ಬೆಂಗಳೂರು: ಸದ್ಯ ಮೈತ್ರಿ ಸರ್ಕಾರದ ಎಂಟು ಶಾಸಕರು, ಸ್ಪೀಕರ್ ಕಚೇರಿ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಸ್ಪೀಕರ್ ಭೇಟಿಗಾಗಿ ಕಾಯುತ್ತಿದ್ದಾರೆ. ಇದಿಷ್ಟೇ ಅಲ್ಲ ಇನ್ನೂ ಐದು ಜನ ರಾಜೀನಾಮೆಗೆ ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ.
8+5 ಸಾಸಕರು ರಾಜೀನಾಮೆ ನೀಡಿದರೆ ಒಟ್ಟು 13 ಮಂದಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದಂತಾಗುತ್ತದೆ. ಆಗ ಸರ್ಕಾರ ಅನಿವಾರ್ಯವಾಗಿ ಉರುಳುತ್ತದೆ. ಮೈತ್ರಿಯ ಬಲಾಬಲ ಹೀಗಿದೆ ನೋಡಿ.
ಸದನದ ಒಟ್ಟು ಬಲ: 224
ಬಿಜೆಪಿ: 105
ಕಾಂಗ್ರೆಸ್: 79
ಜೆಡಿಎಸ್ 38
ಪಕ್ಷೇತರರು: 2
ಒಟ್ಟು ರಾಜೀನಾಮೆ ಸಂಖ್ಯೆ: 13
ಬಿಜೆಪಿ: 105
ಕಾಂಗ್ರೆಸ್: 79-12= 67
ಜೆಡಿಎಸ್: 38-2=36
ಪಕ್ಷೇತರರು: 2
ರಾಜೀನಾಮೆ ಬಳಿಕ ಸದನದ ಬಲ: 210
ಬಹುಮತ ಸಾಬೀತಿಗೆ ಮ್ಯಾಜಿಕ್ ನಂಬರ್: 106
ಆಗ ಬಿಜೆಪಿ ಸದಸ್ಯರ ಸಂಖ್ಯೆ 105.. ಈ ವೇಳೆ ಪಕ್ಷೇತರರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದರೆ ಆಗ ಬಿಜೆಪಿ ಸುಲಭವಾಗಿ ಸರ್ಕಾರ ರಚನೆ ಮಾಡಬಹುದು. ಆ ಬಳಿಕ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 8 ಸ್ಥಾನಗಳನ್ನು ಗೆದ್ದರೆ ಸರ್ಕಾರ ಸುಭದ್ರ ಮಾಡಿಕೊಳ್ಳಬಹುದು. ಒಂದು ವೇಳೆ ಉಪ ಚುನಾವಣೆಯಲ್ಲಿ ಬಿಜೆಪಿ ಅಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾದರೆ ಅಪಾಯ ತಪ್ಪಿದ್ದಲ್ಲ.