ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿರೋ ಯುವತಿಗೂ ಕರ್ನಾಟಕ ರಣಧೀರ ಪಡೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಸಂಘದಲ್ಲಿದ್ದ ಯುವತಿಯೊಬ್ಬರ ಭಾವಚಿತ್ರವನ್ನು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ನಮ್ಮ ಸಂಘದಲ್ಲಿದ್ದ ಯುವತಿನೇ ಸಿಡಿಯಲ್ಲಿರೋದು ಅಂತಾ ಹೇಳಲಾಗ್ತಿದೆ, ಇದು ಸುಳ್ಳು ಎಂದು ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ವೈರಲ್ ಆಗಿರೋ ಫೋಟೋದಲ್ಲಿರುವ ಯುವತಿ 2017ರಲ್ಲಿ ನಮ್ಮ ಸಂಘಕ್ಕೆ ಸೇರಿಕೊಂಡಿದ್ದರು. ಒಂದು ತಿಂಗಳು ಮಾತ್ರ ಆ ಯುವತಿ ಸಂಘದೊಂದಿಗೆ ಗುರುತಿಸಿಕೊಂಡಿದ್ದರು. ಆ ನಂತರದಲ್ಲಿ ಆಕೆ ನಮ್ಮ ಸಂಪರ್ಕದಲ್ಲಿಲ್ಲ. ಫೋಟೋದಲ್ಲಿ ವೈರಲ್ ಆಗಿರೋ ಯುವತಿಯನ್ನು ಸಂಪರ್ಕಿಸೋ ಕೆಲಸ ಮಾಡ್ತಿದ್ದೇವೆ. ನಮ್ಮ ಸಂಪರ್ಕಕ್ಕೆ ಯುವತಿ ಸಿಕ್ಕಿದರೆ ಜನರ ಮುಂದೆ ತರುತ್ತೇವೆ. ಆ ಸಿಡಿಯ ಯುವತಿಗೂ ನಮ್ಮ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ಷಡ್ಯಂತ್ರ ಮಾಡಿದವರನ್ನು ಮಟ್ಟಹಾಕೋದು ಖಚಿತ ಎಂದ ರಮೇಶ್ ಜಾರಕಿಹೊಳಿ