ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಉಲ್ಬಣಗೊಳ್ಳುತ್ತಲೇ ಇದೆ. ಇಂದು ಹೊಸದಾಗಿ 34,047 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಮೂಲಕ ಸೋಂಕಿತರ ಸಂಖ್ಯೆ 32,20,087ಕ್ಕೆ ಏರಿಕೆ ಆಗಿದೆ. ಕರುನಾಡಿನಲ್ಲಿ ವೈರಸ್ ಪಾಸಿಟಿವಿಟಿ ದರವು ಶೇ. 19.29 ಹಾಗೂ ಸಾವಿನ ಪ್ರಮಾಣ ಶೇ. 0.03ರಷ್ಟಿದೆ. ಒಟ್ಟು ಇಲ್ಲಿಯವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 38,437ಕ್ಕೆ ತಲುಪಿದೆ.
ರಾಜ್ಯದಲ್ಲಿ ಸದ್ಯ 1,97,982 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಇಂದು 5,902 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
-
ಇಂದಿನ 16/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/SKqc7TMkEx @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/29flnBHyQB
— K'taka Health Dept (@DHFWKA) January 16, 2022 " class="align-text-top noRightClick twitterSection" data="
">ಇಂದಿನ 16/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/SKqc7TMkEx @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/29flnBHyQB
— K'taka Health Dept (@DHFWKA) January 16, 2022ಇಂದಿನ 16/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/SKqc7TMkEx @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/29flnBHyQB
— K'taka Health Dept (@DHFWKA) January 16, 2022
ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ 1,084 ಜನರು ವಿದೇಶದಿಂದ ಬಂದಿಳಿದಿದ್ದು, ಕೋವಿಡ್ ಪರೀಕ್ಷೆಗೊಳಪಟ್ಟಿದ್ದಾರೆ. ಹೈರಿಸ್ಕ್ ದೇಶಗಳಿಂದ 381 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ.
ಬೆಂಗಳೂರು ಕೋವಿಡ್:
ಬೆಂಗಳೂರಿನಲ್ಲಿ ಇಂದು 21,071 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 14,16,807ಕ್ಕೆ ಏರಿದೆ. 3,978 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇಲ್ಲಿಯವರೆಗೆ 12,54,153 ಚೇತರಿಸಿಕೊಂಡಿದ್ದಾರೆ. ಐವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,453ಕ್ಕೆ ತಲುಪಿದೆ. ಸದ್ಯ ನಗರದಲ್ಲಿ 1,46,200 ಸಕ್ರಿಯ ಪ್ರಕರಣಗಳಿವೆ.
ಇಂದಿನ ರೂಪಾಂತರಿ ಮಾಹಿತಿ:
ಅಲ್ಪಾ - 156
ಬೀಟಾ - 08
ಡೆಲ್ಟಾ - 2,937
ಡೆಲ್ಟಾ ಸಬ್ ಲೈನೇಜ್ - 1,350
ಕಪ್ಪಾ - 160
ಈಟಾ - 01
ಒಮಿಕ್ರಾನ್ - 479
ಇದನ್ನೂ ಓದಿ: ನೆರೆಗೆ ಸೂರು ಕಳ್ಕೊಂಡಿದ್ದ ವೃದ್ಧೆಗೆ ನಾಲ್ಕೇ ತಿಂಗಳಲ್ಲಿ ಮನೆ.. ತವರು ಜಿಲ್ಲೆ ಸಂತ್ರಸ್ತೆಗೆ ಸಿಎಂ ಸಂಕ್ರಾಂತಿ ಉಡುಗೊರೆ..