ಬೆಂಗಳೂರು : ರಾಜ್ಯದಲ್ಲಿಂದು 14,950 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 53 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
1,36,777 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಸಕ್ರಿಯ ಪ್ರಕರಣಗಳು 1,23,098 ಇವೆ. ಇತ್ತ 40,599 ಸೋಂಕಿತರು ಗುಣಮುಖರಾಗಿದ್ದು, ಈತನಕ 37,13,343 ಮಂದಿ ಚೇತರಿಸಿಕೊಂಡಂತಾಗಿದೆ. ಇದುವರೆಗೆ ರಾಜ್ಯದಲ್ಲಿ 39,250 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
-
ಇಂದಿನ 04/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/h2Z3MJ5SC5@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/MWWuvBIX4Q
— K'taka Health Dept (@DHFWKA) February 4, 2022 " class="align-text-top noRightClick twitterSection" data="
">ಇಂದಿನ 04/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/h2Z3MJ5SC5@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/MWWuvBIX4Q
— K'taka Health Dept (@DHFWKA) February 4, 2022ಇಂದಿನ 04/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/h2Z3MJ5SC5@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/MWWuvBIX4Q
— K'taka Health Dept (@DHFWKA) February 4, 2022
ಸದ್ಯ 1,23,098 ಸಕ್ರಿಯ ಪ್ರಕರಣಗಳು ಇದ್ದು, ಇವತ್ತಿನ ಪಾಸಿಟಿವ್ ದರ ಶೇ. 10.93 ಹಾಗೂ ಸಾವಿನ ದರ ಶೇ. 0.35ರಷ್ಟಿದೆ. ಇಂದು ವಿಮಾನ ನಿಲ್ದಾಣದಿಂದ 720 ಮಂದಿ ಆಗಮಿಸಿದ್ದು, ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. 105 ಜನರು ಹೈರಿಸ್ಕ್ ದೇಶಗಳಿಂದ ಬಂದಿಳಿದಿದ್ದಾರೆ.
ಬೆಂಗಳೂರು ಕೋವಿಡ್: ರಾಜಧಾನಿಯಲ್ಲಿ ಇಂದು 6,039 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,49,104ಕ್ಕೆ ಏರಿಕೆ ಆಗಿದೆ. 25,904 ಮಂದಿ ಇಂದು ಬಿಡುಗಡೆಯಾಗಿದ್ದು, ಇದುವರೆಗೂ 16,80,814 ಮಂದಿ ಚೇತರಿಸಿಕೊಂಡಿದ್ದಾರೆ. ಇಂದು 15 ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ 51,645 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಮನಸ್ಸಿಗೆ ನೋವು ಮಾಡಿಕೊಳ್ಳುವುದಕ್ಕಿಂತ.. ಹೀಗೆ ಮಾಡಿ ಅಂದರು ಡಿಕೆಶಿ..