ETV Bharat / state

ನಾಮಪತ್ರಗಳ ಮಹಾಪೂರ: ಬೃಹತ್ ಮೆರವಣಿಗೆ ಮೂಲಕ ಘಟಾನುಘಟಿಗಳಿಂದ ‌ಉಮೇದುವಾರಿಕೆ ಸಲ್ಲಿಕೆ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಅಶ್ವತ್ಥ ನಾರಾಯಣ, ಜೆ.ಸಿ.ಮಾಧುಸ್ವಾಮಿ, ಡಾ.ಕೆ ಸುಧಾಕರ್ ಸೇರಿ ಅನೇಕರು ಸೋಮವಾರ ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದರು.

Candidates filed nomination
ಘಟಾನುಘಟಿಗಳಿಂದ ‌ಉಮೇದುವಾರಿಕೆ ಸಲ್ಲಿಕೆ..
author img

By

Published : Apr 18, 2023, 9:19 AM IST

ಬೆಂಗಳೂರು: ವಿಧಾನಸಭೆ ಚುನಾವಣೆ ಅಖಾಡ ರಂಗೇರುತ್ತಿದೆ.‌ ಸೋಮವಾರ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ರಣಕಣದಲ್ಲಿನ‌ ಸಮರಕ್ಕೆ ಮುನ್ನಡಿ ಬರೆದಿದ್ದಾರೆ. ನಾಮಪತ್ರ ಸಲ್ಲಿಕೆಗೆ ಏ.20 ಕೊನೆಯ ದಿನವಾಗಿದೆ. ಸೋಮವಾರ ಶುಭದಿನ‌ವಾದ ಕಾರಣ ಜಾತ್ರೋಪಾದಿಯಲ್ಲಿ ಅಭ್ಯರ್ಥಿಗಳು ರಾಜ್ಯಾದ್ಯಂತ ನಾಮಪತ್ರ ಸಲ್ಲಿಕೆ ಮಾಡಿದರು.‌

1,263 ನಾಮಪತ್ರ ಸಲ್ಲಿಕೆ: ವಿವಿಧ ಪಕ್ಷಗಳ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿ, ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವ ಅಶ್ವತ್ಥ ನಾರಾಯಣ, ಜೆ.ಸಿ.ಮಾಧುಸ್ವಾಮಿ, ಡಾ.ಕೆ ಸುಧಾಕರ್ ಸೇರಿ ಅನೇಕರು ಸೋಮವಾರ ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿ ಸೋಮವಾರ 842 ನಾಮಪತ್ರಗಳು ಸಲ್ಲಿಕೆಯಾಗಿವೆ. ಈವರೆಗೆ ಒಟ್ಟು 1,263 ನಾಮಪತ್ರಗಳು ಸಲ್ಲಿಕೆಯಾಗಿವೆ.

ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವರುಣ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಜೆ.ಸಿ.ಮಧುಸ್ವಾಮಿ, ಔರಾದ್ ಕ್ಷೇತ್ರದಿಂದ ಪ್ರಭು ಚವ್ಹಾಣ್, ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಮನಗರ ಕ್ಷೇತ್ರದಿಂದ ನಿಖಿಲ್‌ ಕುಮಾರಸ್ವಾಮಿ, ಸೊರಬ ಕ್ಷೇತ್ರದಿಂದ ಕುಮಾರ್​ ಬಂಗಾರಪ್ಪ, ಮಧು ಬಂಗಾರಪ್ಪ, ಕನಕಪುರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್, ಗದಗ ಕ್ಷೇತ್ರದಿಂದ ಹೆಚ್.ಕೆ.ಪಾಟೀಲ್, ಹಳಿಯಾಳ ಕ್ಷೇತ್ರದಿಂದ ಆರ್.ವಿ.ದೇಶಪಾಂಡೆ, ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಸೇರಿದಂತೆ ಇತರೆ ಪ್ರಮುಖರು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಇನ್ನುಳಿದಂತೆ ಸಚಿವರಾದ ಎಸ್.ಟಿ ಸೋಮಶೇಖರ್, ಎಂ.ಟಿ.ಬಿ ನಾಗರಾಜ್, ಡಾ.ಕೆ.ಸುಧಾಕರ್, ಕೆ.ಸಿ ನಾರಾಯಣ ಗೌಡ, ಶಂಕರ ಪಾಟೀಲ್ ಮುನೇನಕೊಪ್ಪ, ಕೈ ನಾಯಕರಾದ ಈಶ್ವರಖಂಡ್ರೆ, ರಾಜಶೇಖರ್ ಪಾಟೀಲ್, ಶಾಮನೂರು ಶಿವಶಂಕರಪ್ಪ, ಶರತ್ ಬಚ್ಚೇಗೌಡ, ಎಸ್.ಎಸ್.ಮಲ್ಲಿಕಾರ್ಜುನ, ಹೆಚ್.ಆಂಜನೇಯ, ಚಲುವರಾಯಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದರು. ಜೆಡಿಎಸ್​​ನ ಹೆಚ್.ಡಿ. ರೇವಣ್ಣ, ಬಿಜೆಪಿಯ ಪ್ರೀತಂ ಗೌಡ, ಸಂತೋಷ ಲಾಡ್, ವಿಜಯ ಕುಲಕರ್ಣಿ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಪ್ರಸಾದ್ ಅಬ್ಬಯ್ಯ, ಪರಣ್ಣ ಮುನವಳ್ಳಿ, ಅರುಣ್‌ ಕುಮಾರ್ ಪೂಜಾರ, ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಆರ್.ಪ್ರಕಾಶ್, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ರಾಜುಗೌಡ, ಹರೀಶ್ ಪೂಂಜಾ, ರಾಜಾವೆಂಕಟ್ಟಪ್ಪ ನಾಯಕ ಸೇರಿದಂತೆ ಇತರರು ನಾಮಪತ್ರ ಸಲ್ಲಿಸಿದರು. ಇತ್ತ ಕಾಂಗ್ರೆಸ್ ನಾಯಕ ಬಾಬುರಾವ್ ಚಿಂಚನಸೂರು ಗಾಯಗೊಂಡಿರುವ ಹಿನ್ನೆಲೆ ಅವರ ಪತ್ನಿ ಅಮರೇಶ್ವರಿ ಸೂಚಕರಾಗಿ ನಾಮಪತ್ರ ಸಲ್ಲಿಸಿದರು.

ಯಾವ ಪಕ್ಷದಿಂದ ಎಷ್ಟು ನಾಮಪತ್ರ?: ರಾಷ್ಟ್ರ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯಿಂದ 198, ಕಾಂಗ್ರೆಸ್‌ನಿಂದ 195, ಜೆಡಿಎಸ್‌ನಿಂದ 86, ಎಎಪಿಯಿಂದ 50, ಬಿಎಸ್‌ಪಿ 17 ನಾಮಪತ್ರಗಳು ಸಲ್ಲಿಕೆಯಾಗಿವೆ. ನೋಂದಾಯಿತ ಪಕ್ಷಗಳಿಂದ ಗುರುತಿಸಿರುವ 134 ನಾಮಪತ್ರಗಳನ್ನು ಸಲ್ಲಿಕೆ ಮಾಡಲಾಗಿದೆ. ಇನ್ನು 161 ನಾಮಪತ್ರಗಳು ಪಕ್ಷೇತರರಿಂದ ಸಲ್ಲಿಕೆಯಾಗಿವೆ. ಸಲ್ಲಿಕೆಯಾಗಿರುವ 842 ನಾಮಪತ್ರಗಳ ಪೈಕಿ 782 ನಾಮಪತ್ರಗಳನ್ನು ಪುರುಷರು, 60 ನಾಮಪತ್ರಗಳನ್ನು ಮಹಿಳೆಯರು ಸಲ್ಲಿಸಿದರು. ಹಲವು ಅಭ್ಯರ್ಥಿಗಳು ಎರಡೆರಡು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.

ಪೂಜೆ, ಮೆರವಣಿಗೆ‌ ಮೂಲಕ ನಾಮಪತ್ರ ಸಲ್ಲಿಕೆ: ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮುನ್ನ ಟೆಂಪಲ್ ರನ್ ಮಾಡಿ, ಪೂಜೆ ನೆರವೇರಿಸಿದರು.‌ ನಾಮಪತ್ರವನ್ನು ದೇವರ ಮುಂದೆ ಇರಿಸಿ ಪೂಜೆ ಕೈಗೊಂಡು ಬಳಿಕ ಮೆರವಣಿಗೆ ಮೂಲಕ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಅನೇಕ ನಾಯಕರು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ, ಡಿಕೆಶಿ, ಡಾ.ಕೆ.ಸುಧಾಕರ್, ಕುಮಾರ ಬಂಗಾರಪ್ಪ, ನಿಖಿಲ್ ಕುಮಾರಸ್ವಾಮಿ, ಆರ್. ಅಶೋಕ್, ಗೋಪಾಲಯ್ಯ ಸೇರಿ ಹಲವು ನಾಯಕರು ಜನಸಾಗರದೊಂದಿಗೆ ಮೆರವಣಿಗೆ ಹೋಗಿ ನಾಮಪತ್ರ ಸಲ್ಲಿಸಿದರು. ಆ ಮೂಲಕ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು.

ಬೆಂಗಳೂರಲ್ಲೂ ಘಟಾನುಘಟಿಗಳಿಂದ ಉಮೇದುವಾರಿಕೆ: ಸೋಮವಾರ ಬೆಂಗಳೂರಲ್ಲೂ ನಾಮಪತ್ರ ಸಲ್ಲಿಕೆಯ ಜಾತ್ರೆ ಏರ್ಪಟ್ಟಿತು. ಸಚಿವರಾದ ಆರ್.ಅಶೋಕ್, ಅಶ್ವತ್ಥ ನಾರಾಯಣ, ಗೋಪಾಲಯ್ಯ, ಎಸ್.ಟಿ ಸೋಮಶೇಖರ್ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮುನ್ನ ದೇವಸ್ಥಾನಗಳಿಗೆ ತೆರಳಿ ಪೂಜೆ ನೆರವೇರಿಸಿ ಬಳಿಕ ಮೆರವಣಿಗೆ ಮೂಲಕ ಸಾಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ, ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಎಂ.ಕೃಷ್ಣಪ್ಪ, ಭಾಸ್ಕರ್ ರಾವ್ ತಮ್ಮ ನಾಮಪತ್ರ ಸಲ್ಲಿಸಿದರು. ಇತ್ತ ಕಾಂಗ್ರೆಸ್​​ನಿಂದ ದಿನೇಶ್ ಗುಂಡೂರಾವ್, ಶಿವಾಜಿನಗರ ಅಭ್ಯರ್ಥಿ ರಿಜ್ವಾನ್ ಅರ್ಷದ್, ಸೌಮ್ಯಾ ರೆಡ್ಡಿ, ಕುಸುಮಾ ಸೇರಿ ಕಾಂಗ್ರೆಸ್ 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇನ್ನು ಚಿಕ್ಕಪೇಟೆ ಪಕ್ಷೇತರರಾಗಿ ಕೈ ಬಂಡಾಯ ಅಭ್ಯರ್ಥಿ ಗಂಗಾಂಬಿಕೆ, ಪುಲಕೇಶಿನಗರ ಕೈ ಬಂಡಾಯ ಅಭ್ಯರ್ಥಿ ಅಖಂಡ ಶ್ರೀನಿವಾಸಮೂರ್ತಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: ಡಿ ಕೆ ಶಿವಕುಮಾರ್ ₹1,414 ಕೋಟಿ ಮೌಲ್ಯದ ಆಸ್ತಿ ಒಡೆಯ..​ ಹೆಚ್​ ಡಿ ಕುಮಾರಸ್ವಾಮಿ ಒಟ್ಟು ಆಸ್ತಿ ಎಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.