ETV Bharat / state

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ - Bangalore news

2018ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಸಾಹಿತಿ ಝಲೇಖ ಮಮ್ತಾಜ್, ಬ್ಯಾರಿ ಗಾಯಕ, ಕಲಾವಿದ ಖಾಲಿದ್ ತಣ್ಣೀರುಬಾವಿ ಮತ್ತು ಬ್ಯಾರಿ ಜಾನಪದ ಕಲಾವಿದ ನೂರ್‌ ಮಹಮ್ಮದ್‌ ಅವರು ಭಾಜನರಾಗಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
author img

By

Published : Jul 29, 2019, 5:56 PM IST

ಬೆಂಗಳೂರು: ಸಾಹಿತಿ ಝಲೇಖ ಮಮ್ತಾಜ್ ಸೇರಿ ಬ್ಯಾರಿ ಗಾಯಕ, ಕಲಾವಿದ ಖಾಲಿದ್ ತಣ್ಣೀರುಬಾವಿ ಹಾಗೂ ಬ್ಯಾರಿ ಜಾನಪದ ಕಲಾವಿದ ನೂರ್‌ ಮಹಮ್ಮದ್‌ 2018ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೂಲತಃ ಮಂಗಳೂರಿನವರಾದ ಝಲೇಖ ಅವರು ಬರಹ, ಲೇಖನ, ಕವನಗಳ ಮೂಲಕ ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಉಮ್ಮರೋ ನೆನಪು, ಉಮ್ಮ ಬಾಸೆ, ಭ್ರೂಣ ಹತ್ಯೆ, ಅಲ್ಲಾಹುರೋ ಸೃಷ್ಟಿ ಇವರ ಪ್ರಮುಖ ಕವನಗಳಾಗಿವೆ. ತಲಾಖ್​ ಒರು ಸಮಸ್ಯೆ, ಮಕ್ಕಗ್‌ ಬೇನಾಯೊ ಮೌಲ್ಯಾಧಾರಿತ ಶಿಕ್ಷಣ, ಮಕ್ಕಲೊ ಭವಿಷ್ಯ, ಸ್ವಾತಂತ್ರೈ ಪಡೆ ಒರು ನೆನಪು ಇವರ ಪ್ರಮುಖ ಲೇಖನಗಳು. ಸದ್ಯ ಅಕಾಡೆಮಿಯ ಬ್ಯಾರಿ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2008ರಿಂದ ಪ್ರತಿ ವರ್ಷ ಮೂವರಿಗೆ ಪ್ರಶಸ್ತಿ ನೀಡುತ್ತಿದ್ದು, ಇದುವರೆಗೆ 30 ಮಂದಿ ಪಾತ್ರರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

Intro:Body:ಸಾಹಿತಿ ಝಲೇಖ ಮಮ್ತಾಜ್‌ ಅವರು 2018ನೇ ಸಾಲಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕಾಡೆಮಿಯ ಈ ಪ್ರಶಸ್ತಿಗೆ ಭಾಜನರಾಗುತ್ತಿರುವ ಮೊದಲ ಮಹಿಳೆ ಇವರು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇವರ ಜತೆಯಲ್ಲಿ ಬ್ಯಾರಿ ಗಾಯಕ-ಕಲಾವಿದ ಖಾಲಿದ್‌ ತಣ್ಣೀರುಬಾವಿ ಹಾಗೂ ಬ್ಯಾರಿ ಜಾನಪದ ಕಲಾವಿದ ನೂರ್‌ ಮಹಮ್ಮದ್‌ ಅವರಿಗೂ ಪ್ರಶಸ್ತಿ ಪ್ರಕಟಿಸಲಾಗಿದೆ. ಝಲೇಖ ಮಮ್ತಾಜ್‌ ಅವರು, ಮಂಗಳೂರಿನವರು. ಬರಹ, ಲೇಖನ, ಕವನಗಳ ಮೂಲಕ ಬ್ಯಾರಿ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಉಮ್ಮರೋ ನೆನಪು, ಉಮ್ಮ ಬಾಸೆ, ಭ್ರೂಣ ಹತ್ಯೆ, ಅಲ್ಲಾಹುರೋ ಸೃಷ್ಟಿ ಇವರ ಪ್ರಮುಖ ಕವನಗಳಾಗಿವೆ. ತಲಾಕ್‌ ಒರು ಸಮಸ್ಯೆ, ಮಕ್ಕಗ್‌ ಬೇನಾಯೊ ಮೌಲ್ಯಾದಾರಿತ ಶಿಕ್ಷಣ, ಮಕ್ಕಲೊ ಭವಿಷ್ಯ, ಸ್ವಾತಂತ್ರೈ ಪಡೆ ಒರು ನೆನಪು ಇವರ ಪ್ರಮುಖ ಲೇಖನಗಳು. ಝಲೇಖ, ಶಿವಮೊಗ್ಗದ ಕೋಣಂದೂರಿನಲ್ಲಿ ಹತ್ತನೇ ತರಗತಿ ಓದಿದ್ದು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2008ರಿಂದ ಪ್ರತಿ ವರ್ಷ ಮೂವರಿಗೆ ಪ್ರಶಸ್ತಿ ನೀಡುತ್ತಿದ್ದು, ಇದುವರೆಗೆ 30 ಮಂದಿ ಪಾತ್ರರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಇದೇ ವೇಳೆ ಮಹಮ್ಮದ್‌ ಮತ್ತು ಬಿ.ಎಂ ಉಮ್ಮರ್‌ ಹಾಜಿ ಅವರು ಬ್ಯಾರಿ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.