ETV Bharat / state

ನೇಪಥ್ಯಕ್ಕೆ ಸರಿದ ಬಿಜೆಪಿ ಹಿರಿಯರು: ನಾಲ್ಕು ದಶಕದಲ್ಲಿ ಮೊದಲ ಬಾರಿ ಕಣದಿಂದ ಹೊರಗುಳಿದ ಬಿಎಸ್​ವೈ

ಹೊಸಬರಿಗೆ ಅವಕಾಶ ಕಲ್ಪಿಸಲು ನಡೆಸಿದ ಬಿಜೆಪಿಯ ಪ್ರಯೋಗದಿಂದಾಗಿ ಹಿರಿಯ ನಾಯಕರು ರಾಜಕಾರಣದಿಂದ ದೂರ ಉಳಿದಿದ್ದಾರೆ.

Former CM BS Yeddyurappa
ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ
author img

By

Published : Apr 30, 2023, 8:11 PM IST

ರಾಜ್ಯ ಬಿಜೆಪಿಯ ಹಿರಿಯ ನಾಯಕ, ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ರಾಜಕಾರಣಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಾಲ್ಕು ದಶಕದ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ. ಯಡಿಯೂರಪ್ಪ ಕಣದಲ್ಲಿಲ್ಲದ ಮೊದಲ ಚುನಾವಣೆಯನ್ನೂ ಬಿಜೆಪಿ ಎದುರಿಸುತ್ತಿದೆ. ಬಿಜೆಪಿ ಪಾಲಿಗೆ ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುತ್ತಿರುವ ಚುನಾವಣೆ ಇದಾಗಿದ್ದು, ಮಾಜಿ ಸಚಿವ ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಹಿಂದೆ ಸರಿದಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕಾರಣೀಕರ್ತರಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗು ಲಾಲ್ ಕೃಷ್ಣ ಅಡ್ವಾನಿ ರೀತಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿ.ಎಸ್.ಯಡಿಯೂರಪ್ಪ ಕಾರಣೀಕರ್ತರಲ್ಲಿ ಪ್ರಮುಖರು. ವಿಧಾನಸಭೆಯಲ್ಲಿ ಕೇವಲ ಎರಡು ಸ್ಥಾನದಿಂದ ಅಧಿಕಾರದ ಗದ್ದುಗೆಗೇರುವವರೆಗೂ ವಿರಮಿಸದೆ ರಾಜಕಾರಣ ಮಾಡಿಕೊಂಡು ಬಂದು ಪಕ್ಷವನ್ನು ಎರಡು ಬಾರಿ ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪಗೆ ಸಲ್ಲಲಿದೆ.

1983 ರಲ್ಲಿ ವಿಧಾನಸಭೆ ಪ್ರವೇಶಿಸಿದ ಯಡಿಯೂರಪ್ಪ ನಂತರ 2018 ರವರೆಗೆ ನಡೆದಿರುವ ಎಲ್ಲ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದಾರೆ. ನಾಲ್ಕು ದಶಕದ ರಾಜಕಾರಣದಲ್ಲಿ 1983, 1985, 1989, 1994, 1999, 2004, 2008, 2013, 2018 ಸೇರಿ ಒಟ್ಟು 9 ಬಾರಿ ಚುನಾವಣೆ ಎದುರಿಸಿರುವ ಯಡಿಯೂರಪ್ಪ 1999 ರಲ್ಲಿ ಒಮ್ಮೆ ಸೋತಿದ್ದು ಬಿಟ್ಟರೆ ಇನ್ನುಳಿದ 8 ಬಾರಿಯೂ ಗೆದ್ದಿದ್ದಾರೆ. ಈ ಅವಧಿಯಲ್ಲಿ ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿ ಹಾಗು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.

ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸಲು ಮುಂದಾಗಿದೆ. ಹೀಗಾಗಿ ಹೈಕಮಾಂಡ್ ಸಲಹೆಯಂತೆ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಹಾಗಾಗಿ 2023ರ ಚುನಾವಣೆಯಲ್ಲಿ ಯಡಿಯೂರಪ್ಪ ಸ್ಪರ್ಧೆ ಮಾಡಿಲ್ಲ. ನಾಲ್ಕು ದಶಕದಲ್ಲಿ ಯಡಿಯೂರಪ್ಪ ಕಣದಲ್ಲಿಲ್ಲದ ಮೊದಲ ಚುನಾವಣೆ ಇದಾಗಿದೆ.

ಬಿಎಸ್​ವೈ ಚುನಾವಣಾ ಕಣದಲ್ಲಿಲ್ಲದಿದ್ದರೂ ಪ್ರಚಾರದ ಅಖಾಡದಲ್ಲಿ ಮುಂಚೂಣಿಯಲ್ಲಿಯೇ ಇದ್ದಾರೆ. ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಈವರೆಗೂ ಉಮೇದುವಾರಿಕೆ ಸಲ್ಲಿಸಿ ಹೋರಾಟ ನಡೆಸುತ್ತಿದ್ದ ಯಡಿಯೂರಪ್ಪ ಇದೇ ಮೊದಲ ಬಾರಿಗೆ ಉಮೇದುವಾರಿಕೆ ಸಲ್ಲಿಸದೇ ಹೋರಾಟ ನಡೆಸುತ್ತಿದ್ದಾರೆ.

ಇವರ ಸಾಲಿಗೆ ಮತ್ತಷ್ಟು ನಾಯಕರು ಸೇರಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಕೆ.ಎಸ್.ಈಶ್ವರಪ್ಪ ಹಾಗು ಹಾಲಾಡಿ ಶ್ರೀನಿವಾಸ ಶೆಟ್ಟಿ. ಕೆ.ಎಸ್.ಈಶ್ವರಪ್ಪ 1989 ರಿಂದ 2018ರವರೆಗೆ ನಿರಂತರವಾಗಿ ಚುನಾವಣೆ ಎದುರಿಸಿದ್ದಾರೆ. 1989, 1994, 1999, 2004, 2008, 2013, 2018 ರಲ್ಲಿ ಚುನಾವಣೆ ಎದುರಿಸಿದ್ದ ಈಶ್ವರಪ್ಪ 1999 ಮತ್ತು 2013 ರಲ್ಲಿ ಒಟ್ಟು 7 ಬಾರಿ ಚುನಾವಣೆ ಎದುರಿಸಿ ಐದು ಬಾರಿ ಗೆಲುವು ಸಾಧಿಸಿ ಎರಡು ಬಾರಿ ಸೋಲಿನ ರುಚಿ ನೋಡಿದ್ದಾರೆ. ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಅಧಿಕಾರವನ್ನೂ ಅನುಭವಿಸಿದ್ದಾರೆ. ಇದೀಗ ಯುವ ಸಮೂಹದ ಬೆಳವಣಿಗೆಗೆ ಪೂರಕವಾಗಿ ಪಕ್ಷದ ನಿರ್ದೇಶವನ್ನು ಪಾಲಿಸಿ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಚುನಾವಣಾ ಕಣದಲ್ಲಿ ಇಲ್ಲದಿದ್ದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆದಿದ್ದು, ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕಾರ್ಯವನ್ನು ನಡೆಸುವಲ್ಲಿ ನಿರತರಾಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಒಂದು ರೀತಿಯಲ್ಲಿ ಜೋಡೆತ್ತುಗಳ ರೀತಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ಇಬ್ಬರು ಅಗ್ರ ನಾಯಕರು ಎಂದರೆ ಯಡಿಯೂರಪ್ಪ ಮತ್ತು ಈಶ್ವರಪ್ಪ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿಯಂತೂ ಈ ನಾಯಕರ ಕೊಡುಗೆ ಅನನ್ಯ. ಒಟ್ಟಿಗೆ ರಾಜಕೀಯಕ್ಕೆ ಪ್ರವೇಶ ಮಾಡದೇ ಇದ್ದರೂ ಒಂದೇ ಚುನಾವಣೆಯ ಮೂಲಕ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.

ಈ ಸಾಲಿಗೆ ಸೇರುವ ಮತ್ತೊಬ್ಬರು ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ. ಇವರು 1999 ರಿಂದ ನಿರಂತರವಾಗಿ ಆಯ್ಕೆಯಾಗುತ್ತಲೇ ಬಂದಿದ್ದು, ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಎರಡೂವರೆ ದಶದಕ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ. 1999, 2004, 2008, 2013, 2018 ರಲ್ಲಿ ಒಟ್ಟು ಐದು ಬಾರಿ ಸ್ಪರ್ಧೆ ಮಾಡಿದ್ದ ಶೆಟ್ಟರು 2013 ರಲ್ಲಿ ಬಿಜೆಪಿ ವಿಭಜನೆಯಾದರೂ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದ ಹಿರಿಮೆ ಹೊಂದಿದ್ದಾರೆ. ನಿಂತ ಎಲ್ಲ ಚುನಾವಣೆಯಲ್ಲಿಯೂ ಗೆದ್ದ ದಾಖಲೆ ಇವರದ್ದು. ಆದರೆ ಪಕ್ಷ ಹೊಸಬರಿಗೆ ಅವಕಾಶ ಕಲ್ಪಿಸಲು ಯುವಕರನ್ನು ಮುನ್ನಲೆಗೆ ತರಲು ನಡೆಸಿದ ಪ್ರಯೋಗಕ್ಕೆ ಸಮ್ಮತಿಸಿ ಚುನಾವಣಾ ರಾಜಕೀಯದಿಂದ ಹೊರಗುಳಿಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನನ್ನದು: ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.