ETV Bharat / state

ಹಿಜಾಬ್​ ಕೇಸ್​ ಈ ವಾರವೇ ಇತ್ಯರ್ಥಪಡಿಸೋಣ ಎಂದ ಹೈಕೋರ್ಟ್: ಸರ್ಕಾರ, ಕಾಲೇಜು ಆಡಳಿತ ಮಂಡಳಿ ವಾದಿಸಿದ್ದೇನು..? - ಹಿಜಾಬ್ ವಿವಾದ ಶೀಘ್ರವೇ ಪ್ರಕರಣ ಇತ್ಯರ್ಥ

Hijab row hearing in high court.. ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ರೇಷಮ್ ಹಾಗೂ ಇತರರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಅವರಿದ್ಧ ತ್ರಿಸದಸ್ಯ ಪೀಠ ಆಲಿಸಿತು.

ಹೈಕೋರ್ಟ್
ಹೈಕೋರ್ಟ್
author img

By

Published : Feb 22, 2022, 6:04 PM IST

ಬೆಂಗಳೂರು: ಹಿಜಾಬ್ ಧರಿಸುವುದನ್ನು ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಇಂದು ಕೂಡ ಹೈಕೋರ್ಟ್ ವಿಚಾರಣೆ ನಡೆಸಿತು.

ಈ ಕುರಿತಂತೆ ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ರೇಷಮ್ ಹಾಗೂ ಇತರರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಅವರಿದ್ಧ ತ್ರಿಸದಸ್ಯ ಪೀಠ ಆಲಿಸಿತು.

ಶೀಘ್ರವೇ ಪ್ರಕರಣ ಇತ್ಯರ್ಥ : ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ಪ್ರಕರಣವನ್ನು ಮತ್ತೊಂದು ವಾರ ಎಳೆದುಕೊಂಡು ಹೋಗುವುದು ಬೇಡ. ಅರ್ಜಿದಾರರು ಹಾಗೂ ಪ್ರತಿವಾದಿಗಳು ತಮ್ಮ ವಾದವನ್ನು ಕ್ಷಿಪ್ರವಾಗಿ ಮಂಡಿಸಿ. ಹಾಗೆಯೇ, ಲಿಖಿತ ಆಕ್ಷೇಪಣೆಗಳನ್ನು ತ್ವರಿತವಾಗಿ ಸಲ್ಲಿಸಿ. ಸಾಧ್ಯವಾದರೆ ಈ ವಾರವೇ ಈ ಕುರಿತಂತೆ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಪಡಿಸೋಣ ಎಂದರು.

ಸರ್ಕಾರದ ಪರ ವಾದ ಪೂರ್ಣಗೊಳಿಸಿದ ಎಜಿ : ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಹಿಜಾಬ್ ಕುರಿತಂತೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಶಿಕ್ಷಣ ಸಂಸ್ಥೆಗಳಿಗೇ ಈ ವಿಚಾರ ನಿರ್ಧರಿಸಲು ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಶಾಲೆಯ ಒಳಗೆ ಹಿಜಾಬ್ ಧರಿಸದಂತೆ ಹೇಳಿವೆಯೇ ಹೊರತು, ಹೊರಗೆ ಅಲ್ಲ. ಶಾಲೆವರೆಗೂ ಹಾಕಿಕೊಂಡು ಬರಲು ಅಭ್ಯಂತರವಿಲ್ಲ. ಸಾಂಸ್ಥಿಕ ಶಿಸ್ತುಗಳನ್ನು ಪಾಲಿಸುವ ಸಂದರ್ಭದಲ್ಲಿ ವೈಯಕ್ತಿಕ ಆಚರಣೆಗಳಿಗೆ ಅವಕಾಶವಿರುವುದಿಲ್ಲ ಎಂದು ವಿವರಿಸಿದರು. ಇದಕ್ಕೆ ಪೂರಕವಾಗಿ ಕೆಲ ತೀರ್ಪುಗಳನ್ನು ಉಲ್ಲೇಖಿಸಿದರು.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಆದೇಶಿಸಿಲ್ಲ. ಇದೇ ವೇಳೆ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿರುವ ಕ್ರಮ ಸರಿಯಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಕುರಿತು ಪ್ರಸ್ತಾಪಿಸಿದ ಎಜಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳೇ ವಸ್ತ್ರ ಸಂಹಿತೆ ನಿಗದಿ ಮಾಡಲು ಹೇಳಿದ್ದೇವೆಯೇ ಹೊರತು, ಸರ್ಕಾರ ಸಮವಸ್ತ್ರ ನಿಗದಿಪಡಿಸಿಲ್ಲ ಎಂದರು. ವಾದ ಆಲಿಸಿದ ಪೀಠ, ಈ ಕುರಿತಂತೆ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿತು.

ಅಭಿವ್ಯಕ್ತಿ ಸ್ವಾತಂತ್ರ್ಯ : ಹಿಜಾಬ್ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವಿಚಾರವಾಗಿ ವಾದ ಮಂಡಿಸಿದ ಎಜಿ, ಅರ್ಜಿದಾರರು ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆ ಎಂದು ವಿಧಿ 25ನ್ನು ಉಲ್ಲೇಖಿಸುತ್ತಾರೆ. ಇದೇ ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಹೇಳುತ್ತಾರೆ. ಕೆಲವರು ಹಿಜಾಬ್ ಧರಿಸಲು ಇಷ್ಟಪಡದಿರಬಹುದು. ಈ ವೇಳೆ ವಿಧಿ 25ರಡಿ ಕಡ್ಡಾಯ ಧಾರ್ಮಿಕ ಆಚರಣೆ ಎಂದರೆ ಅದು 19(1)(ಎ) ಅಡಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗುತ್ತದೆ. ಮಹಿಳೆಯ ಘನತೆಯನ್ನು ಗೌರವಿಸುತ್ತೇವೆ. ಹೀಗಾಗಿ, ಹಿಜಾಬ್ ಧರಿಸುವುದನ್ನು ಮಹಿಳೆಯ ಆಯ್ಕೆಗೆ ಬಿಡಬೇಕು. ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ವಾದ ಪೂರ್ಣಗೊಳಿಸಿದರು.

ಶಿಕ್ಷಣದಲ್ಲಿ ಶಿಸ್ತು ತರಲು ಸಮವಸ್ತ್ರ ಸಂಹಿತೆ ಬೇಕು : ಉಡುಪಿಯ ಪಿಯು ಶಿಕ್ಷಕರ ಪರ ಹಿರಿಯ ವಕೀಲ ಆರ್. ವೆಂಕಟರಮಣಿ ವಾದ ಮಂಡಿಸಿ, ನಮ್ಮ ದೇಶಕ್ಕೆ ಬಹುದೊಡ್ಡ ಸಾಂಸ್ಕೃತಿಕ ಹಿನ್ನೆಲೆ ಇದೆ. ಯಾವುದೇ ಧರ್ಮ ದೊಡ್ಡದು ಅಥವಾ ಚಿಕ್ಕದು ಎಂಬುದಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಸ್ವತಂತ್ರ ಪ್ರಜ್ಞೆ ಇರಬೇಕು. ಸಾರ್ವಜನಿಕ ಪ್ರದೇಶಕ್ಕೂ ಶಾಲೆಯ ವಾತಾವರಣಕ್ಕೂ ವ್ಯತ್ಯಾಸವಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ಉದ್ದೇಶಕ್ಕಾಗಿ ಶಿಸ್ತು, ಸುವ್ಯವಸ್ಥೆ ಪಾಲಿಸಬೇಕು. ಸಂವಿಧಾನದ ವಿಧಿ 25(1) ರಂತೆ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯದ ವಿಚಾರ ಬಂದಾಗ ಸರ್ಕಾರ ಧಾರ್ಮಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸಬಹುದು ಎಂದಿದೆ.

ಇದನ್ನೂ ಓದಿ : ರಾಜಕಾರಣದ ಮುಸುಕು ಕಾಂಗ್ರೆಸ್ ಮುಖದ ಮೇಲೆ ಬಿದ್ದಿದೆ, ಅವರಿಗೆ ಭವಿಷ್ಯ ಇಲ್ಲ: ಸಿಎಂ

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ತರಲು ಅವುಗಳದ್ದೇ ನಿಯಮಗಳನ್ನು ಹೊಂದಿರುತ್ತವೆ. ಕುರಾನ್ ನಲ್ಲಿರುವ ಅಂಶಗಳ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿನ ಆಚರಣೆಗಳನ್ನು ಶಿಕ್ಷಣ ಸಂಸ್ಥೆಗಳ ಒಳಗೂ ಆಚರಿಸುತ್ತೇವೆ ಎನ್ನುವುದು ಸರಿಯಲ್ಲ. ಶಾಲೆಗಳ ಒಳಗೆ ಧಾರ್ಮಿಕ ಆಚರಣೆಗಳಿಗೆ ಆವಕಾಶವಿಲ್ಲ. ಇಲ್ಲಿ ಯಾರ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ. ನ್ಯಾಯಾಲಯಗಳು ಹಕ್ಕುಗಳ ಉಲ್ಲಂಘನೆಯಾದಾಗ ಮಾತ್ರವೇ ಮಧ್ಯಪ್ರವೇಶಿಸಬಹುದು. ಆಡಳಿತ ಹೇಗೆ ನಡೆಸಬೇಕು ಎಂಬ ವಿಚಾರಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಮನವಿ ಮಾಡಿದರು.

ಶಿಕ್ಷಣ ಸಂಸ್ಥೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್,ಎಸ್ ನಾಗಾನಂದ್, ಕಡ್ಡಾಯ ಧಾರ್ಮಿಕ ಆಚರಣೆಗೂ, ಸಂಪ್ರದಾಯಗಳಿಗೂ ವ್ಯತ್ಯಾಸವಿದೆ. ಹಿಂದೂ ಧರ್ಮದಲ್ಲಿ ಕೆಲವು ಸಮುದಾಯದಲ್ಲಿ ತಾಳಿ ಬಳಸುವುದಿಲ್ಲ. ಕೆಲವು ಕಡೆ ಕಾಲುಂಗುರ ಧರಿಸುವುದಿಲ್ಲ. ಮತ್ತೆ ಕೆಲವು ಸಮುದಾಯದ ಮದುವೆಗಳಲ್ಲಿ ಸಪ್ತಪದಿ ತುಳಿಯುವುದಿಲ್ಲ. ಅಂತೆಯೇ, ಹಿಜಾಬ್ ಕೂಡ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ. ಸಂಪ್ರದಾಯದ ರೂಪದಲ್ಲಿ ಬಂದಿರುವುದಷ್ಟೇ. ಧಾರ್ಮಿಕ ಆಚರಣೆಗಳು ಹಾಗೂ ಸಂಪ್ರದಾಯಗಳನ್ನು ನಾವು ಗೌರವಿಸುತ್ತೇವೆ. ಹಾಗೆಂದು ಅವನ್ನು ಎಲ್ಲೆಡೆ ಆಚರಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ.

ಬ್ರಾಹ್ಮಣ ಸಮುದಾಯದಲ್ಲಿ ದಿನದಲ್ಲಿ ಮೂರು ಬಾರಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ವಕೀಲರಾದವರು ಕೋರ್ಟ್ ವಿಚಾರಣೆ ನಡುವೆವೂ ಪ್ರಾರ್ಥನೆ ಸಲ್ಲಿಸಲು ಮುಂದಾಗಬಹುದೇ. ಈ ವೇಳೆ ನ್ಯಾಯಾಲಯ ಒಪ್ಪಲಿಲ್ಲವೆಂದು ನನ್ನ ಧಾರ್ಮಿಕ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಬಹುದೇ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.