ETV Bharat / state

High Court: ಪ್ರೀತಿಸುವಾಗ ವಿವಾಹ ಆಗುವುದಾಗಿ ಹೇಳಿ ಬಳಿಕ ಮದುವೆಯಾಗದಿದ್ದರೆ ವಂಚನೆ ಆರೋಪದಲ್ಲಿ ಶಿಕ್ಷಿಸಲಾಗದು: ಹೈಕೋರ್ಟ್ - ಹೈಕೋರ್ಟ್

ಪ್ರೀತಿಸುವ ಸಂದರ್ಭದಲ್ಲಿ ಮದುವೆ ಆಗುವುದಾಗಿ ಯುವತಿಗೆ ಭರವಸೆ ನೀಡಿ, ಬಳಿಕ ವಿವಾಹವಾಗದ ವ್ಯಕ್ತಿಯನ್ನು ವಂಚನೆ ಆರೋಪದ ಮೇಲೆ ಶಿಕ್ಷೆಗೆ ಗುರಿಪಡಿಸಲಾಗದು ಎಂದು ಹೈಕೋರ್ಟ್ ಹೇಳಿದೆ.

karnataka-high-court-quashed-trial-court-order-in-love-fraud-case
ಪ್ರೀತಿಸುವಾಗ ವಿವಾಹ ಆಗುವುದಾಗಿ ಹೇಳಿ ಬಳಿಕ ಮದುವೆಯಾಗದಿದ್ದರೆ ವಂಚನೆ ಅಲ್ಲ: ಹೈಕೋರ್ಟ್
author img

By

Published : Jul 1, 2023, 5:29 PM IST

Updated : Jul 1, 2023, 5:39 PM IST

ಬೆಂಗಳೂರು : ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ವಿವಾಹ ಆಗುವುದಾಗಿ ಭರವಸೆ ನೀಡಿ ಬಳಿಕ ಮದುವೆಯಾಗದ ವ್ಯಕ್ತಿಯೊಬ್ಬರನ್ನು ವಂಚನೆ ಆರೋಪದಲ್ಲಿ ಶಿಕ್ಷೆಗೆ ಗುರಿಪಡಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ಆರೋಪಿಯು ಸಂತ್ರಸ್ತೆ ಎಂದಿರುವವರಿಗೆ ಪ್ರೀತಿಸುವ ಸಂದರ್ಭದಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಇದಾದ ಬಳಿಕ ಇಬ್ಬರ ನಡುವಿನ ಸಂಬಂಧ ದೂರವಾಗಿದೆ. ಈ ಪ್ರಕ್ರಿಯೆಯನ್ನು ವಂಚನೆ (ಐಪಿಸಿ 415) ಆರೋಪದಲ್ಲಿ ವ್ಯಾಪ್ತಿಗೆ ತರಲಾಗುವುದಿಲ್ಲ. ಅಲ್ಲದೆ, ಅರ್ಜಿದಾರರನ್ನು ವಂಚನೆ ಆರೋಪದಲ್ಲಿ (ಐಪಿಸಿ 417) ಅಪರಾಧಿ ಎಂದು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಜೊತೆಗೆ, ಪ್ರಸ್ತುತ ಪ್ರಕರಣದಲ್ಲಿ ವಯಸ್ಕರಾದ ಸಂತ್ರಸ್ತೆ ಮತ್ತು ಅರ್ಜಿದಾರರು ಒಟ್ಟಾಗಿ ತಿರುಗಾಡಿದ್ದಾರೆ. ಅಲ್ಲದೇ, ಮದುವೆಯಾಗುವುದಾಗಿ ಒಪ್ಪಿಕೊಂಡು ಬಳಿಕ ಮದುವೆ ಆಗುವುದಕ್ಕೆ ಸಾಧ್ಯವಾಗಿಲ್ಲ. ಇದನ್ನು ಐಪಿಸಿ ಸೆಕ್ಷನ್ 415ರ ಪ್ರಕಾರ ಮೋಸ ಎಂದು ಪರಿಗಣಿಸಲಾಗದು. ಹೀಗಾಗಿ ಮೇಲ್ಮನವಿದಾರನನ್ನು ವಂಚನೆ ಆರೋಪದಲ್ಲಿ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ಅಲ್ಲದೇ, ಮೇಲ್ಮವಿದಾರ ಸಂತ್ರಸ್ತೆಗೆ ವಂಚನೆ ಮಾಡಿದ್ದಾರೆ ಎಂಬುದರ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್​, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ಆರೋಪಿತ ಯುವಕ ಮತ್ತು ಯುವತಿಯು ಸ್ಪೋಕನ್ ಇಂಗ್ಲಿಷ್​ ಕೋರ್ಸ್​​ಗೆ ಹೋಗುವ ಸಂದರ್ಭದಲ್ಲಿ ಪರಿಚಯವಾಗಿದ್ದು, ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಯುವತಿಯನ್ನು ಮದುವೆ ಆಗುವುದಾಗಿ ಹಲವು ಸಲ ತಿಳಿಸಿದ್ದ. ಈ ನಡುವೆ ಇಬ್ಬರೂ ಒಂದೇ ಜಾತಿಗೆ ಸೇರಿದ್ದು, ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದ ಆರೋಪಿ, ಆಕೆಯ ತಾಯಿಯ ಬಳಿಯ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು.

ಇಬ್ಬರೂ ಮೈಸೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸುತ್ತಾಡಿದ್ದರು. ಈ ನಡುವೆ ಇಬ್ಬರೂ ಜ್ಞಾನಭಾರತಿ ವ್ಯಾಪ್ತಿಯಲ್ಲಿ ದೈಹಿಕ ಸಂಪರ್ಕವನ್ನೂ ನಡೆಸಿದ್ದರು. ಈ ಸಂದರ್ಭದಲ್ಲಿ ಸಂತ್ರಸ್ತೆ ಯಾವುದೇ ದೂರು ನೀಡಿರಲಿಲ್ಲ. ಇದಾದ ನಂತರ ಯುವಕ ಹಾಗೂ ಯುವತಿ ದೂರವಾಗುತ್ತಿದ್ದರು. ಅಲ್ಲದೆ, ಮದುವೆಯಾಗಲು ನಿರಾಕರಿಸಿದ್ದರು. ಈ ಸಂದರ್ಭದಲ್ಲಿ ಯುವತಿಯು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿ, ಮದುವೆಯಾಗುವುದಾಗಿ ವಂಚಿಸಿರುವುದಾಗಿ ಆರೋಪಿಸಿದ್ದರು. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ, ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ನಿರಪರಾಧಿ ಎಂದು ಪ್ರಕಟಿಸಿತ್ತು. ಆದರೆ, ವಂಚನೆ ಆರೋಪದಲ್ಲಿ ಅಪರಾಧಿ ಎಂದು ಘೋಷಣೆ ಮಾಡಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿತ ಯುವಕ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಇದೀಗ ಮೇಲ್ಮನವಿದಾರರ ಮೇಲಿದ್ದ ವಂಚನೆ ಪ್ರಕರಣವನ್ನು ರದ್ದುಪಡಿಸಿ ನಿರಪರಾಧಿ ಎಂದು ಪ್ರಕಟಿಸಿದೆ.

ಇದನ್ನೂ ಓದಿ: ಮಾದಕ ವಸ್ತುಗಳ ಮಾರಾಟ ಪ್ರಕರಣ: ಕೇರಳ ಮೂಲದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Last Updated : Jul 1, 2023, 5:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.