ETV Bharat / state

ಸಿಎಂ ಬೊಮ್ಮಾಯಿ ಬಜೆಟ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಈ ಬಾರಿಯೂ ಭಾರಿ ಸಾಲದ ಹೊರೆ? - ಬಜೆಟ್

ಫೆ.17 ರಂದು ಕರ್ನಾಟಕ ಬಜೆಟ್. ಈ ಸರ್ಕಾರದ ಕೊನೆಯ ಹಾಗೂ ಎರಡನೇ ಬಾರಿ ಬಜೆಟ್ ಮಂಡಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ.

cm Bommai ಬಜೆಟ್
ಸಿಎಂ ಬೊಮ್ಮಾಯಿ
author img

By

Published : Feb 1, 2023, 7:25 AM IST

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಈ ಅವಧಿಯ ಕೊನೆಯ ಬಜೆಟ್​ನ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಜನಪ್ರಿಯ, ಹೊರೆ ಇಲ್ಲದ, ಹೆಚ್ಚುವರಿ ಆದಾಯದ ಬಜೆಟ್ ಮಂಡನೆಗೆ ಕಸರತ್ತು ನಡೆಸುತ್ತಿರುವ ಬೊಮ್ಮಾಯಿ ಸರ್ಕಾರ ಈ ಬಾರಿ ರಾಜ್ಯದ ಜನರ ಮೇಲೆ ಹಾಕುವ ಸಾಲದ ಹೊರೆ ಎಷ್ಟು ಎಂಬ ಬಗ್ಗೆ ಕುತೂಹಲ ಮೂಡಿದೆ.

ಸಿಎಂ ಬೊಮ್ಮಾಯಿ ಫೆ.17ರಂದು ಮಂಡಿಸಲಿರುವ ಬಜೆಟ್ ತಮ್ಮ ಅಧಿಕಾರವಧಿಯ ಎರಡನೇ ಬಜೆಟ್ ಆಗಿದೆ. ಕಳೆದ ಬಾರಿ ಹಿತ ಮಿತವಾದ ಹೊರೆ ಇಲ್ಲದ ಚೊಚ್ಚಲ ಬಜೆಟ್​ ​ಅನ್ನು ಸಿಎಂ ಬೊಮ್ಮಾಯಿ‌ ಮಂಡಿಸಿದ್ದರು. ಇದೀಗ ಚುನಾವಣೆ ವರ್ಷದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಚುನಾವಣೆ ಬಜೆಟ್ ಮಂಡಿಸುವ ಅನಿವಾರ್ಯತೆ ಇದೆ. ರಾಜ್ಯದ ಜನರಿಗೆ ಹೆಚ್ಚಿನ ಹೊರೆ ಇಲ್ಲದೆ, ಹೊಸ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಅಗತ್ಯತೆ ಇದೆ. ಇತ್ತ ಹೊಸ ಯೋಜನೆ ಘೋಷಣೆಗೆ ಹಣ ಹೊಂದಾಣಿಕೆ ಮಾಡುವುದು ಕಷ್ಟ ಸಾಧ್ಯ ಎಂದು ಆರ್ಥಿಕ ಇಲಾಖೆ ತಿಳಿಸಿದೆ. ಕೆಲ ಯೋಜನೆಗಳನ್ನು ಕೈ ಬಿಟ್ಟು ಹೊಸ ಯೋಜನೆಗಳಿಗೆ ಹಣ ಹೊಂದಿಸುವ ಬಗ್ಗೆ ಆರ್ಥಿಕ ಇಲಾಖೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ. ಅಧಿಕ ರಾಜಸ್ವ ವೆಚ್ಚದ ಕಾರಣ ಸೀಮಿತ ಆದಾಯ ಸಂಗ್ರಹದಿಂದ ಜನಪ್ರಿಯ ಯೋಜನೆಗಳನ್ನು ಘೋಷಿಸುವುದು ಕಷ್ಟಕರ ಎಂಬ ಬಗ್ಗೆ ಆರ್ಥಿಕ ಇಲಾಖೆ ಒಪ್ಪಿಕೊಂಡಿದೆ.

ಸಿಎಂ ಬೊಮ್ಮಾಯಿಗೆ ಸಾಲದ ಅನಿವಾರ್ಯತೆ: ಈ ಬಾರಿಯೂ ಸಿಎಂ ಬೊಮ್ಮಾಯಿ ಬಜೆಟ್ ಯೋಜನೆಗಳಿಗೆ ಹಣ ಹೊಂದಿಸಲು ಮತ್ತೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯವನ್ನು ಸಾಲದ ಕೂಪಕ್ಕೆ ಬೀಳಿಸುತ್ತಿದೆ ಎಂಬ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗಿರುವ ಬಿಜೆಪಿ ಸರ್ಕಾರಕ್ಕೆ ಈ ಬಾರಿಯೂ ಬಹುವಾಗಿ ಸಾಲವನ್ನೇ ನೆಚ್ಚಿಕೊಳ್ಳುವ ಅಗತ್ಯತೆ ಇದೆ.

ಒಂದೆಡೆ ಜಿಎಸ್​​ಟಿ ಪರಿಹಾರ ಹಣ ಸ್ಥಗಿತವಾಗಿದ್ದರೆ, ಮತ್ತೊಂದೆಡೆ ರಾಜಸ್ವ ವೆಚ್ಚ 2023-24 ಸಾಲಿನಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ಬಗ್ಗೆ ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ ಹೇಳಲಾಗಿದೆ. ಜನಪ್ರಿಯ ಯೋಜನೆ ಘೋಷಿಸುವ ಅನಿವಾರ್ಯತೆ ಇರುವ ಕಾರಣ ಸಿಎಂ ಬೊಮ್ಮಾಯಿ‌ 2023-24 ಸಾಲಿನಲ್ಲೂ ದೊಡ್ಡ ಪ್ರಮಾಣದ ಸಾಲದ ಮೊರೆ ಹೋಗುವ ಅನಿವಾರ್ಯತೆಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಖಾಸಗಿ ವಲಯದಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಆರ್ಥಿಕ ಸಮೀಕ್ಷೆ

ಕಳೆದ ಬಾರಿ ಸಿಎಂ ಬೊಮ್ಮಾಯಿ‌ ಸುಮಾರು ಅಂದಾಜು 72,000 ಕೋಟಿ ರೂ. ಸಾಲ ಮಾಡುವುದಾಗಿ ಬಜೆಟ್​​ನಲ್ಲಿ ತಿಳಿಸಿದ್ದರು. ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡುವ ಇಕ್ಕಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಸಿಲುಕಿದೆ. ಒಂದೆಡೆ ಪ್ರತಿಪಕ್ಷಗಳ ಟೀಕೆ ಮಧ್ಯೆಯೂ ಬಜೆಟ್ ನಿರ್ವಹಣೆಗೆ 2023-24ರಲ್ಲೂ ದೊಡ್ಡ ಪ್ರಮಾಣದ ಸಾಲ ಮಾಡದೇ ಅನ್ಯ ಮಾರ್ಗವಿಲ್ಲದಂತಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಬಜೆಟ್​​ನಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದರೆ ಸಿಎಂ ಬೊಮ್ಮಾಯಿ ಸಾಲದ ಹೊರೆಯಿಂದ ಸ್ವಲ್ಪ ನಿಟ್ಟುಸಿರು ಬಿಡಬಹುದಾಗಿದೆ.

ಈ ಬಾರಿ 73,000 ಕೋಟಿ ಸಾಲ?: 2023-24 ಸಾಲಿನ ಬಜೆಟ್​​ನಲ್ಲೂ ಸಿಎಂ ಬೊಮ್ಮಾಯಿ‌ ದೊಡ್ಡ ಮಟ್ಟದ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಜನಪ್ರಿಯ ಬಜೆಟ್, ದೊಡ್ಡ ಪ್ರಮಾಣದ ಬದ್ಧ ವೆಚ್ಚ, ಜಿಎಸ್​​ಟಿ ಪರಿಹಾರ ಇಲ್ಲದೇ ಇರುವುದರಿಂದ ಗರಿಷ್ಠ ಮಟ್ಟದಲ್ಲಿ ಸಾಲದ ಮೊರೆ ಹೋಗಬೇಕಾಗಿದೆ. ಈ ಸಾಲಿನಲ್ಲಿ ಸಿಎಂ ಬೊಮ್ಮಾಯಿ ಅಂದಾಜು 73,000 ಕೋಟಿ ರೂ‌. ಸಾಲ ಮಾಡುವ ಅನಿವಾರ್ಯತೆ ಇದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಮಧ್ಯಮವಾಧಿ ವಿತ್ತೀಯ ಯೋಜನಾ ವರದಿಯಲ್ಲೂ ಹೆಚ್ಚಿನ ಸಾಲ ಮಾಡಬೇಕಾಗಿರುವ ಬಗ್ಗೆ ಅಂದಾಜಿಸಿದೆ. ಇದರಿಂದಾಗಿ ರಾಜ್ಯದ ಒಟ್ಟು ಹೊಣೆಗಾರಿಕೆ ಅಂದಾಜು 5,91,977 ಕೋಟಿ ರೂ.ಗೆ ತಲುಪಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

2023-24 ಸಾಲಿನಲ್ಲಿ ಜಿಎಸ್ ಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ರಾಜ್ಯದ ಒಟ್ಟು ಹೊಣೆಗಾರಿಕೆಗಳ ಪ್ರಮಾಣ ಶೇ.28.05ಗೆ ಹೋಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 2030ಕ್ಕೆ ಭಾರತದ ಜಿಡಿಪಿ 7 ಟ್ರಿಲಿಯನ್​ ಡಾಲರ್​ಗೆ ಏರಿಕೆ ಕಾಣಬಹುದು: ದೇಶದ ಮುಖ್ಯ ಆರ್ಥಿಕ ಸಲಹೆಗಾರರ ಭವಿಷ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.