ETV Bharat / state

ರಾಜ್ಯದಲ್ಲಿ ಇಳಿಮುಖದತ್ತ ಕೋವಿಡ್​.. ಇಂದು ಸೋಂಕಿಗೆ 60 ಮಂದಿ ಸಾವು - ಇಂದಿನ ಕೊರೊನಾ ಪ್ರಕರಣ

Karnataka COVID report today: ರಾಜ್ಯದಲ್ಲಿ ಇಂದು ಹೊಸದಾಗಿ 16,436 ಜನರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಅಲ್ಲದೆ ವೈರಸ್​ನಿಂದ 44,819 ಸೋಂಕಿತರು ಗುಣಮುಖರಾಗಿದ್ದಾರೆ.

karnataka covid report today
ರಾಜ್ಯದಲ್ಲಿ ಇಳಿಮುಖದತ್ತ ಕೋವಿಡ್
author img

By

Published : Feb 3, 2022, 8:21 PM IST

Updated : Feb 3, 2022, 9:21 PM IST

ಬೆಂಗಳೂರು: ರಾಜ್ಯದಲ್ಲಿಂದು 16,436 ಕೋವಿಡ್ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, 60 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

1,45,204 ಜನರಿಗೆ ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು, ಸಕ್ರಿಯ ಪ್ರಕರಣಗಳು 1,48,800 ಇವೆ. ಇತ್ತ 44,819 ಸೋಂಕಿತರು ಗುಣಮುಖರಾಗಿದ್ದು, ಈತನಕ 36,72,744 ಮಂದಿ ಚೇತರಿಸಿಕೊಂಡಂತಾಗಿದೆ. ಇದುವರೆಗೆ ರಾಜ್ಯದಲ್ಲಿ 39,197 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

karnataka covid report today
ಜಿಲ್ಲಾವಾರು ಕೋವಿಡ್​ ಪ್ರಕರಣ

ಸದ್ಯ 1,77,244 ಸಕ್ರಿಯ ಪ್ರಕರಣಗಳು ಇದ್ದು, ‌ಇವತ್ತಿನ ಪಾಸಿಟಿವ್ ದರ ಶೇ. 11.31 ಹಾಗೂ ಸಾವಿನ ದರ ಶೇ. 0.36ರಷ್ಟಿದೆ. 8 ಜಿಲ್ಲೆಯಲ್ಲಿಂದು ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ.

ಬೆಂಗಳೂರು ಕೋವಿಡ್​: ರಾಜಧಾನಿಯಲ್ಲಿ 6,640 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,43,065ಕ್ಕೆ ಏರಿಕೆ ಆಗಿದೆ. 27,570 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 16,54,910 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 14 ಜನ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 16,629 ಮಂದಿ ಬಲಿಯಾದಂತಾಗಿದೆ. ಬೆಂಗಳೂರಿನಲ್ಲಿ ಸದ್ಯ ಸಕ್ರಿಯ ಪ್ರಕರಣಗಳು 71,525 ಇದೆ.

ಇಂದು ವಿಮಾನ ನಿಲ್ದಾಣದಿಂದ 902 ಮಂದಿ ಆಗಮಿಸಿದ್ದು, ಎಲ್ಲರೂ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದಾರೆ. 435 ಜನರು ಹೈರಿಸ್ಕ್​ ದೇಶಗಳಿಂದ ಬಂದಿಳಿದಿದ್ದಾರೆ.

ಇದನ್ನೂ ಓದಿ: ಸೂಟ್​ಕೇಸ್​ ಒಳಗೆ ಯುವತಿ‌ ಪತ್ತೆ ಪ್ರಕರಣ: ಮಣಿಪಾಲ ವಿವಿ ಹೇಳಿದ್ದೇನು ಗೊತ್ತಾ?

Last Updated : Feb 3, 2022, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.