ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಮಹಾಸ್ಫೋಟವೇ ಸಂಭವಿಸಿದೆ. ಒಂದೇ ದಿನದಲ್ಲಿ 4,169 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದರೆ, 104 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 30,655 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿಂದು 104 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದರೆ, 1,263 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಚೇತರಿಕೆ ಪ್ರಮಾಣ ಶೇಕಡಾ 38.37 ಇದ್ದರೆ, ಮರಣ ಪ್ರಮಾಣ ಶೇಕಡಾ 2.01 ಇದೆ. ಒಟ್ಟು 9,25,477 ಪರೀಕ್ಷೆ ನಡೆಸಲಾಗಿದ್ದು, ಇಂದು 23,451 ಮಂದಿಯ ಸೋಂಕು ಪರೀಕ್ಷೆ ನಡೆಸಲಾಗಿದೆ.

ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ಹಳೆಯ ಪ್ರಕರಣಗಳ ದಾಖಲೆಗಳನ್ನು ಮುರಿದಿದ್ದು, ನಗರದಲ್ಲಿ ಇಂದು ಒಂದೇ ದಿನ 2,344 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು ನಗರದಲ್ಲಿ 70 ಜನರು ಮೃತಪಟ್ಟಿರುವುದು ವರದಿಯಾಗಿದೆ.
497 ಮಂದಿ ಬಿಡುಗಡೆಯಾಗಿದ್ದು, 18,828 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 23.54 ಇದ್ದು, ಮರಣ ಪ್ರಮಾಣ 2.00% ಇದೆ.