ಬೆಂಗಳೂರು : ರಾಜ್ಯದಲ್ಲಿ ಇಂದು 1,10,556 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಇದರಲ್ಲಿ 456 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಕರ್ನಾಟಕದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ 29,98,099ಕ್ಕೆ ತಲುಪಿದೆ.
ಇಂದು 330 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ 29,52,708 ಮಂದಿ ಗುಣಮುಖರಾಗಿದ್ದಾರೆ. 6 ಜನರು ವೈರಸ್ನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 38,230 ಏರಿದೆ. 6 ಮಂದಿ ಸೋಂಕಿತರು ಇಂದು ಮೃತಪಟ್ಟಿದ್ದಾರೆ.
ಸದ್ಯ 7,132 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣವು ಶೇ.0.41 ಹಾಗೂ ಸಾವಿನ ಪ್ರಮಾಣ ಶೇ.1.31 ಇದೆ. ವಿಮಾನ ನಿಲ್ದಾಣದಲ್ಲಿ 3,634 ಪ್ರಯಾಣಿಕರು ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಕೋವಿಡ್ ಅಬ್ಬರ ಹೆಚ್ಚಾಗಿರುವ ದೇಶಗಳಿಂದ 1,218 ಪ್ರಯಾಣಿಕರು ಆಗಮಿಸಿದ್ದಾರೆ.
ಬೆಂಗಳೂರು ಕೋವಿಡ್ ವರದಿ : ರಾಜಧಾನಿಯಲ್ಲಿ 256 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆಯು 12,57,498ಕ್ಕೆ ಏರಿಕೆ ಕಂಡಿದೆ. 214 ಜನರು ಗುಣಮುಖರಾಗಿದ್ದಾರೆ. ಈವರೆಗೆ 12,36,016 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,345 ಹಾಗೂ ಇನ್ನೂ 5,136 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಮಾಹಿತಿ :
ಅಲ್ಫಾ - 155
ಬೇಟಾ - 08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 02
ಇದನ್ನೂ ಓದಿ: ದೆಹಲಿಯಲ್ಲಿ ಕರ್ತವ್ಯನಿರತ ಮುದ್ದೇಬಿಹಾಳ ಮೂಲದ ಯೋಧ ಆತ್ಮಹತ್ಯೆ