ಬೆಂಗಳೂರು: ರಾಜ್ಯದಲ್ಲಿಂದು 1,28,705 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ 5,339 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,12,100 ಏರಿಕೆ ಆಗಿದ್ದು, ಪಾಸಿಟಿವ್ ದರ ಶೇ. 4.14 ಹಾಗೂ ಡೆತ್ ರೇಟ್ ಶೇ. 0.89ರಷ್ಟಿದೆ.
ಇತ್ತ 16,749 ಸೋಂಕಿತರು ಗುಣಮುಖರಾಗಿದ್ದು, ಈ ತನಕ 38,11,615 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 60,956 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಇಂದು 48 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,495 ಏರಿಕೆ ಕಂಡಿದೆ.
-
ಇಂದಿನ 09/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/kmiGicDP5M @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/32pged0A6Z
— K'taka Health Dept (@DHFWKA) February 9, 2022 " class="align-text-top noRightClick twitterSection" data="
">ಇಂದಿನ 09/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/kmiGicDP5M @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/32pged0A6Z
— K'taka Health Dept (@DHFWKA) February 9, 2022ಇಂದಿನ 09/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/kmiGicDP5M @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/32pged0A6Z
— K'taka Health Dept (@DHFWKA) February 9, 2022
ವಿಮಾನ ನಿಲ್ದಾಣದಲ್ಲಿ 997 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 360 ಜನರು ಹೈರಿಸ್ಕ್ ದೇಶದಿಂದ ಬಂದಿಳಿದಿದ್ದಾರೆ.
ಬೆಂಗಳೂರು ಕೋವಿಡ್: ರಾಜಧಾನಿಯಲ್ಲಿ 2,161 ಮಂದಿಗೆ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,64,476ಕ್ಕೆ ಏರಿದೆ. 6,883 ಜನರು ಚೇತರಿಕೆ ಆಗಿದ್ದು, ಇಲ್ಲಿಯತನಕ 17,23,340 ಮಂದಿ ಗುಣಮುಖರಾಗಿದ್ದಾರೆ. 16 ಜನ ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,724 ಆಗಿದೆ. ಸದ್ಯ 24,411 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನ್ ಏಜ್ - 4431
- ಇತರೆ - 286
- ಒಮಿಕ್ರಾನ್ - 1115
ಇನ್ಮುಂದೆ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಕೋವಿಡೇತರ ಚಿಕಿತ್ಸೆಗೂ ಅವಕಾಶ:
- ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದ ಕಾರಣ, ಕೊರೊನಾ ಸೋಂಕು ಹರಡುವುದನ್ನು ಹಾಗೂ ಜನಸಂದಣಿ ತಡೆಯಲು ಆಸ್ಪತ್ರೆಗಳಿಗೆ ಭೇಟಿ ನೀಡಬಾರದೆಂದು ಆದೇಶ ಹೊರಡಿಸಲಾಗಿತ್ತು. ಅನಾರೋಗ್ಯ ಮತ್ತು ತುರ್ತು ಆರೈಕೆಯ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಬಹುದು ಎಂದು ಸಾರ್ವಜನರಿಗೆ ಸೂಚನೆ ನೀಡಲಾಗಿತ್ತು.
- ದಂತ ಸಮಸ್ಯೆ ಹೊಂದಿರುವ ರೋಗಿಗಳನ್ನು ಒಳಗೊಂಡಂತೆ ಹೊರರೋಗಿಗಳು, ಫಾಲೋಅಪ್ ಕೇಸ್, ಇತರ ಅನಾರೋಗ್ಯದ ಎಲ್ಲಾ ರೋಗಿಗಳು ಮುಂದಿನ ಆದೇಶದವರೆಗೆ ಆಸ್ಪತ್ರೆಗೆ ಭೇಟಿ ನೀಡದಂತೆ ತಿಳಿಸಲಾಗಿತ್ತು. ಇದೀಗ ತೀವ್ರತೆ ಕಡಿಮೆ ಆಗುತ್ತಿದ್ದು, ಜೊತೆಗೆ ಆಸ್ಪತ್ರೆಯ ದಾಖಲಾತಿಯಲ್ಲೂ ಯಾವುದೇ ಬದಲಾವಣೆ ಆಗದ ಕಾರಣಕ್ಕೆ ಇದೀಗ ಈ ಆದೇಶ ಹಿಂಪಡೆಯಲಾಗಿದೆ.
- ಆಸ್ಪತ್ರೆಗಳು ಕೋವಿಡ್ ದಾಖಲಾತಿಗಳಿಗಾಗಿ ಕನಿಷ್ಠ ಸಂಖ್ಯೆಯ ಐಸೋಲೇಶನ್ ಬೆಡ್‌ಗಳನ್ನು ಇರಿಸಬೇಕು. ಕೋವಿಡ್-19 ಹರಡುವಿಕೆಯ ಅಪಾಯವನ್ನು ತಡೆಗಟ್ಟಲು/ಕಡಿಮೆ ಮಾಡಲು ಸೋಂಕು ನಿಯಂತ್ರಣ ಕ್ರಮಗಳು ಮತ್ತು ಕೋವಿಡ್ ಸೂಕ್ತವಾದ ನಡವಳಿಕೆಯನ್ನು (CAB) ಅನುಸರಿಸಬೇಕೆಂದು ಸೂಚಿಸಿದೆ.
ಇದನ್ನೂ ಓದಿ: ಹಿಜಾಬ್ ಪ್ರಕರಣ: ಸಿಜೆ ನೇತೃತ್ವದಲ್ಲಿ ವಿಶೇಷ ಪೀಠ ರಚನೆ, ನಾಳೆ ಮಧ್ಯಾಹ್ನವೇ ವಿಚಾರಣೆ