ಬೆಂಗಳೂರು: ರಾಜ್ಯದಲ್ಲಿಂದು 1,19,766 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 314 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,99,785 ಕ್ಕೆ ಏರಿಕೆ ಆಗಿದೆ. 339 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,54,196 ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿಗೆ ಇಂದು ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,255ಕ್ಕೆ ಏರಿದೆ. ಸದ್ಯ 7305 ಕ್ಕೆ ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರ ಪ್ರಮಾಣ ಶೇ 0.26 ರಷ್ಟಿದ್ದು, ಸಾವಿನ ಪ್ರಮಾಣ ಶೇ.0.63 ರಷ್ಟು ಇದೆ. ವಿಮಾನ ನಿಲ್ದಾಣದಿಂದ 6,542 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದಾರೆ. ಹೈ ರಿಸ್ಕ್ ದೇಶಗಳಿಂದ 2,549 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿಂದು 179 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,58,509 ಕ್ಕೆ ಏರಿದೆ. 204 ಜನರು ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 12,36,666 ಜನ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,360 ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 5,482 ಇವೆ. ಇಂದು ರಾಜಧಾನಿವೊಂದರಲ್ಲಷ್ಟೇ ಸೋಂಕಿತರು ಸಾವನ್ನಪಿರುವ ವರದಿಯಾಗಿದ್ದು, ಉಳಿದಂತೆ ಬೇರೆ ಜಿಲ್ಲೆಗಳಲ್ಲಿ ಶೂನ್ಯ ವರದಿಯಾಗಿದೆ.
-
Today's Media Bulletin 10/12/2021
— K'taka Health Dept (@DHFWKA) December 10, 2021 " class="align-text-top noRightClick twitterSection" data="
Please click on the link below to view bulletin.https://t.co/Z09pvbK6yb @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mangalurucorp @DDChandanaNews @PIBBengaluru @KarnatakaVarthe pic.twitter.com/MswNCfwvny
">Today's Media Bulletin 10/12/2021
— K'taka Health Dept (@DHFWKA) December 10, 2021
Please click on the link below to view bulletin.https://t.co/Z09pvbK6yb @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mangalurucorp @DDChandanaNews @PIBBengaluru @KarnatakaVarthe pic.twitter.com/MswNCfwvnyToday's Media Bulletin 10/12/2021
— K'taka Health Dept (@DHFWKA) December 10, 2021
Please click on the link below to view bulletin.https://t.co/Z09pvbK6yb @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mangalurucorp @DDChandanaNews @PIBBengaluru @KarnatakaVarthe pic.twitter.com/MswNCfwvny
ರೂಪಾಂತರಿ ಅಪ್ಡೇಟ್ಸ್:
ಅಲ್ಪಾ - 155
ಬೀಟಾ -08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ ಏಜ್ - 558
ಕಪ್ಪಾ -160
ಈಟಾ -01
ಒಮಿಕ್ರಾನ್ - 02