ETV Bharat / state

ರಾಜ್ಯದಲ್ಲಿ ಮೇ.10 ರಿಂದ 24ರವರೆಗೆ ಸಂಪೂರ್ಣ ಲಾಕ್​ಡೌನ್​: ಬಿಎಸ್​ವೈ ಮಹತ್ವದ ಘೋಷಣೆ

ರಾಜ್ಯದಲ್ಲಿ ಮೇ 10ರಿಂದ 24ರವರೆಗೆ ಅಂದರೆ 14 ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್ ಮಾಡಿ ಮುಖ್ಯಮಂತ್ರಿ ಮಹತ್ವದ ಆದೇಶ ಹೊರಡಿಸಿದ್ದಾರೆ.

CM BSY
CM BSY
author img

By

Published : May 7, 2021, 7:41 PM IST

Updated : May 7, 2021, 8:12 PM IST

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಹೆಚ್ಚಾಗಿರುವ ಕಾರಣ ಮೇ. 10ರಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಿ ಮಹತ್ವದ ಆದೇಶ ಹೊರಹಾಕಲಾಗಿದೆ.

ಸೋಮವಾರದಿಂದ ಕರ್ನಾಟಕ ಲಾಕ್​: ಬಿಎಸ್​ವೈ ಘೋಷಣೆ

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್​ವೈ ಮೇ. 10ರಿಂದ ಮೇ. 24ರವರೆಗೆ ಸಂಪೂರ್ಣ ಲಾಕ್​ಡೌನ್ ಮಾಡುವುದಾಗಿ ಘೋಷಣೆ ಮಾಡಿದ್ದು, ಹೋಟೆಲ್, ಬಾರ್​, ಪಬ್​ ಸಂಪೂರ್ಣವಾಗಿ ಬಂದ್ ಆಗಿರಲಿವೆ. ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ಬ್ಯಾನ್ ಮಾಡಲಾಗಿದೆ.

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ಗಂಟೆಯಿಂದ 10ಗಂಟೆವೆಗೆ ಅವಕಾಶ ನೀಡಲಾಗಿದೆ. ಕಟ್ಟಡ ಕಾಮಗಾರಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂದಿದ್ದಾರೆ.

ಸಿಎಂ ಹೇಳಿರುವ ಮುಖ್ಯಾಂಶಗಳು

  • ಸರ್ಕಾರಿ ಕಚೇರಿಗಳು ಭಾಗಶಃ ಕೆಲಸ ಮಾಡಲು ಅನುಮತಿ
  • ಕೂಲಿ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗದಂತೆ ಮನವಿ
  • ಬಾರ್​ನಲ್ಲೂ ಪಾರ್ಸಲ್​ಗಳಿಗೆ ಅವಕಾಶವಿಲ್ಲ
  • ಬಾರ್​ & ರೆಸ್ಟೋರೆಂಟ್​ ಸಂಪೂರ್ಣವಾಗಿ ಬಂದ್​
  • ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
  • ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನ ಓಡಾಟ
  • ಆನ್​ಲೈನ್​ ಡೆಲಿವರಿ ಸರ್ವಿಸ್​ಗೂ ಅವಕಾಶ
  • ಹಣ್ಣು, ಮಾಂಸ, ತರಕಾರಿ ಅಂಗಡಿ ಓಪನ್ ಇರಲಿವೆ
  • ಹಾಲಿನ ಅಂಗಡಿ ಬೆಳಗ್ಗೆಯಿಂದ ಸಂಜೆ 6ರವರೆಗೆ ಓಪನ್​
  • ರಸ್ತೆ ಕಾಮಗಾರಿ, ನಿಗದಿತ ಕಟ್ಟಡ ನಿರ್ಮಾಣಕ್ಕೆ ಅವಕಾಶ
  • ವಿವಾಹ ಸಮಾರಂಭದಲ್ಲಿ ಕೇವಲ 50 ಜನರಿಗೆ ಅವಕಾಶ
  • ಕಾರ್ಮಿಕರನ್ನ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಕಾರ್ಯ
  • ಕೈಗಾರಿಕಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ

Last Updated : May 7, 2021, 8:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.