ETV Bharat / state

8 ಹೊಸ ತಾಲೂಕುಗಳಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಪ್ರಾರಂಭಿಸಲು ಅನುಮತಿ - ಪ್ರತಿ ಕಚೇರಿಗೆ ತಲಾ ನಾಲ್ಕು ಹುದ್ದೆ

ರಾಜ್ಯದ ಹೊಸ ತಾಲೂಕುಗಳಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಪ್ರಾರಂಭಿಸಿ, ಪ್ರತಿ ಕಚೇರಿಗೆ ತಲಾ ನಾಲ್ಕು ಹುದ್ದೆಗಳನ್ನು ಸೃಷ್ಟಿಸುವಂತೆ ಸರ್ಕಾರ ಆದೇಶಿಸಿದೆ.

Vidhana soudha
ವಿಧಾನ ಸೌಧ
author img

By

Published : Jan 8, 2023, 6:39 AM IST

Updated : Jan 8, 2023, 9:44 AM IST

ಬೆಂಗಳೂರು: ನೂತನವಾಗಿ ರಚಿಸಲಾಗಿರುವ 50 ತಾಲೂಕುಗಳ ಪೈಕಿ ಎಂಟು ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಾಧಿಕಾರಿ ಕಚೇರಿ (ಸಬ್‌ ರಿಜಿಸ್ಟ್ರಾರ್‌ ಆಫೀಸ್) ಪ್ರಾರಂಭಿಸಲು ಅನುಮತಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ, ಕೊಪ್ಪಳದ ಕುಕನೂರು, ಕನಕಗಿರಿ, ರಾಯಚೂರಿನ ಸಿರಿವಾರ, ಉಡುಪಿಯ ಕಾಪು, ವಿಜಯಪುರದ ಬಬಲೇಶ್ವರ, ತಿಕೋಟಾ ಮತ್ತು ತಾಳಿಕೋಟೆ ತಾಲೂಕಿನಲ್ಲಿ ಹೊಸದಾಗಿ ಉಪನೋಂದಣಾಧಿಕಾರಿ ಕಚೇರಿ ಪ್ರಾರಂಭವಾಗಲಿದೆ. ಪ್ರತಿ ಕಚೇರಿಗೆ ತಲಾ ನಾಲ್ಕು ಹುದ್ದೆಗಳಂತೆ ಒಟ್ಟು 32 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಉಪ ನೋಂದಣಾಧಿಕಾರಿ 1, ಪ್ರಥಮ ದರ್ಜೆ ಸಹಾಯಕ 1, ಡಾಟಾ ಎಂಟ್ರಿ ಆಪರೇಟರ್ 1 ಮತ್ತು ಡಿ ಗ್ರೂಪ್ 1 ಹುದ್ದೆಗಳು ಇರಲಿವೆ.

ದೂರದ ತಾಲೂಕು ಕೇಂದ್ರಗಳಿಗೆ ಕೆಲಸ ಕಾರ್ಯಗಳಿಗಾಗಿ ಹೋಗಿ ಬರಲು ಸಮಸ್ಯೆ ಎದುರಿಸುತ್ತಿದ್ದ ಜನರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಒತ್ತಡ, ಹೋರಾಟದಿಂದಾಗಿಯೇ ಹೆಚ್ಚಿನ ಹೊಸ ತಾಲೂಕುಗಳು ರಚನೆಯಾಗಿದ್ದವು. ಆದರೆ 2017ರಿಂದ ಇತ್ತೀಚಿನವರೆಗೆ ರಾಜ್ಯ ಸರ್ಕಾರ ಬೆಳಗಾವಿ, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ ಹಾವೇರಿ, ಬಳ್ಳಾರಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಗದಗ, ದಕ್ಷಿಣ ಕನ್ನಡ, ದಾವಣಗೆರೆ, ಮೈಸೂರು, ಉಡುಪಿ, ರಾಯಚೂರು, ರಾಮನಗರ, ಚಿಕ್ಕಬಳ್ಳಾಪುರ, ಉತ್ತರಕನ್ನಡ ಜಿಲ್ಲೆಗಳಲ್ಲಿ ರಚಿಸಿರುವ 58 ಹೊಸ ತಾಲೂಕುಗಳ ಪೈಕಿ ಬಹುತೇಕ ತಾಲೂಕುಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದವು. ಇವುಗಳಲ್ಲಿ ಕೆಲವು 2017ರಲ್ಲಿ, ಇನ್ನೊಂದಷ್ಟು 2019ರಲ್ಲಿ ಹಾಗೂ ಕೆಲವು ನಗರಗಳನ್ನು 2022ರಲ್ಲಿ ತಾಲೂಕುಗಳಾಗಿ ಘೋಷಣೆ ಮಾಡಲಾಗಿತ್ತು.

ಸರ್ಕಾರ ಕೆಲವು ಹೊಸ ತಾಲೂಕುಗಳನ್ನು ರಚಿಸಿ ಐದು ವರ್ಷಗಳಾಗಿವೆ. ಆದರೂ ಸಿಬ್ಬಂದಿ ನೇಮಕ ಹಾಗೂ ಸಾಕಷ್ಟು ಅನುದಾನ ಮಂಜೂರಾಗಿಲ್ಲ. ಕೆಲವು ತಾಲೂಕುಗಳಿಗೆ ಇನ್ನೂ ಆಡಳಿತ ಸೌಧಗಳೇ (ಮಿನಿವಿಧಾನಸೌಧ) ನಿರ್ಮಾಣವಾಗಿಲ್ಲ. ಅವುಗಳಲ್ಲಿ ಕಿತ್ತೂರು, ಹನೂರು ತಾಲೂಕುಗಳೂ ಸೇರಿವೆ. ಆಡಳಿತವನ್ನು ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಈ ಹಿಂದೆ ಇದ್ದ 10 ತಾಲೂಕುಗಳನ್ನು 15ಕ್ಕೆ ಹೆಚ್ಚಿಸಿದೆ. ಹೊಸ ತಾಲೂಕುಗಳಾದ ಕಿತ್ತೂರು, ಕಾಗವಾಡ, ನಿಪ್ಪಾಣಿ, ಮೂಡಲಗಿ ಮತ್ತು ಯರಗಟ್ಟ ಸೇರಿವೆ. ನಿಯಮದಂತೆ ಪ್ರತಿ ತಾಲೂಕಿಗೆ ವಿವಿಧ ಇಲಾಖೆಗಳ ಕನಿಷ್ಠ 18 ಕಚೇರಿಗಳಿರಬೇಕು. ಆದರೆ ಈ ಹೊಸ ಐದು ತಾಲೂಕುಗಳಲ್ಲಿ ಕಚೇರಿಗಳಲ್ಲಿ ಸರಿಯಾದ ರೀತಿಯಲ್ಲಿ ಎಲ್ಲ ಕಚೇರಿಗಳಿಲ್ಲ. ಒಂದಿದ್ದರೆ ಇನ್ನೊಂದಿಲ್ಲ ಎನ್ನುವ ಪರಿಸ್ಥಿತಿ ಇದೆ.

ಇವಷ್ಟೇ ಅಲ್ಲ, ಚಿಕ್ಕಮಗಳೂರಿನ ಕೆಲವು ತಾಲೂಕುಗಳ ಕಚೇರಿಗಳಲ್ಲಿ ಸಿಬ್ಬಂದಿ, ಮೂಲಸೌಕರ್ಯಗಳೇ ಇಲ್ಲ. ಕೊಪ್ಪಳದಲ್ಲಿ ತಾಲೂಕು ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ಸೇವೆ ನೀಡುತ್ತಿವೆ. ಹಾವೇರಿ ಜಿಲ್ಲೆಯ ತಾಲೂಕುಗಳಲ್ಲಿ ಇರುವ ಕಚೇರಿಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಸೇವೆ ಪಡೆಯಲು ಜನ ಪರದಾಡುವ ಪರಿಸ್ಥಿತಿ. ಚಾಮರಾಜನಗರದ ಕೆಲವೆಡೆ ಕಚೇರಿ ತೆರೆದರೂ ಜನರಿಗೆ ಉಪಯೋಗವಾಗಿಲ್ಲ. ವಿಜಯಪುರದ ಕೆಲವು ಜಿಲ್ಲೆಗಳು ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಕಟ್ಟಡಗಳಲ್ಲಿ ಸೇವೆ ನೀಡುತ್ತಿವೆ. ತಿಕೋಟ ಹೊರತುಪಡಿಸಿ ಯಾವುದೇ ತಾಲೂಕು ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಮೂಡುಬಿದಿರೆ, ಕಡಬ, ಉಳ್ಳಾಲ ಮತ್ತು ಮೂಲ್ಕಿ ತಾಲೂಕುಗಳಲ್ಲಿ ಮೂಡುಬಿದಿರೆಗೆ ಮಾತ್ರ ಮಿನಿ ವಿಧಾನಸೌಧ ಕಟ್ಟಡವಿದೆ. ಕಡಬದಲ್ಲಿ ಆಡಳಿತ ಸೌಧ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ, ಮೂಲ್ಕಿಯಲ್ಲಿ ಮಿನಿವಿಧಾನಸೌಧ ಕಟ್ಟಡಕ್ಕೆ ಶಿಲಾನ್ಯಾಸಗೊಳಿಸಲಾಗಿದೆ. ಮೈಸೂರಿನ ತಾಲೂಕುಗಳು ಹಾಗೂ ಉಡುಪಿ ಜಿಲ್ಲೆಯ ಬೈಂದೂರು, ಹೆಬ್ರಿ, ಕಾಪು, ಬ್ರಹ್ಮಾವರದ ಹಣೆಬರಹವೂ ಉಳಿದ ತಾಲೂಕುಗಳಿಗಿಂತ ಹೊರತಾಗಿಲ್ಲ ಅನ್ನೋದು ಸಾರ್ವಜನಿಕರ ಪ್ರತಿಕ್ರಿಯೆ.

ಸಬ್ ರಿಜಿಸ್ಟ್ರಾರ್‌ ಕಚೇರಿಯ ಕೆಲಸಗಳೇನು?: ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ, ಋುಣಭಾರ ಪ್ರಮಾಣ ಪತ್ರ, ದಾಖಲೆಗಳ ದೃಢೀಕೃತ ನಕಲು ಪ್ರತಿ, ಆಸ್ತಿ ಕ್ರಯ, ಮಾರಾಟ, ವರ್ಗಾವಣೆ, ಅಡಮಾನ ಪತ್ರ, ಮದುವೆ ನೋಂದಣಿಯಂತಹ ಸೇವೆಗಳನ್ನು ನೀಡಲಾಗುತ್ತದೆ. ಆಫ್​ಲೈನ್​ ಅಥವಾ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಮೇಲಿನ ಸೌಕರ್ಯವನ್ನು ಪಡೆಯಬಹುದು.

ಇದನ್ನೂ ಓದಿ: ಹೊಸ ತಾಲೂಕು ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿದ ರಾಜ್ಯ ಸರ್ಕಾರ

Last Updated : Jan 8, 2023, 9:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.