ETV Bharat / state

ಮತ್ತೆ ಜಯನಗರ ಗೆಲ್ತಾರಾ ಸೌಮ್ಯಾ ರೆಡ್ಡಿ?: ಕುತೂಹಲ ಹೆಚ್ಚಿಸಿದ ಬಿಜೆಪಿ ಟಿಕೆಟ್​

author img

By

Published : Mar 23, 2023, 3:11 PM IST

ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸೌಮ್ಯಾ ರೆಡ್ಡಿ ಅವರೇ ಅಭ್ಯರ್ಥಿ ಆಗುವುದು ಖಚಿತ. ಬಿಜೆಪಿಯಲ್ಲಿ ಟಿಕೆಟ್​ಗಾಗಿ ಸಾಕಷ್ಟು ಪೈಪೋಟಿ ಇದೆ.

karnataka-assembly-election-2023: Report of Jayanagar assembly constituency
ಮತ್ತೆ ಜಯನಗರ ಗೆಲ್ತಾರಾ ಸೌಮ್ಯಾ ರೆಡ್ಡಿ?: ಕುತೂಹಲ ಹೆಚ್ಚಿಸಿದ ಬಿಜೆಪಿ ಟಿಕೆಟ್​

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಜಯನಗರ ವಿಧಾನಸಭೆ ಕ್ಷೇತ್ರವು ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ಹಾಲಿ ಶಾಸಕಿ ಸೌಮ್ಯಾ ರೆಡ್ಡಿ ಕಾಂಗ್ರೆಸ್​ನಿಂದ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದೆಡೆ, ಬಿಜೆಪಿ ಯಾರಿಗೆ ಟಿಕೆಟ್​ ನೀಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

2008 ಮತ್ತು 2013ರಲ್ಲಿ ಬಿಜೆಪಿಯ ವಿಜಯ್​ ಕುಮಾರ್ ಅವರಿಗೆ ಮಣೆ ಹಾಕಿದ್ದರು. 2018ರ ಚುನಾವಣೆಯಲ್ಲೂ ಅವರ ಪರವಾದ ಅಲೆಯೇ ಇತ್ತು. ಆದರೆ, ಚುನಾವಣೆ ದಿನ ಸಮೀಪದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನೆಲೆ ಒಂದು ತಿಂಗಳು ತಡವಾಗಿ ಚುನಾವಣೆ ನಡೆದಿತ್ತು. ಆಗ ಪಕ್ಕದ ಬಿಟಿಎಂ ಲೇಔಟ್​ ಶಾಸಕ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ರಾಮಲಿಂಗರೆಡ್ಡಿ ತಮ್ಮ ಪುತ್ರಿ ಸೌಮ್ಯಾ ರೆಡ್ಡಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡರು. ಈ ಸಮಯದಲ್ಲಿ ಕಾಂಗ್ರೆಸ್ - ಜೆಡಿಎಸ್​ ಮೈತ್ರಿ ಸರ್ಕಾರ ಇದ್ದ ಕಾರಣ ಸೌಮ್ಯಾ ರೆಡ್ಡಿ ಅವರನ್ನು ಮತದಾರರು ಕೈ ಹಿಡಿದಿದ್ದರು.

2018ರಲ್ಲಿ ವಿಜಯ್​ ಕುಮಾರ್ ಸೋದರ ಬಿ.ಎನ್​. ಪ್ರಹ್ಲಾದ್​ರನ್ನು ಕಣಕ್ಕಿಳಿಸಿ ಗೆಲ್ಲುವ ಬಿಜೆಪಿ ಆಶಯಕ್ಕೆ ಬೆಂಬಲ ಸಿಗಲಿಲ್ಲ. ಬಿಟಿಎಂ ಲೇಔಟ್​ ಕ್ಷೇತ್ರದಲ್ಲಿ ರಾಮಲಿಂಗರೆಡ್ಡಿ ನಿರಂತರವಾಗಿ ಗೆಲ್ಲುತ್ತಾ ಬಂದಿದ್ದರೂ, ಇಲ್ಲಿನ ಅಭಿವೃದ್ಧಿ ಹಿಂದೆ ಸೌಮ್ಯಾ ರೆಡ್ಡಿ ಕೆಲಸ ಇದೆ ಎಂಬ ಮಾತಿದೆ. ಆದರೆ ಜಯನಗರದಂತ ವಾಣಿಜ್ಯ ಚಟುವಟಿಕೆಯಿಂದ ಕೂಡಿರುವ ಕ್ಷೇತ್ರದಲ್ಲಿ ಅಂತಹ ನಿರೀಕ್ಷಿತ ಅಭಿವೃದ್ಧಿ ಕಳೆದ ಐದು ವರ್ಷದಲ್ಲಿ ಆಗಿಲ್ಲ. ಕೆಲವೆಡೆ ಉತ್ತಮ ಅಭಿವೃದ್ಧಿ ಆಗಿದ್ದರೆ, ಹಲವೆಡೆ ರಸ್ತೆ, ಒಳಚರಂಡಿ ಸಮಸ್ಯೆ ಕಾಡುತ್ತಲೇ ಇದೆ. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಿನ್ನಡೆ ಇದೆ. ಪ್ರಮುಖ ಆಸ್ಪತ್ರೆಗಳು, ವಾಣಿಜ್ಯ ಮಳಿಗೆಗಳು, ಶಾಲಾ, ಕಾಲೇಜುಗಳು, ಪ್ರಮುಖ ನಿಲ್ದಾಣ, ಮೆಟ್ರೊ ರೈಲು ಸಂಪರ್ಕ, ಉದ್ಯಾನಗಳು ಇದ್ದು, ಜಯನಗರದ ನಾಗರಿಕರ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ ಎನ್ನುವ ಮಾತಿದೆ.

ಜಯನಗರ ವಿಧಾನಸಭೆ ಕ್ಷೇತ್ರದ ಮಾಹಿತಿ
ಜಯನಗರ ವಿಧಾನಸಭೆ ಕ್ಷೇತ್ರದ ಮಾಹಿತಿ

ಪ್ರಸ್ತುತ ಸ್ಥಿತಿ: ಕಾಂಗ್ರೆಸ್ ಪಕ್ಷದಲ್ಲಿ ಸೌಮ್ಯಾ ರೆಡ್ಡಿ ಅವರೇ ಅಭ್ಯರ್ಥಿ ಆಗುವುದು ಖಚಿತ. ಆಕಾಂಕ್ಷಿಯಾಗಿ ಅರ್ಜಿ ಸಹ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್​ಗಾಗಿ ಸಾಕಷ್ಟು ಪೈಪೋಟಿ ಇದೆ. ಮಾಜಿ ಕಾರ್ಪೋರೇಟರ್ ಸಿ.ಕೆ. ರಾಮಮೂರ್ತಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್​.ಆರ್​. ರಮೇಶ್​, ಆಮ್​ ಆದ್ಮಿ ಪಕ್ಷ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ.

ಇದರ ಕೇಂದ್ರದ ಮಾಜಿ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ಪತ್ನಿ ಹಾಗೂ ಸಮಾಜ ಸೇವಕಿ ತೇಜಸ್ವಿನಿ ಅವರಿಗೆ ಟಿಕೆಟ್​ ನೀಡಲು ಬಿಜೆಪಿ ನಿರ್ಧರಿಸಿದೆ ಎಂಬ ಮಾತಿದೆ. ಉಳಿದಂತೆ ಜೆಡಿಎಸ್​ನಿಂದ ಕಳೆದ ಸಾರಿ ಕಾಳೇಗೌಡರು ಅಭ್ಯರ್ಥಿ ಆಗಿದ್ದರು. ಆದರೆ ಈ ಬಾರಿ ಬೇರೊಬ್ಬರಿಗೆ ಟಿಕೆಟ್ ನೀಡಲು ಜೆಡಿಎಸ್​ ನಿರ್ಧರಿಸಿದೆ ಎಂಬ ಮಾಹಿತಿ ಇದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 54,457 ಮತಗಳನ್ನು ಪಡೆದಿದ್ದರು. ಈ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ಬಾಬು ವಿರುದ್ಧ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಹ್ಲಾದ್ ಬಾಬು 51,568 ಮತಗಳನ್ನು ಗಳಿಸಿದ್ದರು. ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,861 ಮತಗಳನ್ನು ಪಡೆದಿದ್ದರು. 848 ನೋಟಾ ಮತಗಳು ಚಲಾವಣೆಯಾಗಿದ್ದವು.

ಹಿಂದಿನ ಚುನಾವಣೆ ಸಂದರ್ಭ ಏಳು ವಾರ್ಡ್​ಗಳ ಪೈಕಿ ಆರರಲ್ಲಿ ಬಿಜೆಪಿ ಸದಸ್ಯರಿದ್ದರೂ ಪಕ್ಷದ ಅಭ್ಯರ್ಥಿಗೆ ಸೋಲಾಗಿತ್ತು. ಆದರೆ ಈ ಬಾರಿ ಬಿಬಿಎಂಪಿ ಅಸ್ತಿತ್ವದಲ್ಲಿಲ್ಲ. ಎರಡು ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ 65ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರು, ಸುಮಾರು 35 ಸಾವಿರದ ಒಕ್ಕಲಿಗ ಮತದಾರರು ಇದ್ದಾರೆ. ಇನ್ನುಳಿದಂತೆ ಎಲ್ಲ ವರ್ಗದ ಮತದಾರರಿದ್ದಾರೆ. ಈ ಬಾರಿ ಯಾರ ಕೈಹಿಡಿಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಕಾಂಗ್ರೆಸ್ ಭದ್ರಕೋಟೆ ಬೇಧಿಸುವ ಬಿಜೆಪಿ ಕನಸು ನನಸಾಗುತ್ತಾ? ಕೈ ಅಭ್ಯರ್ಥಿ ಕುತೂಹಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.