ETV Bharat / state

ಸ್ಯಾಟಲೈಟ್ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಆದ್ಯತೆ: ಸಾರಿಗೆ ಸಚಿವ ಲಕ್ಷ್ಮಣ ಸವದಿ

ವಿಧಾನಪರಿಷತ್​​ನ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ರಾಜ್ಯದ ಬಸ್​ ನಿಲ್ದಾಣಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲು ಸರ್ಕಾರ ಆದ್ಯತೆ ನೀಡಲಿದೆ ಎಂದರು. ​

Karnataka Assembly session Update
ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಡಿಸಿಎಂ ಹೇಳಿಕೆ
author img

By

Published : Mar 5, 2021, 3:19 PM IST

ಬೆಂಗಳೂರು : ರಾಜ್ಯದ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ವಿಧಾನಪರಿಷತ್​​ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 165 ಬಸ್ ನಿಲ್ದಾಣಗಳ ಪೈಕಿ 66 ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ಇಲ್ಲ. ಅಲ್ಲಿ ಆದಷ್ಟು ಬೇಗ ವಿಶ್ರಾಂತಿ ಗೃಹ ನಿರ್ಮಿಸಲಾಗುತ್ತದೆ ಎಂದರು.

ಈ ವರ್ಷ ಆದಾಯದಲ್ಲಿ ಬಹಳ ಕೊರತೆಯಾಗಿದೆ. 4 ಸಾವಿರ ಕೋಟಿ ರೂ ಆದಾಯ ಕೊರತೆ ಎದುರಾಗಿದೆ. ಸಾರಿಗೆ ನಿಗಮಗಳಿಗೆ 2,980 ಕೋಟಿ ನಿವ್ವಳ ನಷ್ಟವಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ಪ್ರಯಾಣಿಕರು ಒಂದೇ ಕಡೆ ಶಾಪಿಂಗ್ ಮಾಡಿ, ಸಿನಿಮಾ ನೋಡಿ ಮನರಂಜನೆ ಅನುಭವಿಸಿ ನಂತರ ಸಕಾಲಕ್ಕೆ ತಮ್ಮ ಊರಿನ ‌ಬಸ್ ಹಿಡಿದು ಹೋಗಲು ಸ್ಯಾಟಲೈಟ್ ಬಸ್ ನಿಲ್ದಾಣ ಅಗತ್ಯ. ಇದನ್ನು ಆದ್ಯತೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಸ್ಪೀಕರ್ ಮನವಿಗೂ ಕಿವಿಗೊಡದ ಪ್ರತಿಪಕ್ಷದ ಸದಸ್ಯರು.. ಮುಂದುವರಿದ ಪ್ರತಿಭಟನೆ

ಶೌಚಾಲಯ ನಿರ್ವಹಣೆಗೆ ಹೊರಗುತ್ತಿಗೆ : ಬಸ್ ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ವಹಣೆಗೆ ಹೊರಗುತ್ತಿಗೆ ಬೇಡಿಕೆ ಬಂದಿದೆ. ಇಲಾಖೆಯಿಂದ ಕೆಲವು ನಿರ್ವಹಣೆ ಮಾಡಲಾಗುತ್ತಿದೆ, ಕೆಲವು ಹೊರಗುತ್ತಿಗೆಗೆ ಕೊಡಲಾಗಿದೆ. ಇಲಾಖೆಯ ನಿರ್ವಹಣೆ ಸರಿಯಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಅವುಗಳನ್ನೂ ಹೊರಗುತ್ತಿಗೆ ಕೊಡಲಾಗುತ್ತದೆ ಎಂದರು.

ಮ್ಯಾಕ್ಸಿ ಕ್ಯಾಬ್ 19+1, 20+1 ಗೆ ಬದಲಿಸಿಕೊಳ್ಳಬೇಕು: ಸಾರಿಗೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಸಾರಿಗೆ ನಿಯಮ ಉಲ್ಲಂಘಿಸುವ ಮ್ಯಾಕ್ಸಿ ಕ್ಯಾಬ್​ಗಳ ವಿರುದ್ಧ ಕ್ರಮಕೈಗೊಳ್ಳುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರಸನ್ನಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, 12 ಆಸನಗಳ ಮ್ಯಾಕ್ಸಿಕ್ಯಾಬ್ ವಾಹನದಲ್ಲಿ ಹೆಚ್ಚು ಜನರನ್ನು ಹಾಕಿಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ನಾನು ಅಧಿಕಾರಕ್ಕೆ ಬಂದ ನಂತರ 19+1, 20+1 ಎಂದು ತೆರಿಗೆ ಫಿಕ್ಸ್ ಮಾಡಿದ್ದೇನೆ, ಖಾಸಗಿಯವರು ಪರವಾನಗಿ ಪಡೆಯಬೇಕು, 12 ರಿಂದ 19+1, 20+1 ಎಂದು ಆಸನಗಳ ಪರವಾನಗಿ ಬದಲಿಸಿಕೊಳ್ಳದಿದ್ದಲ್ಲಿ ದಂಡ ವಿಧಿಸಲು ಸೂಚಿಸಲಾಗಿದೆ ಎಂದರು.

ಆಟೋಗಳು ರೈಲು ನಿಲ್ದಾಣಗಳಲ್ಲಿ ಕರೆದ ಕಡೆ ಬರಲ್ಲ ಎನ್ನುವ ಆರೋಪ ಇದೆ. ‌ಪ್ರೀಪೈಡ್​ನವರು ಪ್ರಯಾಣಿಕರು ಕರೆದ ಕಡೆ ಹೋಗಲೇ ಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಸಾರಿಗೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.