ಬೆಂಗಳೂರು: ಪೊಲೀಸರಿಗೆ ಸಾಂದರ್ಭಿಕ ರಜೆ ಕಡಿತಗೊಳಿಸಿರುವ ನಿರ್ಧಾರ ರದ್ದು ಕೋರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಪೊಲೀಸ್ ಮಹಾಸಂಘ ಪತ್ರ ಬರೆದು ಮನವಿ ಮಾಡಿದೆ.
ಈ ಹಿಂದಿನ ಮೈತ್ರಿ ಸರ್ಕಾರ ಪೊಲೀಸರಿಗೆ ನೀಡಲಾಗಿದ್ದ 15 ರಿಂದ 10ಕ್ಕೆ ಸಾಂದರ್ಭಿಕ ರಜೆ ಕಡಿತಗೊಳಿಸಿ ಆದೇಶಿಸಿತ್ತು. ಹಿಂದಿನ 10 ದಿನಕ್ಕೆ ರಜೆ ನಿಗದಿ ಪಡಿಸಿರುವ ಆದೇಶ ರದ್ದು ಮಾಡಬೇಕು ಮತ್ತೆ 15 ದಿನ ಸಾಂದರ್ಭಿಕ ರಜೆಗಳನ್ನು ಪೊಲೀಸರಿಗೆ ಮಂಜೂರು ಮಾಡಬೇಕು ಎಂದು ಮನವಿ ಪತ್ರದಲ್ಲಿ ಸಂಘದ ಅಧ್ಯಕ್ಷ ಶಶಿಧರ್ ಉಲ್ಲೇಖಿಸಿದ್ದಾರೆ.