ETV Bharat / state

ವಿದ್ಯಾರ್ಥಿನಿಯರಿಗೆ ಹಿಜಾಬ್​ ಧರಿಸಲು ಅವಕಾಶ ನೀಡಲು ಆಗ್ರಹ : ಮುಸ್ಲಿಂ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್​​ಗೆ ಕರೆ

ನಾಳೆ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಕ್ಯಾಂಪಸ್ ಫ್ರಂಟ್, ಎಸ್‌ಡಿಪಿಐ ಸಂಘಟನೆಗಳು ಬೆಂಬಲ ನೀಡಿವೆ. ಹಿಜಾಬ್ ವಿಚಾರದಲ್ಲಿ ಸಂವಿಧಾನದ ಹಕ್ಕುಗಳನ್ನು ನಿರ್ಲಕ್ಷಿಸಿ ನೀಡಿದ ಹೈಕೋರ್ಟ್ ತೀರ್ಪು ಖಂಡಿಸುತ್ತೇವೆ ಎಂದು ಹೇಳಿದ್ದಾರೆ..

Karnataka bandh from Muslim organizations tomorrow
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್
author img

By

Published : Mar 16, 2022, 5:46 PM IST

ಬೆಂಗಳೂರು : ಶಾಲಾ-ಕಾಲೇಜುಗಳ ತರಗತಿಯೊಳಗೆ ಹಿಜಾಬ್ ಧರಿಸದಂತೆ ಹೈಕೋರ್ಟ್ ನಿನ್ನೆ (ಮಂಗಳವಾರ) ತೀರ್ಪು ಪ್ರಕಟಿಸಿದ ಹಿನ್ನೆಲೆ ಇದನ್ನು ಧರಿಸುವುದಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳು ನಾಳೆ (ಗುರುವಾರ) ಕರ್ನಾಟಕ ಬಂದ್​ಗೆ ಕರೆ ನೀಡಿವೆ.

ಹಿಜಾಬ್ ನಿರ್ಬಂಧ ಮಾಡಿರುವುದು ನೋವು ತಂದಿದ್ದು, ಈ ಕಾರಣಕ್ಕೆ ಅಮೀರೆ ಇ ಶರೀಯತ್ ಸಗೀರ್ ಅಹಮ್ಮದ್ ರಶಾದಿ ಸಾಹಬ್ ಬಂದ್​​ಗೆ ಕರೆ ಕೊಟ್ಟಿದೆ. ರಾಜಧಾನಿಯ 50 ಸಂಘಟನೆಗಳು ಸೇರಿ ರಾಜ್ಯದ್ಯಂತ ಒಟ್ಟು 100ಕ್ಕೂ ಹೆಚ್ಚು ಸಂಘಟನೆಗಳು ಬಂದ್​ಗೆ ಬೆಂಬಲ ಘೋಷಿಸಿವೆ.

ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯಲಿದೆ. ಬಂದ್​ಗೆ ಎಲ್ಲರೂ ಸಹಕಾರ ನೀಡಿ ಎಂದು ಹಿಮಾಮ್ ಜಾಮಿಯಾ ಮಸೀದಿಯ ಮುಖ್ಯಸ್ಥ ಮೌಲಾನಾ ಮಸೂದ್ ಮನವಿ ಮಾಡಿದ್ದಾರೆ.

ನಾಳೆಯ ಬಂದ್‌ ಕುರಿತಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಮಾತನಾಡಿರುವುದು..

ನಾಳೆ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಕ್ಯಾಂಪಸ್ ಫ್ರಂಟ್, ಎಸ್‌ಡಿಪಿಐ ಸಂಘಟನೆಗಳು ಬೆಂಬಲ ನೀಡಿವೆ. ಹಿಜಾಬ್ ವಿಚಾರದಲ್ಲಿ ಸಂವಿಧಾನದ ಹಕ್ಕುಗಳನ್ನು ನಿರ್ಲಕ್ಷಿಸಿ ನೀಡಿದ ಹೈಕೋರ್ಟ್ ತೀರ್ಪು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್ ಕುರಿತು ತೀರ್ಪು ಹಿನ್ನೆಲೆ : ಧಾರವಾಡದಲ್ಲಿ ಸಿಆರ್​ಪಿಎಫ್ ಪಡೆಯಿಂದ ಪಥಸಂಚಲನ

ಪ್ರಶ್ನಿಸದೇ ಇರಲು ಸಾಧ್ಯವಿಲ್ಲ ಎಂದ ಕ್ಯಾಂಪಸ್ ಫ್ರಂಟ್ : ಅಮೀರೆ ಇ ಶರೀಯತ್ ಸಗೀರ್ ಅಹಮ್ಮದ್ ರಶಾದಿ ಸಾಹಬ್ ಕರೆ ನೀಡಿರುವ ನಾಳಿನ ಬಂದ್​ಗೆ ಬೆಂಬಲ ನೀಡುತ್ತೇವೆ. ಸಂವಿಧಾನ ನೀಡಿರುವ ವೈಯಕ್ತಿಕ ಹಕ್ಕು, ಧಾರ್ಮಿಕ ಹಕ್ಕನ್ನು ಸಂಪೂರ್ಣ ನಿರ್ಲಕ್ಷಿಸಿ ಹೈಕೋರ್ಟ್ ತೀರ್ಪು ನೀಡಿದೆ.

ಇದನ್ನು ಪ್ರಶ್ನಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ, ನಾಳೆ‌ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು ಈ ಬಂದ್​ಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಪದಾಧಿಕಾರಿಗಳು ಕೋರಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.