ETV Bharat / state

ಎಸ್​ಸಿ-ಎಸ್​ಟಿ ಬಿಪಿಎಲ್‌ ಕುಟುಂಬಗಳಿಗೆ ಮಾಸಿಕ 75 ಯೂನಿಟ್​ ವಿದ್ಯುತ್ ಫ್ರೀ

author img

By

Published : Feb 17, 2023, 2:44 PM IST

ಕರ್ನಾಟಕ ರಾಜ್ಯ ಬಜೆಟ್​ 2023: ವಿದ್ಯುತ್ ವಲಯದಲ್ಲಿ ಬೃಹತ್ ಹೂಡಿಕೆ, ಎಸ್​ಸಿ, ಎಸ್​ಟಿ ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಘೋಷಿಸಲಾಗಿದೆ.

karnataka budget 2023
ಕರ್ನಾಟಕ ರಾಜ್ಯ ಬಜೆಟ್​ 2023

ಬೆಂಗಳೂರು: ಅಮರ್ ಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಬಿಪಿಎಲ್​ ಕಾರ್ಡ್​ ಹೊಂದಿರುವ ಎಸ್​ಸಿ ಮತ್ತು ಎಸ್​ಟಿ ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್​ ಉಚಿತ ವಿದ್ಯುತ್​ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಬೆಳಕು ಯೋಜನೆಯಡಿ 124 ಕೋಟಿ ರೂ. ವೆಚ್ಚದಲ್ಲಿ 2.35 ಲಕ್ಷ ವಿದ್ಯುತ್‌ರಹಿತ ಮನೆಗಳಿಗೆ ವಿದ್ಯುತ್‌ ಸಂಪರ್ಕ, 24 ಗಂಟೆಗಳಲ್ಲಿ ವಿದ್ಯುತ್ ಪರಿವರ್ತಕ ಬದಲಾಯಿಸುವ ಕಾರ್ಯಕ್ರಮದಡಿ 1.37 ಲಕ್ಷ ವಿಫಲ ಪರಿವರ್ತಕಗಳ ಬದಲಾವಣೆ, 67,713 ಹೊಸ ವಿದ್ಯುತ್‌ ಪರಿವರ್ತಕಗಳ ಅಳವಡಿಕೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ 4,268 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಸೇರಿ ಹಲವು ಜನಸ್ನೇಹಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದರು.

ರಾಜ್ಯದಲ್ಲಿ 10 ಗಿಗಾ ವ್ಯಾಟ್(GW) ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿಯೊಂದಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27 ಜಾರಿಗೊಳಿಸಲಾಗಿದೆ. ಕಳೆದ ವರ್ಷ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗ್ರೀನ್ ಹೈಡ್ರೋಜನ್ ಸೇರಿದಂತೆ ನವೀಕರಿಸಬಹುದಾದ ಇಂಧನ ಹೂಡಿಕೆಗೆ 1.68 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು. 50 ಹೊಸ ಉಪ ಕೇಂದ್ರಗಳು, 1,060 ಸರ್ಕಿಟ್ ಕಿ.ಮೀ. ಪ್ರಸರಣ ಮಾರ್ಗ ಮತ್ತು 100 ಹಾಲಿ ಇರುವ ಉಪಕೇಂದ್ರಗಳ ಸಾಮರ್ಥ್ಯ ಉನ್ನತೀಕರಣ ಕಾಮಗಾರಿ ಸೇರಿದಂತೆ ಈ ವರ್ಷ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 3 ಸಾವಿರ ಕೋಟಿ ರೂ.ಹೂಡಿಕೆ ಮಾಡಲಾಗುವುದು. ಕರ್ನಾಟಕ ವಿದ್ಯುತ್ ನಿಗಮದ ಸ್ವಿಚ್‌ಯಾರ್ಡ್ ವ್ಯವಸ್ಥೆಗಳ ಆಧುನೀಕರಣವನ್ನು ಕೇಂದ್ರ ಸರ್ಕಾರದ ಪವರ್ ಸಿಸ್ಟಂ ಡೆವೆಲಪ್‌ಮೆಂಟ್ ಫಂಡ್ ಫೇಸ್-3 ಅಡಿಯಲ್ಲಿ 102 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

ಸರ್ಕಾರ ಈಗಾಗಲೇ ಶರಾವತಿ ಪಂಪ್‌ ಸ್ಟೋರೇಜ್ ಪವರ್ ಪ್ಲಾಂಟ್‌ (PSP) ವಿಸ್ತ್ರತ ಯೋಜನಾ ವರದಿ ತಯಾರಿಸಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 7,394 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಅಲ್ಲದೇ, ಸಾವಿರ MW ನ ಹೊಸ ಪಂಪ್ ಸ್ಟೋರೇಜ್ ಘಟಕವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದರು.

ವಿದ್ಯುತ್ ಕಂಪನಿಗಳಿಗೆ ನೆರವು: ಸಂಕಷ್ಟದಲ್ಲಿರುವ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಕಳೆದೆರಡು ಸಾಲಿನಲ್ಲಿ 31,869 ಕೋಟಿ ರೂ.ಅನುದಾನ ನೀಡುವ ಮೂಲಕ ನಮ್ಮ ಸರ್ಕಾರ ಕಾಯಕಲ್ಪ ನೀಡಿದೆ. ಇದರಲ್ಲಿ 25,445 ಕೋಟಿ ರೂ. ಉಚಿತ ವಿದ್ಯುತ್‌ ಯೋಜನೆಗಳಾದ ರೈತರ ಪಂಪ್‌ಸೆಟ್‌ ಯೋಜನೆ ಹಾಗೂ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳಿಗೆ ನೀಡಲಾಗಿದೆ. 924 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದೆ. ಇದರ ಜತೆಗೆ 5,500 ಕೋಟಿ ರೂ. ವಿಶೇಷ ಆರ್ಥಿಕ ನೆರವು ಹಾಗೂ 2,564 ಕೋಟಿ ರೂ. ಹಿಂದಿನ ಸಾಲವನ್ನು ಹೊಂದಾಣಿಕೆಯ ಮೂಲಕ ಕೈಬಿಡಲಾಗಿದೆ. 2022-23 ಆರ್ಥಿಕ ವರ್ಷದಲ್ಲಿ ವಿದ್ಯುತ್ ಉತ್ಪದನಾ ಕಂಪನಿಗಳ ಹಿಂಬಾಕಿ ಪಾವತಿಗಾಗಿ ರಾಜ್ಯ ಸರ್ಕಾರ ಸುಮಾರು 13,709 ಕೋಟಿ ರೂ. ಸಾಲಕ್ಕೆ ಖಾತರಿ ನೀಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಇಂಧನ ಕಂಪನಿಗಳಿಗೆ 13,743 ಕೋಟಿ ರೂ. ಅನುದಾನ ನೀಡಲಾಗುತ್ತದೆ.

2023-24ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್​​ನಲ್ಲಿ 4 ಸಾವಿರ MWH ಸಾಮರ್ಥ್ಯದ ಬ್ಯಾಟರಿ ಶೇಖರಣೆ ವ್ಯವಸ್ಥೆಯನ್ನು Viability, Gap Funding ಮೂಲಕ ಉತ್ತೇಜಿಸಲು ಘೋಷಿಸಲಾಗಿದೆ. ಈ ಯೋಜನೆಯ ನೆರವಿನಿಂದ ಪಾವಗಡ ಸೋಲಾರ್ ಪಾರ್ಕ್‌ನಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಬ್ಯಾಟರಿ ಶೇಖರಣೆ ವ್ಯವಸ್ಥೆಯನ್ನು ಹೊಂದಿದ 2 MW ಸಾಮರ್ಥ್ಯದ ಸೌರ ಘಟಕ ಸ್ಥಾಪಿಸಲಾಗುವುದು. ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿಗಳ ಬಲವರ್ಧನೆ ಮತ್ತು ಆರ್ಥಿಕ ಸ್ವಾವಲಂಬನೆ ಕುರಿತು ಅಧ್ಯಯನ ನಡೆಸಲು ಗುರು ಚರಣ್ ಸಮಿತಿ ರಚಿಸಲಾಗಿತ್ತು. ಸದರಿ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯ ನಿರ್ವಹಣೆ ಮತ್ತು ಆರ್ಥಿಕ ಸ್ಥಿತಿಯ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಇದನ್ನೂ ಓದಿ: Karnataka Budget 2023: ರಾಜ್ಯ ಬಜೆಟ್ ಹೈಲೈಟ್ಸ್ - ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.