ETV Bharat / state

ಡಿಸೆಂಬರ್ 5 ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್ - Karnataka Bundh related News

ಕರ್ನಾಟಕ ಬಂದ್
ಕರ್ನಾಟಕ ಬಂದ್
author img

By

Published : Nov 20, 2020, 12:39 PM IST

Updated : Nov 20, 2020, 2:14 PM IST

12:34 November 20

ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಖಂಡಿಸಿ ಡಿಸೆಂಬರ್​ 5ರಂದು ಕರ್ನಾಟಕ್​ ಬಂದ್​ ನಡೆಸಲು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

ಬೆಂಗಳೂರು: ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಡಿ.5ರಂದು ಕರ್ನಾಟಕ್ ಬಂದ್​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. 

ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡೋದು ಖಚಿತ. ಯಡಿಯೂರಪ್ಪ ನಮ್ಮನ್ನ ಜೈಲಿಗೆ ಹಾಕಲಿ. ಆದರೆ, ನಾವು ಕರ್ನಾಟಕ ಬಂದ್ ಮಾಡುತ್ತೇವೆ. ಕರ್ನಾಟಕ ಬಂದ್ ಯಶಸ್ಸು ಆಗಲೇಬೇಕು. ಅಷ್ಟೇ ಅಲ್ಲ, ನವೆಂಬರ್ 23 ರಂದು ಬಳ್ಳಾರಿ ಗಡಿ ಬಂದ್, 24ರಂದು ಅತ್ತಿಬೆಲೆ ಗಡಿ ಬಂದ್ ಮತ್ತು 30ರಂದು ಮೈಸೂರು ಬ್ಯಾಂಕ್ ಸರ್ಕಲ್ ಬಂದ್ ಮಾಡಲಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಿ ಎಂದು ವಾಟಾಳ್ ಮನವಿ ಮಾಡಿದ್ದಾರೆ.

ಇನ್ನು ಮುಖ್ಯಮಂತ್ರಿ ಚಂದ್ರು ಹೇಳಿಕೆ  ನೀಡಿದ್ದು, ಪಕ್ಷ ಬೇಧ ಮರೆತು ಮರಾಠಿ ಅಭಿವೃದ್ಧಿ ಪ್ರಾಧಿಕಾರ ಖಂಡನೆ ಮಾಡಬೇಕು. ಕನ್ನಡವನ್ನ ಮರೆತು ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಎರಡು ಸದನದಲ್ಲಿ ಚರ್ಚೆ ಮಾಡಿ ಪ್ರಾಧಿಕಾರ ರಚನೆ ಮಾಡಬೇಕು. ₹50 ಕೋಟಿ ಹಣ ಮೀಸಲು ಇಟ್ಟಿರೋದು ಸರಿ ಇಲ್ಲ. ಕೊರೊನಾದಿಂದ ಜನ ಸಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಪ್ರಾಧಿಕಾರ ರಚನೆ ಮಾಡಿರುವ ನಿರ್ಧಾರ ಸರಿ ಇಲ್ಲ ಎಂದರು.  

ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ ಹೇಳಿಕೆ ನೀಡಿದ್ದು,  ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡುತ್ತೇವೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರು ನಾವು ಭಯ ಪಡೋದಿಲ್ಲ. ಪ್ರಾಧಿಕಾರ ರಚನೆ ಮಾಡಿರುವುದು ಸರಿ ಇಲ್ಲ. ಎಲ್ಲಾ ಕನ್ನಡಿಗರು ಒಂದಾಗಿ. ಕನ್ನಡ ಉಳಿಯಬೇಕು ಅಂದರೆ ಒಂದಾಗಬೇಕು. ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನ ಸಮರ್ಥನೆ ಮಾಡಿಕೊಂಡವರು ಈ ರಾಜ್ಯದ ದ್ರೋಹಿಗಳು. ಸರ್ಕಾರ ನಿರ್ಧಾರ ವಾಪಸು ತೆಗೆದುಕೊಂಡರೆ ಬಂದ್ ಮಾಡಲ್ಲ ಎಂದರು. 

ಬೆಂಗಳೂರಿನ ವುಡ್​ಲ್ಯಾಂಡ್​ ಹೋಟೆಲ್​ನಲ್ಲಿ ಸಭೆ ನಡೆಸಿದ್ದು, ಮೊದಲಿಗೆ ಕರವೇ ನಾರಾಯಣ ಗೌಡ ಬಣ ಕರ್ನಾಟಕ ಬಂದ್​ನಿಂದ ಹಿಂದೆ ಸರಿದಿತ್ತು. ಆದರೆ, ಈಗ ಎಲ್ಲರೂ  ಒಮ್ಮತದ ತೀರ್ಮಾನ ಕೈಗೊಂಡು ಕರ್ನಾಟಕ ಬಂದ್ ಮಾಡಲು ತೀರ್ಮಾನಿಸಿದ್ದಾರೆ.

Last Updated : Nov 20, 2020, 2:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.