ETV Bharat / state

ಉದ್ಯಮಿ ಆದಿಕೇಶವುಲು ಆಪ್ತನ ಅನುಮಾನಾಸ್ಪದ ಸಾವು: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ - ಈಟಿವಿ ಭಾರತ್ ಕನ್ನಡ

ಪ್ರಸಿದ್ಧ ಉದ್ಯಮಿ ಆದಿಕೇಶವುಲು ಆಪ್ತನ ಅನುಮಾನಾಸ್ಪಾದ ಸಾವು ಪ್ರಕರಣ ಸಿಬಿಐ ತನಿಖೆಗೆ. ಕರ್ನಾಟಕ ಹೈಕೋರ್ಟ್ ಆದೇಶ

ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
author img

By

Published : Sep 8, 2022, 7:45 PM IST

ಬೆಂಗಳೂರು: ಪ್ರಸಿದ್ಧ ಉದ್ಯಮಿ ಆದಿಕೇಶವುಲು ಆಪ್ತ ರಘುನಾಥ್ ಅನುಮಾನಾಸ್ಪಾದ ಸಾವು ಪ್ರಕರಣದ ಬಗ್ಗೆ ಸಿಬಿಐ ತನಿಖೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ಮಾಡಿದೆ. ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮೃತರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗುರುವಾರ ಈ ಆದೇಶ ನೀಡಿದೆ. ಮುಂದಿನ 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಿದೆ.

ಉದ್ಯಮಿ ಆದಿಕೇಶವುಲು ಆಪ್ತ ರಘುನಾಥ್ ಅನುಮಾನಾಸ್ಪಾದ ಸಾವು: ಮೃತರ ಕುಟುಂಬಸ್ಥರು ನ್ಯಾಯ ಸಮ್ಮತ ತನಿಖೆ ಬಯಸುತ್ತಾರೆ. ಆದರೆ ಆರೋಪಿ ಪ್ರಭಾವಿಯಾಗಿದ್ದಾರೆ. ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುವ ಆರೋಪವಿದೆ. ಬಿ ರಿಪೋರ್ಟ್ ಸಲ್ಲಿಸಿರುವುದರಿಂದ ಮತ್ತೆ ಎಸ್ಐಟಿ ತನಿಖೆ ಬೇಕಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸುವುತ್ತಿರುವುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದಿಕೇಶವುಲು 2013 ಏ.24 ರಂದು ಮೃತಪಟ್ಟಿದ್ದರು. ಅವರ ಆಪ್ತರಾಗಿದ್ದ ರಘುನಾಥ್ ಹೆಸರಿನಲ್ಲಿ ಆಸ್ತಿ ಮಾಡಲಾಗಿತ್ತು ಎಂಬ ಗುಮಾನಿಯಿತ್ತು. ಈ ನಡುವೆ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ಅವರಿಂದ ಆಸ್ತಿ ವರ್ಗಾಯಿಸಲು ರಘುನಾಥ್ ಮೇಲೆ ಒತ್ತಡ ಮಾಡಿದ ಆರೋಪವಿತ್ತು.

2016 ರಲ್ಲಿ ರಘುನಾಥ್ ಅವರು ಪತ್ನಿ ಮಂಜುಳಾ ಹೆಸರಿಗೆ ಆಸ್ತಿಯ ವಿಲ್ ಬರೆದಿದ್ದರು‌. ಈ ನಡುವೆ 2019ರ ಮೇ 4 ರಂದು ರಘುನಾಥ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2020ರ ಫೆ.15 ರಂದು ರಘುನಾಥ್ ಪ್ರಕರಣವನ್ನು ಕೊಲೆ ಎಂಬುದಾಗಿ ಶಂಕಿಸಿ ಅವರ ಪತ್ನಿ ಮಂಜುಳಾ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಆರೋಪದಲ್ಲಿ ಹುರುಳಿಲ್ಲ ಎಂದು ವರದಿ ಸಲ್ಲಿಸಿತ್ತು. ಅಲ್ಲದೆ, ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಮುಕ್ತಾಯಗೊಳಿಸಿತ್ತು. ಎಸ್ಐಟಿ ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಪತ್ನಿ ಮಂಜುಳಾ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

(ಇದನ್ನೂ ಓದಿ: ಬಿಎಸ್​​​ವೈ ವಿರುದ್ಧದ ಭ್ರಷ್ಟಾಚಾರ ಕೇಸ್​.. ವಿಚಾರಣೆ ನಡೆಸುವಂತೆ ವಿಶೇಷ ಕೋರ್ಟ್​ಗೆ ಹೈಕೋರ್ಟ್ ನಿರ್ದೇಶನ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.