ETV Bharat / state

ಕತಾರ್​​ನಿಂದ ರಾಜ್ಯಕ್ಕೆ ಮರಳುತ್ತಿರುವ ಕನ್ನಡಿಗರು... ಸರ್ಕಾರಕ್ಕೆ ಧನ್ಯವಾದ ಸಲ್ಲಿಕೆ

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್​​ಡೌನ್ ಜಾರಿಯಾದ ಪರಿಣಾಮ ಕನ್ನಡಿಗರು ವಿದೇಶಗಳಲ್ಲಿ ಸಿಲುಕಿ ತಾಯ್ನಾಡಿಗೆ ಮರಳಲು ಕಷ್ಟ ಪಡುತ್ತಿದ್ದರು. ಸದ್ಯ ತಾಯ್ನಾಡಿಗೆ ಭಾರತೀಯರು ಮರಳುವ ವ್ಯವಸ್ಥೆಯಾಗಿದ್ದು, ಆಗಮಿಸುತ್ತಿರುವ ಕನ್ನಡಿಗರು ಇಂಡಿಯನ್ ಎಂಬಸಿ, ಭಾರತ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

Karnataka people are returning home from Qatar
ಕತಾರ್​​ನಿಂದ ಮಾತೃಭೂಮಿಗೆ ಮರಳುತ್ತಿರುವ ಕನ್ನಡಿಗರು....ಸರ್ಕಾರಕ್ಕೆ ಧನ್ಯವಾದ ಸಮರ್ಪಣೆ
author img

By

Published : May 23, 2020, 11:31 AM IST

Updated : May 23, 2020, 11:50 AM IST

ದೇವನಹಳ್ಳಿ: ವಿದೇಶದಿಂದ ತಾಯ್ನಾಡಿಗೆ ಆಗಮಿಸುತ್ತಿರುವ ಕನ್ನಡಿಗರು ಇಂಡಿಯನ್ ಎಂಬಸಿ, ಭಾರತ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಕೊರೊನಾ ಮಹಾಮಾರಿಯಿಂದ ಪ್ರಪಂಚವೇ ತತ್ತರಿಸಿ ಹೋಗಿದ್ದು, ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್​​ಡೌನ್ ಜಾರಿಯಾದ ಪರಿಣಾಮ ಕನ್ನಡಿಗರು ವಿದೇಶಗಳಲ್ಲಿ ಸಿಲುಕಿ ತಾಯ್ನಾಡಿಗೆ ಮರಳಲು ಕಷ್ಟ ಪಡುತ್ತಿದ್ದರು. ಇದನ್ನರಿತ ಸರ್ಕಾರ ವಂದೇ ಭಾರತ್ ಮಿಷನ್ ಅಡಿಯಲ್ಲಿ ತಾಯ್ನಾಡಿಗೆ ಭಾರತೀಯರು ಮರಳುವ ವ್ಯವಸ್ಥೆ ಮಾಡಿದೆ.

ಕತಾರ್​​ನಿಂದ ರಾಜ್ಯಕ್ಕೆ ಮರಳುತ್ತಿರುವ ಕನ್ನಡಿಗರು... ಸರ್ಕಾರಕ್ಕೆ ಧನ್ಯವಾದ ಸಲ್ಲಿಕೆ

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೋಗಿ ಕತಾರ್​ನಲ್ಲಿ ನೆಲೆಸಿದ್ದ ಗರ್ಭಿಣಿಯರು, ವಯೋವೃದ್ಧರು, ಕಾಯಿಲೆಗಳಿಂದ ಬಳಲುತ್ತಿದ್ದವರು ಮಾತೃಭೂಮಿಗೆ ಬರಲು ಕಷ್ಟ ಪಡುತ್ತಿದ್ದರು. ಸದ್ಯ ತಾಯ್ನಾಡಿಗೆ ಮರಳಲು ವ್ಯವಸ್ಥೆಯಾಗಿದ್ದು, ಕತಾರ್​ನಲ್ಲಿ ಸಿಲುಕಿದ ಕನ್ನಡಿಗರನ್ನ ಹೊತ್ತ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ದೋಹಾದಲ್ಲಿ ವಿಮಾನ ಏರುವ ಮುನ್ನ ಮಾತನಾಡಿದ ಕನ್ನಡಿಗರು, ದೋಹಾ-ಬೆಂಗಳೂರು ನಡುವೆ ನೇರ ವಿಮಾನಯಾನ ಕಲ್ಪಿಸಿದ ಇಂಡಿಯನ್ ಎಂಬಸಿ, ಭಾರತ ಮತ್ತು ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.

ದೋಹಾದಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಮಾಡಲು ಕಾರಣಕರ್ತರಾದ ಎಲ್ಲಾ ಮಂತ್ರಿಗಳು, ಸಚಿವರು ಹಾಗೂ ಸ್ವಯಂ ಸೇವಾಕರ್ತರಿಗೂ ವಂದನೆಗಳನ್ನ ಅರ್ಪಿಸಿದರು. ಕತಾರ್‌ನಿಂದ ಸುಮಾರು 1,300 ಜನರು ಊರಿಗೆ ಬರಲು ನೋಂದಣಿ ಮಾಡಿಸಿಕೊಂಡಿದ್ದು, ಅವರಲ್ಲಿ ಕರ್ನಾಟಕ ಕರಾವಳಿಯವರೇ ಹೆಚ್ಚು. ಬೆಂಗಳೂರು, ಮೈಸೂರು, ಮಂಡ್ಯ ಮೂಲದವರು ಸೇರಿದಂತೆ ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಬೈಂದೂರಿನವರೆಗೆ ಹೋಗುವವರು ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನಯಾನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಅದರೆ ಅವರೆಲ್ಲಾ ನೇರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ವ್ಯವಸ್ಥೆ ಮಾಡಲಾಗಿದೆ.

ಈಗ ಬೆಂಗಳೂರಿಗೆ ವಿಮಾನಯಾನಕ್ಕೆ ತಾತ್ವಿಕ ಸಮ್ಮತಿಯಾಗಿದ್ದರೂ ಮಂಗಳೂರಿಗೆ ಆಗಿಲ್ಲ ಎನ್ನುವ ಕೊರಗು ಕತಾರ್‌ನಲ್ಲಿರುವ ಕರಾವಳಿ ಭಾಗದವರಿಗೆ ಇದೆ. ಕತಾರ್​​ನಲ್ಲಿರುವ ಕನ್ನಡಿಗರನ್ನು ಆದಷ್ಟು ಬೇಗ ಭಾರತಕ್ಕೆ ಕರೆ ತರಲು ಕೇಂದ್ರ ಸಚಿವ‌ ಡಿ.ವಿ.ಸದಾನಂದಗೌಡ, ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಮಂಗಳೂರಿಗೆ‌ ಕತಾರ್​ನಿಂದ ನೇರ ವಿಮಾನ‌ ವ್ಯವಸ್ಥೆ ಮಾಡುವಂತೆ ಕರಾವಳಿ ಭಾಗದವರು ಬೇಡಿಕೆ ಇಟ್ಟಿದ್ದಾರೆ.

Last Updated : May 23, 2020, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.