿ 362, ತುಮಕೂರಿನಲ್ಲಿ 239, ಬೆಂಗಳೂರು ಗ್ರಾಮಾಂತರದಲ್ಲಿ 192 ಪ್ರಕರಣ ಕಾಣಿಸಿಕೊಂಡಿವೆ.
ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇ 8.24 ರಷ್ಟಿದ್ದು, ಮೃತರ ಪ್ರಮಾಣ ಶೇ. 0.54 ರಷ್ಟಿದೆ.ವಿಮಾನ ನಿಲ್ದಾಣದಿಂದ 3,311 ಪ್ರಯಾಣಿಕರನ್ನ ತಪಾಸಣೆಗೊಳಪಡಿಸಲಾಗಿದ್ದು, ಯುಕೆಯಿಂದ 182 ಪ್ರಯಾಣಿಕರು ಆಗಮಿಸಿದ್ದಾರೆ.