ETV Bharat / state

ರಾಜ್ಯದಲ್ಲಿಂದು 42,470 ಜನರಿಗೆ ಕೊರೊನಾ ಪಾಸಿಟಿವ್.. 35 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಕೆ

Karnataka Covid Report: ಇಂದು ಹೊಸದಾಗಿ 42,470 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 35,140 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ಧಾರೆ.

karnataka covid report today
ಇಂದಿನ ಕೋವಿಡ್​ ಪ್ರಕರಣ ವರದಿ
author img

By

Published : Jan 22, 2022, 9:11 PM IST

Updated : Jan 22, 2022, 10:04 PM IST

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 42,470 ಕೋವಿಡ್​ ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು 2,19,699 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಸಕ್ರಿಯ ಪ್ರಕರಣಗಳು 3,30,447ಕ್ಕೆ ತಲುಪಿದೆ. ಪಾಸಿಟಿವಿಟಿ ದರವು ಶೇ. 19.33 ಹಾಗೂ ಸಾವಿನ ಪ್ರಮಾಣ ಶೇ. 0.06ರಷ್ಟಿದೆ. 35,140 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ವಿಮಾನ ನಿಲ್ದಾಣದಿಂದ 1273 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈ ರಿಸ್ಕ್ ದೇಶದಿಂದ 410 ಜನರು ಬಂದಿಳಿದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

karnataka covid report today
ಜಿಲ್ಲಾವಾರು ಕೋವಿಡ್​ ಪ್ರಕರಣಗಳು

ರಾಜಧಾನಿ ಬೆಂಗಳೂರಿನಲ್ಲಿ 17,266 ಮಂದಿಗೆ ಸೋಂಕು ದೃಢಪಟ್ಟಿದ್ದು, ನಗರದಲ್ಲಿ 2,18,329 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಇಂದು 6 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟೂ ಸೋಂಕಿತರ ಸಂಖ್ಯೆ 15,59,358ಕ್ಕೆ ಏರಿದ್ದು, ಶನಿವಾರ 22,511ಜನರು ಚೇತರಿಕೆ ಕಂಡಿದ್ದಾರೆ. ಇದುವರೆಗೆ 16,490 ಸೋಂಕಿತರು ಮೃತಪಟ್ಟಿದ್ದಾರೆ.

ರೂಪಾಂತರಿ ಮಾಹಿತಿ:

ಅಲ್ಪಾ - 156

ಬೀಟಾ - 08

ಡೆಲ್ಟಾ - 2956

ಡೆಲ್ಟಾ ಸಬ್ ಲೈನೇಜ್​ - 1372

ಕಪ್ಪಾ - 160

ಈಟಾ - 01

ಒಮಿಕ್ರಾನ್ - 766

6 ಕೋಟಿ ದಾಟಿದ ಕೋವಿಡ್ ಪರೀಕ್ಷೆ: ರಾಜ್ಯದಲ್ಲಿ 2020 ಮಾರ್ಚ್ 8ರಂದು ಮೊದಲ ಕೊರೊನಾ ಸೋಂಕು ಪತ್ತೆಯಾಗಿತ್ತು. ಆಗಿನಿಂದ ಶುರುವಾದ ಕೋವಿಡ್ ಟೆಸ್ಟಿಂಗ್ ಪ್ರಕ್ರಿಯೆಯು ಇದೀಗ 6 ಕೋಟಿ ದಾಟಿದೆ.‌ ಮೂರನೇ ಅಲೆಯ ನಿಯಂತ್ರಣಕ್ಕೆ ಹಾಗೂ ಬಹುಬೇಗ ಹರಡುವ ಸೋಂಕಿಗೆ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಇಲಾಖೆ ಇದೀಗ ನಿತ್ಯ 2 ಲಕ್ಷಕ್ಕೂ ಅಧಿಕ ಪರೀಕ್ಷೆ ನಡೆಸುತ್ತಿದೆ.

ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಟೆಸ್ಟಿಂಗ್​ನಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 1,14,61,224 ಮಂದಿಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್, 4,88,73,290 ಜನರಿಗೆ ಆರ್​​ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ‌ಒಟ್ಟಾರೆ ಇಲ್ಲಿತನಕ 6,03,34,514 ಮಂದಿಗೆ ಕೊರೊನಾ ಟೆಸ್ಟ್​ಗೆ ಒಳಪಟ್ಟಿದ್ದಾರೆ.

ಇದನ್ನೂ ಓದಿ: ಕಾಪು ಕಾಂಗ್ರೆಸ್ ಮುಖಂಡೆ ರೀನಾ ಡಿಸೋಜಾರಿಗೆ ಚೂರಿಯಿಂದ ಇರಿತ

Last Updated : Jan 22, 2022, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.