ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 40,499 ಸೋಂಕು ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಇಂದು ಕೋವಿಡ್ನಿಂದ 21 ಮಂದಿ ಸಾವನ್ನಪ್ಪಿದ್ದು, ಇಂದಿನ ಪಾಸಿಟಿವಿಟಿ ದರ ಶೇ. 18.80 ಹಾಗೂ ಸಾವಿನ ಪ್ರಮಾಣ ಶೇ. 0.05ರಷ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು 2,15,312 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 23,209 ಜನರು ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯಾದ್ಯಂತ 2,67,650 ಸಕ್ರಿಯ ಪ್ರಕರಣಗಳಿವೆ. ವಿಮಾನ ನಿಲ್ದಾಣದಿಂದ 979 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ. ಹೈ ರಿಸ್ಕ್ ದೇಶಗಳಿಂದ 240 ಪ್ರಯಾಣಿಕರು ಆಗಮಿಸಿದ್ದಾರೆ.
ಬೆಂಗಳೂರು ಕೋವಿಡ್:
ಬೆಂಗಳೂರಿನಲ್ಲಿ 24,135 ಮಂದಿಗೆ ವೈರಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 14,82,484ಕ್ಕೆ ಏರಿದೆ. 18,081 ಜನರು ಬಿಡುಗಡೆ ಆಗಿದ್ದು, ಇಲ್ಲಿಯತನಕ 12,81,636 ಮಂದಿ ಗುಣಮುಖರಾಗಿದ್ದಾರೆ. ಐವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,470 ತಲುಪಿದೆ. ಸದ್ಯ ರಾಜಧಾನಿಯಲ್ಲಿ 1,84,377 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಮಾಹಿತಿ:
ಅಲ್ಪಾ - 156
ಬೀಟಾ - 08
ಡೆಲ್ಟಾ - 2956
ಡೆಲ್ಟಾ ಸಬ್ ಲೈನೇಜ್ - 1372
ಕಪ್ಪಾ - 160
ಈಟಾ - 01
ಒಮಿಕ್ರಾನ್ - 766
ಇದನ್ನೂ ಓದಿ: ಒಂದೇ ಸಮಯದಲ್ಲಿ ಎರಡು ವಿಮಾನಗಳು ಟೇಕ್ ಆಫ್; ಬೆಂಗಳೂರಲ್ಲಿ ತಪ್ಪಿತು ಭಾರಿ ಅನಾಹುತ!