ಬೆಂಗಳೂರು: ರಾಜ್ಯದಲ್ಲಿಂದು 1,70,654 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಇದರಲ್ಲಿ 4436 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,19,465 ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಪಾಸಿಟಿವಿಟಿ ದರ 2.59% ರಷ್ಟಿದೆ. ಇನ್ನು 6,455 ಸೋಂಕಿತರು ಗುಣಮುಖರಾಗಿದ್ದು, ಈ ತನಕ 26,68,705 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳು 1,16,450 ರಷ್ಟು ಇವೆ. ಕೋವಿಡ್ ಗೆ 123 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 34,287 ಕ್ಕೆ ಏರಿದೆ. ಸಾವಿನ ಶೇಕಡವಾರು ಪ್ರಮಾಣ 2.77% ರಷ್ಟು ಇದೆ. ವಿಮಾನ ನಿಲ್ದಾಣದಿಂದ 72 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೊಳಪಟ್ಟಿದ್ದಾರೆ.
ಯುಕೆಯ ರೂಪಾಂತರಿ ವೈರಸ್ ಅಲ್ಪಾ(Alpha/B.1.1.7) 127 ಜನರಲ್ಲಿ ಕಾಣಿಸಿಕೊಂಡಿದ್ದರೆ, ಇತ್ತ ಸೌತ್ ಆಫ್ರಿಕಾದ ಬೀಟಾ ವೈರಸ್ (BETA/B.1.351) 6 ಜನರಲ್ಲಿ ಪತ್ತೆಯಾಗಿದೆ. ಹಾಗೆಯೇ ಭಾರತದ ರೂಪಾಂತರಿ (Delta/B.617.2) ಡೆಲ್ಟಾ 318 ಜನರಿಗೆ, ಕಪ್ಪಾ (Kappa/B.1.617) 112 ಸೋಂಕು ಕಾಣಿಸಿಕೊಂಡಿದೆ. ಇದೀಗ ಡೆಲ್ಟಾ ಪ್ಲಸ್( Delta plus/ B.1.617.2.1(AY.1) ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಎಚ್ಚರಿಕೆ ವಹಿಸುವ ಅಗತ್ಯವಿದೆ.