ETV Bharat / state

ಯುವರತ್ನನ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ: ಶೇ.100ರಷ್ಟು ಆಸನ ಭರ್ತಿಗೆ ಅವಕಾಶ - ಕೊರೊನಾ ಗೈಡ್​ಲೈನ್ಸ್​

occupancy of 100% in Theatres
occupancy of 100% in Theatres
author img

By

Published : Apr 3, 2021, 8:47 PM IST

Updated : Apr 3, 2021, 9:51 PM IST

20:45 April 03

ಏಪ್ರಿಲ್​ 7ರವರೆಗೆ ಶೇ.100ರಷ್ಟು ಆಸನ ಭರ್ತಿಗೆ ಗ್ರೀನ್​ ಸಿಗ್ನಲ್​

occupancy of 100% in Theatres
ಏಪ್ರಿಲ್​ 7ರವರೆಗೆ ಶೇ.100ರಷ್ಟು ಆಸನ ಭರ್ತಿಗೆ ಗ್ರೀನ್​ ಸಿಗ್ನಲ್​

ಬೆಂಗಳೂರು: ಸ್ಯಾಂಡಲ್​ವುಡ್​ಗೆ ನಿನ್ನೆಯಷ್ಟೇ ಶಾಕ್ ನೀಡಿದ್ದ ರಾಜ್ಯ ಸರ್ಕಾರ ಇಂದು ಸಿಹಿ ಸುದ್ದಿ ನೀಡಿದೆ. ಚಿತ್ರಮಂದಿರಗಳಲ್ಲಿ ಏ.7ರವರೆಗೆ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.  

ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶೇ. 50 ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿ ಸರ್ಕಾರ ನಿನ್ನೆಯಷ್ಟೇ ಆದೇಶ ಹೊರಡಿಸಿತ್ತು. ಇದು ಚಿತ್ರರಂಗ ಸೇರಿದಂತೆ ಗುರುವಾರವಷ್ಟೇ ಬಿಡುಗಡೆಯಾದ ಪುನೀತ್ ರಾಜ್​ಕುಮಾರ್ ನಾಯಕತ್ವದ ಯುವರತ್ನ ಚಿತ್ರತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.

ಅಂತೆಯೇ, ರಾಜ್ಯಾದ್ಯಂತ ಸಿನಿಮಾ ಅಭಿಮಾನಿಗಳು, ನಟರು ಹಾಗೂ ಯುವರತ್ನ ಚಿತ್ರ ತಂಡವು ಥಿಯೇಟರ್​ಗಳಲ್ಲಿ ಶೇ.100ರಷ್ಟು ಅವಕಾಶ ನೀಡುವಂತೆ ಸಿಎಂಗೆ ಮನವಿ ಮಾಡಿದ್ದರು. ಪುನೀತ್ ರಾಜ್​ಕುಮಾರ್ ಮತ್ತು ತಂಡ ಸಿಎಂ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. (ಇದನ್ನೂ ಓದಿ: ಥಿಯೇಟರ್​ಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ಆದೇಶ: ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ಪುನೀತ್)

Last Updated : Apr 3, 2021, 9:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.