ETV Bharat / state

ಆಮ್ಲಜನಕ ಕೊರತೆಯಿಂದ ರಾಜ್ಯ ಹೈರಾಣ: ಸಾವು - ನೋವಿಗೆ ಇನ್ನಾದರೂ ಬೆಲೆ ಕೊಡುತ್ತಾ ಕೇಂದ್ರ ಸರ್ಕಾರ?!

author img

By

Published : May 7, 2021, 7:54 PM IST

ಕೋವಿಡ್ ಎರಡನೇ ಅಲೆಯಲ್ಲಿ ರೋಗಿಗಳ ಉಸಿರಾಟ ಸಮಸ್ಯೆ ದೊಡ್ಡದಾಗಿ ಕಾಡುತ್ತಿದ್ದು, ಆಮ್ಲಜನಕ ಮಾತ್ರ ಅಗತ್ಯಕ್ಕಿಂತ ಅರ್ಧದಷ್ಟು ಪೂರೈಕೆ ಮಾತ್ರ ಆಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಇನ್ನಾದರೂ ಪೂರೈಕೆ ಹೆಚ್ಚಿಸುತ್ತಾ ಎಂದು ಕರ್ನಾಟಕ ಸರ್ಕಾರ ಕಾದು ಕುಳಿತಿದೆ.

oxygen
oxygen

ಬೆಂಗಳೂರು: ಕೊರೊನಾ ಎರಡನೇ ಅಲೆ ಆತಂಕ ಹೆಚ್ಚಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಮ್ಲಜನಕ ಪೂರೈಕೆಯಲ್ಲಿ ಸಹ ತಾರತಮ್ಯ ಆಗುತ್ತಿದ್ದು, ಜೀವರಕ್ಷಕ ಸಾಧನ ಪೂರೈಕೆಯಲ್ಲಿಯೂ ಕೇಂದ್ರದ ತಾರತಮ್ಯ ಧೋರಣೆ ಪ್ರತಿಪಕ್ಷ ಮಾತ್ರವಲ್ಲ, ಸ್ವಪಕ್ಷೀಯರಲ್ಲೂ ಬೇಸರ ತರಿಸುತ್ತಿದೆ.

ರಾಜ್ಯದಿಂದ ಕೇಂದ್ರವನ್ನು ಪ್ರತಿನಿಧಿಸುವ 25 ಸಂಸದರು ನೇರವಾಗಿ ಈ ವಿಚಾರವಾಗಿ ಕೇಂದ್ರದ ವಿರುದ್ಧ ದನಿ ಎತ್ತುತ್ತಿಲ್ಲ. ಬದಲಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇಂದು ಸಹ ಸಂಸದ ಜಿ.ಎಂ. ಸಿದ್ದೇಶ್ವರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಚಾಮರಾಜನಗರ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಮ್ಲಜನಕ ಕೊರತೆಯಿಂದ ಹಲವು ಸಾವುಗಳಾಗಿವೆ. ಕೋವಿಡ್ ಎರಡನೇ ಅಲೆಯಲ್ಲಿ ರೋಗಿಗಳ ಉಸಿರಾಟ ಸಮಸ್ಯೆ ದೊಡ್ಡದಾಗಿ ಕಾಡುತ್ತಿದ್ದು, ಅಗತ್ಯಕ್ಕಿಂತ ಅರ್ಧದಷ್ಟು ಪೂರೈಕೆ ಮಾತ್ರ ಆಗುತ್ತಿದ್ದು, ಸಾಕಷ್ಟು ಮಂದಿ ಸಾವಿಗೆ ಕಾರಣವಾಗುತ್ತಿದೆ.

ರಾಜ್ಯ ಹೈಕೋರ್ಟ್ ಸುಮೋಟೊ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ನಿತ್ಯ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನು ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ. ಅರ್ಜಿಯ ವಿಚಾರಣೆಯನ್ನು ನಡೆಸಿರುವ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್​ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದಿದೆ. ಇದರಿಂದ ನ್ಯಾಯಾಂಗ ಹೋರಾಟದ ಮೂಲಕ ರಾಜ್ಯಕ್ಕೆ ಆಮ್ಲಜನಕ ತರಿಸಿಕೊಳ್ಳುವ ಅನಿವಾರ್ಯ ಎದುರಾಗಿದೆ. ರಾಜ್ಯ ಸರ್ಕಾರವಾಗಲಿ ಬಿಜೆಪಿ ಸಂಸದರಾಗಲಿ ಈ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್​ನ ಏಕೈಕ ಸಂಸದ ಡಿ.ಕೆ. ಸುರೇಶ್ ಅವರು ಇಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ, ಇದುವರೆಗೂ ಕಾಂಗ್ರೆಸ್ ನಾಯಕರ ಪತ್ರಕ್ಕಾಗಲಿ, ಸರ್ಕಾರದ ಮನವಿಗಾಗಲಿ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಆಮ್ಲಜನಕ ಕೊರತೆ ಹೇಳ ತೀರದಾಗಿದೆ. ಅನಿವಾರ್ಯವಾಗಿ ಗಟ್ಟಿಯಾಗಿ ಪ್ರಶ್ನಿಸಲಾಗದ ಸರ್ಕಾರ ಸಹಕಾರದ ನಿರೀಕ್ಷೆಯಲ್ಲಿ ಕೇಂದ್ರದತ್ತ ನೋಡುತ್ತಾ ಕೂರುವಂತಾಗಿದೆ.

ಕೇಂದ್ರಕ್ಕೆ ಮುಖಭಂಗ:

ರಾಜ್ಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ 'ಕರ್ನಾಟಕಕ್ಕೆ ಹೆಚ್ಚುವರಿ ಆಮ್ಲಜನಕ ನೀಡಲು ಸಾಧ್ಯವಿಲ್ಲ' ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆಯನ್ನು ಪರಿಶೀಲಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಪ್ರಾತಿನಿಧ್ಯದ ದೃಷ್ಟಿಯಿಂದ, ಆಮ್ಲಜನಕದ ಬೇಡಿಕೆ ಪೂರೈಸಬೇಕಾಗುತ್ತದೆ ಎಂದು ಹೇಳಿದೆ. 4 ದಿನಗಳಲ್ಲಿ ರಾಜ್ಯದ ಮನವಿ ಪರಿಗಣಿಸಲು ಕೇಂದ್ರಕ್ಕೆ ನಿರ್ದೇಶನ ನೀಡಿದ ಸುಪ್ರೀಂಕೋರ್ಟ್ ಅಲ್ಲಿಯವರೆಗೂ ತಕ್ಷಣ ಜಾರಿ ಬರುವಂತೆ ಹೈಕೋರ್ಟ್ ಆದೇಶದ ಪ್ರಕಾರ ಪ್ರತಿ ದಿನ 1,200 ಮೆಟ್ರಿಕ್ ಟನ್ ಆಮ್ಲಜನಕ ಒದಗಿಸಲು ಸೂಚನೆ ನೀಡಿದೆ. ಇದೇ ವೇಳೆ 'ಕರ್ನಾಟಕದ ಜನರನ್ನು ಕಷ್ಟಕ್ಕೆ ದೂಡಲು ಸಾಧ್ಯವಿಲ್ಲ, ಆದುದರಿಂದ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ಸರಿ ಇದೆ' ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲಿಗೆ ಆಮ್ಲಜನಕ ಪೂರೈಕೆ ವಿಚಾರದಲ್ಲಿ ಒಂದು ನಿರೀಕ್ಷೆ ಇರಿಸಿಕೊಳ್ಳಬಹುದಾಗಿದೆ. ಈ ಹಿಂದೆ ಕೇಂದ್ರ ರಾಜ್ಯಕ್ಕೆ 850 ಮೆಟ್ರಿಕ್ ಟನ್ ಆಮ್ಲಜನಕ ನೀಡುವ ಭರವಸೆ ನೀಡಿತ್ತು. ಆದರೆ, 1200 ಮೆಟ್ರಿಕ್ ಟನ್ ಅಗತ್ಯ ಬೀಳಲಿದೆ ಎಂದು ಅಂದಾಜಿಸಲಾಗಿತ್ತು.

ನಿತ್ಯ ಬೇಡಿಕೆ-ಪೂರೈಕೆ:
ನಿತ್ಯ ರಾಜ್ಯಕ್ಕೆ ಈಗ 1792 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ. ಕೇಂದ್ರ ಸರ್ಕಾರ 865 ಮೆಟ್ರಿಕ್ ಟನ್ ನೀಡುವ ಭರವಸೆ ಇಂತಿದೆ. ಪ್ರಧಾನಿ ನರೇಂದ್ರ ಮೋದಿ ಜತೆ ವಿಡಿಯೋ ಸಂವಾದ ನಡೆಸಿದ ಸಂದರ್ಭ ಸಿಎಂ ಬಿಎಸ್​ವೈ ನಮಗೆ ಹೆಚ್ಚುವರಿ ಆಮ್ಲಜನಕ ಬೇಕು ಎಂದಿದ್ದರು. ಆದರೆ ಪ್ರಧಾನಿ ಇದುವರೆಗೂ ಅದನ್ನು ಪುರಸ್ಕರಿಸಿಲ್ಲ. ಏ.30ರಂದು ರಾಜ್ಯ ಸರ್ಕಾರ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಪತ್ರ ಬರೆದು ನಮಗೆ 1162 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ ಎಂದು ತಿಳಿಸಿತ್ತು. ಅದಕ್ಕೂ ಕೇಂದ್ರದಿಂದ ಉತ್ತರ ಸಿಕ್ಕಿಲ್ಲ. ನಿತ್ಯ ರಾಜ್ಯ ಸರ್ಕಾರಕ್ಕೆ 927ಮೆಟ್ರಿಕ್ ಟನ್ ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಇದನ್ನು ಭರಿಸಿಕೊಳ್ಳಲು ಸಾಧ್ಯವಾಗದೇ ಹಲವು ಜೀವಗಳು ಬಲಿಯಾಗುತ್ತಿವೆ. ಆಡಳಿತ ಹಾಗೂ ಪ್ರತಿಪಕ್ಷಗಳು ಆಮ್ಲಜನಕಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರುತ್ತಲೇ ಇದ್ದು, ಇದೀಗ ಸುಪ್ರೀಂಕೋರ್ಟ್ ಆದೇಶದ ನಂತರವಾದರೂ ಆಮ್ಲಜನಕ ಪೂರೈಕೆಯಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.