ETV Bharat / state

ವಿಧಾನಸಭೆಯಲಿ 3ನೇ ದಿನ.. ಆಡಳಿತ-ಪ್ರತಿಪಕ್ಷಗಳ 'ತೈಲ' ವಾಗ್ಯುದ್ಧ.. ಸರ್ಕಾರಕ್ಕೆ ಮೈ'ಶುಗರ್‌'ತಂದ ಮೀಸಲು ಹೆಚ್ಚಳ.. - ಮೂರನೇ ದಿನದ ಕಲಾಪದ ಪ್ರಮುಖ ಹೈಲೈಟ್ಸ್​

ತೈಲ ಬೆಲೆ ಏರಿಕೆ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಅವರ ದೆಹಲಿ ಪೊಲಿಟಿಕ್ಸ್ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಸ್ಪೀಕರ್ ಕಾಗೇರಿ ಚರ್ಚೆ ವೇಳೆ ಸಿದ್ದರಾಮಯ್ಯರನ್ನು ದೆಹಲಿಗೆ ಕಳುಹಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ಸಿದ್ದರಾಮಯ್ಯ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿಯನ್ನು ಪ್ರಶ್ನಿಸಿದ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯ ಅವರನ್ನು ಪಾರ್ಲಿಮೆಂರ್ಟ್‌ಗೆ ಕಳಿಸುವ ಉದ್ದೇಶ ಇದ್ಯಾ? ಎಂದು ಪ್ರಶ್ನಿಸಿದರು..

Assembly session
ವಿಧಾನಸಭೆ ಅಧಿವೇಶನ
author img

By

Published : Sep 15, 2021, 8:56 PM IST

ಬೆಂಗಳೂರು : ವಿಧಾನಸಭೆಯ 3ನೇ ದಿನದ ಕಲಾಪ ಗಂಭೀರ ಚರ್ಚಗೆ ಸಾಕ್ಷಿಯಾಯಿತು. ಸಿದ್ದರಾಮಯ್ಯನವರ ತೈಲ ಬೆಲೆ ಏರಿಕೆ ಮೇಲಿನ ಚರ್ಚೆ ಕಲಾಪದ ಪ್ರಮುಖ ಹೈಲೈಟ್ಸ್ ಆಗಿತ್ತು. ತೈಲ ಬೆಲೆ ಏರಿಕೆ ಸಂಬಂಧ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಆಡಳಿತ ಪಕ್ಷ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು. ಬೆಲೆ ಏರಿಕೆ ಮೇಲಿನ ಚರ್ಚೆ ಸಿದ್ದರಾಮಯ್ಯ ಹಾಗೂ ಆಡಳಿತ ಪಕ್ಷ ಸದಸ್ಯರ ನಡುವಿನ ಕೆಲ ಸ್ವಾರಸ್ಯಕರ ಚರ್ಚೆಗೂ ಸಾಕ್ಷಿಯಾಯಿತು.

ತೈಲ‌ ಬೆಲೆ‌ ಏರಿಕೆ ಮೇಲೆ ಬಿಸಿ ಬಿಸಿ ಚರ್ಚೆ : ನಿಯಮ 69ರಡಿ ಬೆಲೆ ಏರಿಕೆ ಮೇಲೆ ಚರ್ಚೆ ಆರಂಭಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು, ಅಕ್ಕಿ,ಬೇಳೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನ ಸಾಮಾನ್ಯರು ಜೀವನ ಮಾಡುವುದೇ ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಾಪದಲ್ಲಿ ವಾಕ್ಸಮರ : ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಪರಸ್ಪರ ಮಾತಿನ ಸಮರ, ಕೂಗಾಟ ನಡೆದು ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ರವರು ಎದ್ದುನಿಂತು ಬೆಲೆ ಏರಿಕೆ ನಿರಂತರ ಪ್ರಕ್ರಿಯಿಸಿ, ಸುಮ್ಮನೆ ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದಾಗ, ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಜೆಡಿಎಸ್ ಸದಸ್ಯರಿಂದ ಧರಣಿ : ನಮ್ಮ ನೋವನ್ನು ಹೇಳಲು ಅವಕಾಶ ಕೊಡಿ. ನಾನು ಅನುದಾನ ಕೇಳಿಲ್ಲ‌. ಹಕ್ಕುಚ್ಯುತಿ ಪ್ರಸ್ತಾವನೆಗೆ ಅವಕಾಶ ನೀಡದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಬೆದರಿಕೆ ಹಾಕಿದ ಘಟನೆಯೂ ವಿಧಾನಸಭೆಯಲ್ಲಿ ನಡೆಯಿತು.

ಮೈಶುಗರ್ ಕಾರ್ಖಾನೆ ಖಾಸಗೀಕರಣದ ಪ್ರತಿಧ್ವನಿ : ಜೆಡಿಎಸ್‍ ಸದಸ್ಯ ಡಾ.ಅನ್ನದಾನಿ ಅವರು ಮಂಡ್ಯ ಜಿಲ್ಲೆಯ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಕುರಿತಂತೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಶತಮಾನಗಳ ಇತಿಹಾಸವುಳ್ಳ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಇದನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸದೆ ಸರ್ಕಾರದ ಸ್ವಾಮ್ಯದಲ್ಲೇ ನಡೆಯಬೇಕೆಂದು ಒತ್ತಾಯಿಸಿದರು.

ಹೆಚ್ ಡಿ ಕುಮಾರಸ್ವಾಮಿಯವರು ಸಿಎಂ ಆಗಿದ್ದ ಸಂದರ್ಭದಲ್ಲಿ ಬಜೆಟ್‍ನಲ್ಲಿ ₹100 ಕೋಟಿ ಅನುದಾನವನ್ನು ನೀಡಿದ್ದರು. ಈ ಸಕ್ಕರೆ ಕಾರ್ಖಾನೆಗೂ, ಮಂಡ್ಯಕ್ಕೂ ಅವಿನಾಭಾವ ಸಂಬಂಧವಿದೆ. ರೈತರು ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಸರ್ಕಾರ ಚರ್ಚೆಗೆ ಅವಕಾಶ ಕೊಡಬೇಕೆಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಬಳಿಕ ಸ್ಪೀಕರ್ ಅವಕಾಶ ನೀಡುವ ಬಗ್ಗೆ ಭರವಸೆ ನೀಡಿದರು.

ನಿಮ್ಹಾನ್ಸ್ ಅವ್ಯವಸ್ಥೆ ಬಗ್ಗೆ ಕಿಡಿ : ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯ ಅವ್ಯವಸ್ಥೆಯ ಬಗ್ಗೆ ಆಡಳಿತ ಪಕ್ಷದ ಶಾಸಕರೆ ಅಸಮಾಧಾನ ಹೊರ ಹಾಕಿದ ಪ್ರಸಂಗವೂ ವಿಧಾನಸಭೆಯಲ್ಲಿ ಇಂದು ನಡೆಯಿತು. ಶೂನ್ಯ ವೇಳೆಯ ನಂತರ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರು ನಿಮ್ಹಾನ್ಸ್‌ನಲ್ಲಿ ತಮ್ಮ ಕ್ಷೇತ್ರದ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರಿಗೆ ವೆಂಟಿಲೇಟರ್ ಸಿಗದೆ ಇರುವ ಬಗ್ಗೆ ಅಸಮಾಧಾನ ಹೊರ ಹಾಕಿದರು.

ನಮ್ಮ ಕ್ಷೇತ್ರದ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಕರೆದೊಯ್ದಾಗ ವೆಂಟಿಲೇಟರ್ ಇಲ್ಲ ಎಂದು ಕಳುಹಿಸಿದ್ದಾರೆ. ಹೀಗಾದರೆ ಹೇಗೆ?, ಶಾಸಕರ ಮಾತಿಗೂ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೆಂಟಿಲೇಟರ್ ಸಿಗದೆ ನನ್ನ ಸಂಬಂಧಿಕರನ್ನು ಕಳೆದುಕೊಂಡಿದ್ದೇನೆ ಎಂದು ಗದ್ಗರಿತರಾದರು. ಶಾಸಕರ ಪ್ರಸ್ತಾಪಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಮ್ಹಾನ್ಸ್‌ನ ನಿರ್ದೇಶಕರಿಗೆ ಮಾತನಾಡಿ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯರ ದೆಹಲಿ ಪೊಲಿಟಿಕ್ಸ್ ಬಗ್ಗೆ ಸ್ವಾರಸ್ಯಕರ ಚರ್ಚೆ : ತೈಲ ಬೆಲೆ ಏರಿಕೆ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಅವರ ದೆಹಲಿ ಪೊಲಿಟಿಕ್ಸ್ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಸ್ಪೀಕರ್ ಕಾಗೇರಿ ಚರ್ಚೆ ವೇಳೆ ಸಿದ್ದರಾಮಯ್ಯರನ್ನು ದೆಹಲಿಗೆ ಕಳುಹಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದರು.

ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ಸಿದ್ದರಾಮಯ್ಯ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿಯನ್ನು ಪ್ರಶ್ನಿಸಿದ ಸ್ಪೀಕರ್ ಕಾಗೇರಿ, ಸಿದ್ದರಾಮಯ್ಯ ಅವರನ್ನು ಪಾರ್ಲಿಮೆಂರ್ಟ್‌ಗೆ ಕಳಿಸುವ ಉದ್ದೇಶ ಇದ್ಯಾ? ಎಂದು ಪ್ರಶ್ನಿಸಿದರು.

ಆಗ ಕಾನೂನು ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ಕರ್ನಾಟಕದ ಕಹಳೆಯನ್ನು ದಿಲ್ಲಿಯಲ್ಲಿ ಊದಬೇಕು ಎಂದರು. ಆಗ ಸಚಿವ ಆರ್.ಅಶೋಕ್, ಸಿದ್ದರಾಮಯ್ಯ ಅವರು ಇಲ್ಲೇ ಇರಬೇಕು. ಅವರು ದೆಹಲಿಗೆ ಹೋಗುವುದು ಬೇಡ ಎಂದರು.

ಮೀಸಲು ಹೆಚ್ಚಳದ ಧ್ವನಿ, ಧರಣಿ : ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಳದ ಧ್ವನಿ ವಿಧಾನಸಭೆಯಲ್ಲಿ ಮತ್ತೆ ಮೊಳಗಿತು. ಸಮುದಾಯದ ಐದು ಶಾಸಕರು ಸರ್ಕಾರದ ಉತ್ತರಕ್ಕೆ ತೃಪ್ತಿಯಾಗದೆ ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸಿದರು.

ಪರಿಶಿಷ್ಟ ಪಂಗಡದವರ ಜೊತೆಗೆ ಪರಿಶಿಷ್ಟ ಜಾತಿಯವರ ಮೀಸಲು ಏರಿಕೆ ಬೇಡಿಕೆಯಿದೆ. ಮೀಸಲು ಹೆಚ್ಚಳಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇತ್ತೀಚಿನ ತೀರ್ಪು ಹಿನ್ನೆಲೆಯಲ್ಲಿ ವಿಸ್ತೃತ ಚರ್ಚೆಗೆ ಸದನ ಒಮ್ಮತ ವ್ಯಕ್ತಪಡಿಸಿದಾಗ ಸ್ಪೀಕರ್ ಸಮ್ಮತಿಸಿದರು. ಗಮನಸೆಳೆಯುವ ಸೂಚನೆಯಡಿ ಕಾಂಗ್ರೆಸ್​​​​ನ ಜೆ ಎನ್ ಗಣೇಶ್ ಈ ವಿಷಯ ಪ್ರಸ್ತಾಪಿಸಿ, ಎಸ್ಟಿ ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕು. ಈ ಕುರಿತು ನ್ಯಾಯಮೂರ್ತಿ ಜಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗದ ವರದಿಯನ್ನು ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಸಚಿವ ಬಿ.ಶ್ರೀರಾಮುಲು ಉತ್ತರಿಸಿ, ಆಯೋಗದ ವರದಿ ಪರಿಶೀಲನೆಗೆ ಸಚಿವ ಸಂಪುಟದ ಉಪ ಸಮಿತಿ ಪರಿಶೀಲನೆ, ಕುರುಬ ಸಮುದಾಯದ ಎಸ್ಟಿಗೆ ಸೇರ್ಪಡೆ ಸೇರಿದಂತೆ ವಿವಿಧ ಸಮುದಾಯಗಳ ಬೇಡಿಕೆ ಕುರಿತು ವಿವರಣೆ ನೀಡುತ್ತಿದ್ದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಿ, ಈ ವಿಷಯವನ್ನು ಅರ್ಧ ತಾಸಿನ ಚರ್ಚೆಗೆ ಪರಿವರಿರ್ತಿಸಬೇಕು ಎಂದು ಕೋರಿದಾಗ, ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದ್ದರಿಂದ ಸ್ಪೀಕರ್ ಅಸ್ತು ಎಂದರು.

ಇದನ್ನೂ ಓದಿ: ಕಳೆದ ವರ್ಷದ ಕರ್ನಾಟಕದಲ್ಲಿ ನಡೆದ ಅಪರಾಧ ಪ್ರಕರಣಗಳೆಷ್ಟು? ಕುತೂಹಲಕಾರಿ ಸಂಗತಿ ತಿಳಿಸುತ್ತೆ NCRB ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.