ಬೆಂಗಳೂರು: ರಾಜ್ಯದಲ್ಲಿಂದು 877 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,20,373ಕ್ಕೆ ಏರಿಕೆ ಆಗಿದೆ.
6 ಮಂದಿ ಕೋವಿಡ್ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,096 ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1,084 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,97,200 ಡಿಸ್ಚಾರ್ಜ್ ಆಗಿದ್ದಾರೆ.
ತೀವ್ರ ನಿಗಾ ಘಟಕದಲ್ಲಿ 189 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 11,058 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಕಳೆದ 7 ದಿನಗಳಲ್ಲಿ 20,786 ಮಂದಿ ಹೋಂ ಕ್ವಾರೆಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 67,248 ಮಂದಿ ಇದ್ದರೆ, ದ್ವಿತೀಯ ಸಂಪರ್ಕದಲ್ಲಿ 77,299 ಜನರು ಇದ್ದಾರೆ.
ಇಂಗ್ಲೆಂಡ್ ಸೋಂಕು ವಿಚಾರ:
ಯುಕೆಯಿಂದ ಬಂದ 77 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು ಇವರಲ್ಲಿ ಯಾರಿಗೂ ಪಾಸಿಟಿವ್ ಬಂದಿಲ್ಲ. ಈವರೆಗೆ 2,106 ಪರೀಕ್ಷೆ ನಡೆಸಿದ್ದು 33 ಪಾಸಿಟಿವ್ ಕೇಸ್ ದೃಢವಾಗಿದೆ. 1993 ಮಂದಿಗೆ ನೆಗೆಟಿವ್ ಬಂದಿದ್ದು, 88 ವರದಿ ಬರಬೇಕಿದೆ.