ETV Bharat / state

ನಿಮ್ಗೇ ಸರ್ಕಾರ ನಡೆಸೋಕೆ ಸಾಧ್ಯವಾಗದಿದ್ರೇ ಬಿಟ್ಟು ಹೊರಡಿ.. ಯು ಬಿ ವೆಂಕಟೇಶ್ ಕಿಡಿ - ವಿಧಾನಪರಿಷತ್ ಅಧಿವೇಶನ

ನಾಲ್ಕು ಅಧಿವೇಶನ ನಡೆದಿದೆ, ಯಾವುದೂ ಸರಿಯಾಗಿ ನಡೆದಿಲ್ಲ. ಆಯ್ಕೆಯಾದ ಎರಡು ವರ್ಷದಲ್ಲಿ ಏನನ್ನೂ ಅರಿಯಲು ಅವಕಾಶ ಸಿಗಲಿಲ್ಲ. ಸರ್ಕಾರ ಭಾವನಾತ್ಮಕ ವಿಚಾರ ಮಂಡಿಸಿ ‌ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ಜನಪರ ಕೆಲಸಕ್ಕೆ ಅವಕಾಶ ಮಾಡಿಕೊಡಿ. ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟುಬಿಡಿ..

Karnataka Council Session update
ವಿಧಾನಪರಿಷತ್ ಅಧಿವೇಶನ
author img

By

Published : Feb 8, 2021, 10:18 PM IST

ಬೆಂಗಳೂರು : ಕೋವಿಡ್ ಸಂಕಷ್ಟದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿದ ನೆರವನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರು ತಿಳಿಸಿದ್ದಾರೆ.

ವಿಧಾನ ಪರಿಷತ್​​ನಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ವೇಳೆ ಮಾತನಾಡಿದ ಅವರು, ಆತ್ಮ ನಿರ್ಭರ ಭಾರತ ಅಭಿಯಾನದಡಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ನೀಡಿದೆ. ರಾಜ್ಯ ಸರ್ಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ. ಪ್ರತಿಪಕ್ಷ ಸಹ ಮಾನವೀಯ ಸಹಕಾರ ನೀಡಿದ್ದಕ್ಕೆ ಅಭಿನಂದಿಸುತ್ತೇನೆ.

ಕೋವಿಡ್ ಅವಧಿಯಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಸಂಖ್ಯೆಯಲ್ಲಿ ಬಡವರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಜೊತೆಗೆ ವಿದೇಶದಲ್ಲಿ ಸಿಲುಕಿದ್ದ 6 ಸಾವಿರ ಅನಿವಾಸಿ ಭಾರತೀಯರನ್ನು ಕರೆತರುವ ಕಾರ್ಯ ಮಾಡಿದ್ದಾರೆ. ಲಕ್ಷಾಂತರ ಮಂದಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಪ್ರಸಕ್ತ ವರ್ಷ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ಸಾಧನೆ ವಿವರಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಏರೋ ಸ್ಪೇಸ್ ಪಾಲಿಸಿ, ನವೀಕರಣ ಇಂಧನ, ಹಸಿರು ಸೂಚ್ಯಂಕ ಸಾಧನ ಕಿಟ್, ಬಸ್​ಗಳ ಸದ್ಭಳಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಡಿಯೂರಪ್ಪ ಸರ್ಕಾರ ಸಾಧನೆ ಮಾಡಿದೆ. ಹಲವು‌ ನ್ಯೂನತೆಯನ್ನು ನಿವಾರಿಸಿದೆ, ಹೊಸ ಕೈಗಾರಿಕಾ ನೀತಿ ಜಾರಿಗೆ ಬಂದಿದೆ, 14,320 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರ ಪಂಪ್ ಸೆಟ್​ಗೆ ವಿದ್ಯುತ್, ಶೌಚಾಲಯ ನಿರ್ಮಾಣ, ಕಾಂಕ್ರೀಟ್ ರಸ್ತೆ ನಿರ್ಮಾಣ, ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವುದು ಸೇರಿದಂತೆ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಶೇ.80ರಷ್ಟು ಭರವಸೆಗಳನ್ನು ಈಡೇರಿಸಿದೆ. ಪ್ರತಿಪಕ್ಷ ಸಹಕಾರ ನೀಡಬೇಕು. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಸರ್ಕಾರ ಪರಿಹಾರ ಕಲ್ಪಿಸಲು, ಸಮಸ್ಯೆ ನಿವಾರಿಸಲು ಸರ್ಕಾರ ಪ್ರಯತ್ನಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಓದಿ : ವಿಧಾನ ಪರಿಷತ್​​ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ

ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿ, ಸರ್ಕಾರದ ಸಾಧನೆ ಏನೂ ಆಗಿಲ್ಲ, ಬಾಯಲ್ಲಿ ಬಡಾಯಿ ಅನ್ನುವಂತಾಗಿದೆ. ರಾಜ್ಯದ ಯಾವ ಬದಿಗೂ ಯಡಿಯೂರಪ್ಪ ಸರ್ಕಾರ ಗಮನ‌ಹರಿಸಿಲ್ಲ. ಕೇಂದ್ರ ಸರ್ಕಾರ ನಿರೀಕ್ಷಿತ ಪರಿಹಾರ ನೀಡಿಲ್ಲ. ಪ್ರಧಾನಿ, ಗೃಹ ಸಚಿವ, ಹಣಕಾಸು ಸಚಿವೆ ಇತ್ತ ಮುಖ ಮಾಡಿಲ್ಲ. ಅಭಿವೃದ್ಧಿ ವಿಚಾರ ಕೇಳಿದರೆ ಕೊರೊನಾ ಅನ್ನುತ್ತಾರೆ.

ಕೊರೊನಾ ಇವರಿಗೆ ವರವಾಗಿ ಲಭಿಸಿದೆ. ಸಚಿವರ ನಡುವೆ ಸಾಮರಸ್ಯ ಇಲ್ಲ. ಅಪವಿತ್ರ ಸರ್ಕಾರ ಅಧಿಕಾರಕ್ಕೆ ಬಂದು ಅಭಿವೃದ್ಧಿ ನಿಲ್ಲಿಸಿದೆ. ಸಂಪುಟ ರಚನೆ, ನಿಗಮ ಮಂಡಳಿಗೆ ನೇಮಕ ಮಾಡುವ ಕಾರ್ಯ ಮಾಡುತ್ತಿದೆ. ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿದೆ. ಇದು ರೀತಿ-ನೀತಿ, ತಾಳ- ಮೇಳ ಇಲ್ಲದ ಸರ್ಕಾರ.

ನಾಲ್ಕು ಅಧಿವೇಶನ ನಡೆದಿದೆ, ಯಾವುದೂ ಸರಿಯಾಗಿ ನಡೆದಿಲ್ಲ. ಆಯ್ಕೆಯಾದ ಎರಡು ವರ್ಷದಲ್ಲಿ ಏನನ್ನೂ ಅರಿಯಲು ಅವಕಾಶ ಸಿಗಲಿಲ್ಲ. ಸರ್ಕಾರ ಭಾವನಾತ್ಮಕ ವಿಚಾರ ಮಂಡಿಸಿ ‌ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ಜನಪರ ಕೆಲಸಕ್ಕೆ ಅವಕಾಶ ಮಾಡಿಕೊಡಿ. ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಇಬ್ರಾಹಿಂ ಬೇಸರ : ಇದೇ ವೇಳೆ ಅಧಿಕಾರಿಗಳು ಕಲಾಪಕ್ಕೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು. ಅವರು ಬಂದು ಬೇಕಾದರೆ ನಿದ್ರೆ ಮಾಡಲಿ, ಕನಿಷ್ಠ ಒಂದೆರಡು ಗಂಟೆಯಾದರೂ ಇದ್ದು ಹೋಗಲಿ. ವಿಧಾನಸಭೆ ಕೂಡ ನಡೆಯುತ್ತಿಲ್ಲ.

ಈಗಲಾದರೂ ಬಂದು ಕೂರಬಹುದಲ್ವಾ..? ಇದೇ ರೀತಿ ನಡೆದರೆ ಹೇಗೆ ಎಂದು ಪ್ರಶ್ನಿಸಿದರು. ಈ ವೇಳೆ, ಸಭಾಪತಿ ಸ್ಥಾನದಲ್ಲಿದ್ದ ಪ್ರಾಣೇಶ್ ಅವರು, ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಉದ್ದೇಶಿಸಿ ಇಂದು ಬರಬೇಕಿದ್ದ ಅಧಿಕಾರಿಗಳ ಮಾಹಿತಿ ಒದಗಿಸಿ ಎಂದು ಸೂಚನೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.