ETV Bharat / state

ರಾಜ್ಯದಲ್ಲಿ ಇಂದು ಬರೋಬ್ಬರಿ 12 ಸಾವಿರ ಮಂದಿ ಗುಣಮುಖ: 7,606  ಪಾಸಿಟಿವ್ ಕೇಸ್​ ಪತ್ತೆ - ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು

ಬೆಂಗಳೂರಿನಲ್ಲಿ 3,498 ಸೇರಿದಂತೆ ಇಂದು ರಾಜ್ಯದಲ್ಲಿ 7,606 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

Karnataka Covid tally update
ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು
author img

By

Published : Oct 12, 2020, 8:38 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು 7,606 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7,17,915 ಕ್ಕೆ ಏರಿಕೆ ಆಗಿದೆ.

ಇಂದು 70 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, 19 ಸೋಂಕಿತರು ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 10,036ಕ್ಕೆ ಏರಿಕೆ ಆಗಿದೆ. ಇಂದು 12,030 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಗುಣಮುಖರಾದವರ ಸಂಖ್ಯೆ 5,92,084 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,15,776 ಇದ್ದು, 928 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ದಿನಗಳಲ್ಲಿ 1,24,911 ಜನರು ಹೋಂ ಕ್ವಾರೆಂಟೈನ್​​ಗೆ ಒಳಗಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ 60,30,980 ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ 3,498 ಮಂದಿಗೆ ಸೋಂಕು ಪತ್ತೆ: ಸಿಲಿಕಾನ್ ಸಿಟಿಯಲ್ಲಿ ಇಂದು 3,498 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ0 2,85,055 ಆಗಿದೆ. ಇಂದು 5,764 ‌ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 2,17,122 ಜನರು ಗುಣಮುಖರಾಗಿದ್ದಾರೆ. ಇಂದು 18 ಜನರು ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 3,362 ಆಗಿದೆ. ಪ್ರಸ್ತುತ 64,570 ಸಕ್ರಿಯ ಪ್ರಕರಣಗಳಿವೆ.

ಸದೃಢ ಆರೋಗ್ಯ ಕಾರ್ಯಕರ್ತರ ಅಭಿಯಾನ : ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸದೃಢ ಆರೋಗ್ಯ ಕಾರ್ಯಕರ್ತರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಚಾಲನೆ ನೀಡಿದರು. ಈ ಅಭಿಯಾನದ ಮೊದಲನೇ ದಿನಂದು ಒಟ್ಟು‌ 144 ಪುರುಷರು ಹಾಗೂ 117 ಮಹಿಳೆಯರಿಗೆ ತಪಾಸಣೆ ನಡೆಸಲಾಯಿತು. ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತರಿಗೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಮೂರು ಕ್ಯಾನ್ಸರ್ ( ಬಾಯಿ, ಸ್ಥನ, ಗರ್ಭಕೋಶ ) ಬಗ್ಗೆ ಆರೋಗ್ಯ ತಪಾಸಣೆ ಮಾಡಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಕ್ಟೋಬರ್ 23 ರವರೆಗೆ ಇದು ಮುಂದುವರೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.