ETV Bharat / state

ಬಾಲ್ಯ ವಿವಾಹದಲ್ಲಿ ಕರ್ನಾಟಕಕ್ಕೆ ನಂಬರ್-1 ಸ್ಥಾನ: ಸದನದಲ್ಲಿ ಒಪ್ಪಿಕೊಂಡ ಸರ್ಕಾರ - ಕ್ರೈಮ್ ಇನ್ ಇಂಡಿಯಾ-2020 ವರದಿ

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಮಿನಿಸ್ತ್ರಿ ಆಫ್ ಹೋಮ್ ಅಫೇರ್ಸ್ ಅವರ ಕ್ರೈಮ್ ಇನ್ ಇಂಡಿಯಾ-2020 ವರದಿ ಅನುಸಾರ ಕರ್ನಾಟಕದಲ್ಲಿ 184 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ.

karnataka-is-no-1-in-child-marriage-government-says-in-council-session
ಬಾಲ್ಯ ವಿವಾಹದಲ್ಲಿ ಕರ್ನಾಟಕಕ್ಕೆ ನಂಬರ್-1 ಸ್ಥಾನ: ಸದನದಲ್ಲಿ ಒಪ್ಪಿಕೊಂಡ ಸರ್ಕಾರ
author img

By

Published : Mar 23, 2022, 7:37 AM IST

ಬೆಂಗಳೂರು: ಬಾಲ್ಯವಿವಾಹಗಳಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 2020-21ರಲ್ಲಿ 296 ಬಾಲ್ಯವಿವಾಹ ಪ್ರಕರಣಗಳು ರಾಜ್ಯದಲ್ಲಿ ನಡೆದಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಬಾಲ್ಯ ವಿವಾಹ ತಡೆಯುವ ಪ್ರಕರಣ ತಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸುವುದಾಗಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೆ. ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಮಿನಿಸ್ತ್ರಿ ಅಫ್ ಹೋಮ್ ಅಫೇರ್ಸ್ ಅವರ ಕ್ರೈಮ್ ಇನ್ ಇಂಡಿಯಾ-2020 ವರದಿ ಅನುಸಾರ ಕರ್ನಾಟಕದಲ್ಲಿ 184 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಉಳಿದ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ವರದಿಯಾಗಿವೆ ಎಂದು ಮಾಹಿತಿ ನೀಡಿದರು.

2018-19ರಲ್ಲಿ 119, 2019-20ರಲ್ಲಿ 156,‌ 2020-21ರಲ್ಲಿ 296 ಬಾಲ್ಯವಿವಾಹ ಪ್ರಕರಣಗಳು ರಾಜ್ಯದಲ್ಲಿ ನಡೆದಿದೆ. ರಾಜ್ಯದ ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ ಉಳಿದ 29 ಜಿಲ್ಲೆಯಲ್ಲಿಯೂ ಬಾಲ್ಯವಿವಾಹ ನಡೆದ ಪ್ರಕರಣಗಳು ವರದಿಯಾಗಿವೆ. ಕಳೆದ ಮೂರು ವರ್ಷಗಳಲ್ಲಿ 571 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿದೆ. ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕೊರೊನಾ ವೇಳೆ ಇದು ದ್ವಿಗುಣಗೊಂಡಿದೆ ಎಂಬುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ. ಆದರೂ ಬಾಲ್ಯ ವಿವಾಹ ತಡೆಯುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ, ಸಮಾಜದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.

ತೃತೀಯ ಲಿಂಗಿಗಳ ಅಭಿವೃದ್ಧಿಗೆ ಸಮಿತಿ ರಚನೆ: ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ತೃತೀಯ ಲಿಂಗಿಗಳನ್ನೊಳಗೊಂಡಂತೆ ತಜ್ಞರ ಸಮಿತಿ ರಚಿಸುತ್ತೇವೆ ಎಂದು
ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ಪ್ರಕಟಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೃತೀಯ ಲಿಂಗಿಗಳ ಸರ್ವೆ ಆಗಬೇಕಿತ್ತು, ಆದರೆ ಆಗಿಲ್ಲ. ಆ ಸಮುದಾಯದ ಸದಸ್ಯರನ್ನು ಕರೆದು ಸಭೆ ಮಾಡುತ್ತೇವೆ ಎಂದರು.

ಕರ್ನಾಟಕ ರಾಜ್ಯ ಟ್ರಾನ್ಸ್​ಜೆಂಡರ್ಸ್ ನೀತಿ 2017ರನ್ವಯ ವಿವಿಧ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ತೃತೀಯ ಲಿಂಗಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಎಲ್ಲ ಇಲಾಖೆಗಳನ್ನು ಕೋರಲಾಗಿದೆ. ಅವರ ಅಭಿವೃದ್ಧಿಗಾಗಿ ಸಮಿತಿ ರಚಿಸಬೇಕು ಎನ್ನುವ ಬೇಡಿಕೆ ಇದೆ, ಹಾಗಾಗಿ ತೃತೀಯ ಲಿಂಗಿಗಳನ್ನೊಳಗೊಂಡಂತೆ ತಜ್ಞರ ಸಮಿತಿ ರಚಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಸಿಎಸ್​​ಆರ್ ಫಂಡ್ ಖರ್ಚು ಮಾಡದೆ ಲೆಕ್ಕ ತೋರಿಸಲಾಗುತ್ತೆ: ಕೆಲವು ಕಂಪನಿಗಳು ಸಿಎಸ್​​ಆರ್ ಫಂಡ್ ಶೇ. 2ರಷ್ಟು ಖರ್ಚು ಮಾಡುತ್ತಾರೆ, ಕೆಲವರು ಖರ್ಚು ಮಾಡುವುದಿಲ್ಲ, ಅವರು ನಮಗೆ ಮಾಹಿತಿ ನೀಡುವುದಿಲ್ಲ. ನೇರವಾಗಿ ಐಟಿ ಇಲಾಖೆಗೆ ರಿಟರ್ನ್ ಸಲ್ಲಿಸುತ್ತಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೆ.ಟಿ. ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 60 ಸಾರ್ವಜನಿಕ ಉದ್ದಿಮೆಗಳಿವೆ, 34 ಉದ್ದಿಮೆಗಳು ಲಾಭದಲ್ಲಿದೆ, 24 ಉದ್ದಿಮೆಗಳು ನಿಷ್ಕ್ರಿಯಗೊಂಡಿವೆ. ಸಾರ್ವಜನಿಕ ಉದ್ದಿಮೆಯ ಪ್ರಗತಿ ವರದಿ ಮಂಡಿಸುತ್ತಿದ್ದೇವೆ. ಮೌಲ್ಯಮಾಪನ ಸಹ ನಡೆಸುತ್ತಿದ್ದೇವೆ. ಸಿಎಸ್​​ಆರ್ ಫಂಡ್ ಶೇ. 2ರಷ್ಟು ಕೊಡಬೇಕು ಎಂಬ ಕೇಂದ್ರದ ಸೂಚನೆ ಇದೆ, ಸ್ಥಳೀಯ ಜನರ ಬೇಡಿಕೆಗೆ ಅನುಗುಣವಾಗಿ ಹಣ ಖರ್ಚು ಮಾಡಬೇಕೆಂದು ನಿಯಮ ಇದೆ. ಇದಕ್ಕೆ ಪ್ರತ್ಯೇಕ ನೀತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ಆಕಾಶದಿಂದ ಇಳಿದು ಬಂದಂತೆ ವರ್ತಿಸುತ್ತಾರೆ: ಅರಣ್ಯ ಇಲಾಖೆ ಅಧಿಕಾರಿಗಳು ಆಕಾಶದಿಂದ ಇಳಿದು ಬಂದ ರೀತಿ ವರ್ತಿಸುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಕಿಡಿಕಾರಿದ ಘಟನೆ ವಿಧಾನಪರಿಷತ್​ನಲ್ಲಿ ನಡೆಯಿತು.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಅನಿಲ್ ಕುಮಾರ್ ಅವರು ಎಪಿಎಂಸಿ ಮಾರುಕಟ್ಟೆಗೆ ಸ್ಥಳದ ಅಭಾವ ಇದೆ. ಈಗ ಬೇರೆ ಕಡೆ ಜಾಗ ಗುರುತಿಸಿದ್ದಾರೆ. ಆದರೆ, ಅದು ಅರಣ್ಯ ಭೂಮಿ ಆಗಿರುವುದರಿಂದ ಸಮಸ್ಯೆ ಇದೆ ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯ ಇಲಾಖೆಗೆ ಕಂದಾಯ ಇಲಾಖೆಯ ಜಮೀನು ಕೊಡಲು ಜಿಲ್ಲಾಧಿಕಾರಿ ತಯಾರಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಕ್ಲಾರಿಫಿಕೇಷನ್ ಕೇಳಿದ್ದಾರೆ, ಅದನ್ನು ಡಿಸಿ ಒದಗಿಸಿದ್ದಾರೆ. ಕೇಂದ್ರ ಅರಣ್ಯ ಇಲಾಖೆಗೆ ಕಳುಹಿಸಿ ಅಲ್ಲಿ ಒಪ್ಪಿಗೆ ಪಡೆಯಲು ಪ್ರಯತ್ನ ಮಾಡುತ್ತಿದ್ದೇವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಆಕಾಶದಿಂದ ಇಳಿದು ಬಂದ ರೀತಿಯಲ್ಲಿ ವರ್ತಿಸುತ್ತಾರೆ. ಏನಾದರೂ ಒಂದು ಕ್ವೇರಿ ಹಾಕ್ತಾರೆ ಎಂದರು.

ಇದನ್ನೂ ಓದಿ: 45 ವರ್ಷದ ವ್ಯಕ್ತಿ ಜೊತೆ 16ರ ಬಾಲೆಯ ಮದುವೆ, ಹೆಣ್ಣು ಮಗುವಿಗೆ ಜನ್ಮ; 22 ವರ್ಷದ ಯುವಕನೊಂದಿಗೆ ಪರಾರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.