ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯದರ್ಶಿ ಡಾ. ವಾಸಂತಿ ಅಮರ್ ಸೇರಿದಂತೆ ಆರು ಕೆಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಬಿಡಿಎ ಕಾರ್ಯದರ್ಶಿಯಾಗಿದ್ದ ಡಾ. ವಾಸಂತಿ ಅಮರ್ ಅವರನ್ನು ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕಿಯಾಗಿ, ಕೆಆರ್ ಐಡಿಎಲ್ ಮುಖ್ಯ ಆಡಳಿತಾಧಿಕಾರಿಯಾಗಿದ್ದ ರೂಪ ಅವರನ್ನು ಕಾನೂನು ಮಾನವಶಾಸ್ತ್ರ ಇಲಾಖೆಯ ನಿಯಂತ್ರಕರಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
![Karnataka government Transferred, Karnataka government Transferred to Six KAS officers, Six KAS officers Transferred, Six KAS officers Transferred news, ವರ್ಗಾವಣೆ ಮಾಡಿದ ಕರ್ನಾಟಕ ಸರ್ಕಾರ, ಆರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಕರ್ನಾಟಕ ಸರ್ಕಾರ, ಆರು ಕೆಎಎಸ್ ಅಧಿಕಾರಿ ವರ್ಗಾವಣೆ, ಆರು ಕೆಎಎಸ್ ಅಧಿಕಾರಿ ವರ್ಗಾವಣೆ ಸುದ್ದಿ,](https://etvbharatimages.akamaized.net/etvbharat/prod-images/kn-bng-13-kas-officers-transfered-goverment-order-ka10032_19062021221857_1906f_1624121337_1037.jpg)
ಕನ್ನಡ ಹಾಗೂ ಸಂಸ್ಕೃತ ಇಲಾಖೆ ನಿರ್ದೇಶಕರಾಗಿದ್ದ ರಂಗಪ್ಪರನ್ನು ಬಿಡಿಎ ಕಾರ್ಯದರ್ಶಿಯಾಗಿ, ಕಾನೂನು ಮಾನವಶಾಸ್ತ್ರ ಇಲಾಖೆಯ ನಿಯಂತ್ರಕರಾಗಿದ್ದ ಪಾತರಾಜು ಅವರನ್ನು ಕೆಆರ್ ಐಡಿಎಲ್ ಮುಖ್ಯ ಆಡಳಿತಾಧಿಕಾರಿಯಾಗಿ, ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಶೀಲವಂತ ಎಂ.ಶಿವಕುಮಾರ್ರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಡಾ.ಡಿ.ಬಿ.ನಟೇಶ್ರನ್ನು ಪಶುಪಾಲನೆ ಇಲಾಖೆಯ ಜಂಟಿ ಆಯುಕ್ತರಾಗಿ ನೇಮಿಸಲಾಗಿದೆ.