ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ 125 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ನ ಕೇಂದ್ರ ಚುನಾವಣೆ ಸಮಿತಿ ಅಂತಿಮಗೊಳಿಸಿದ್ದು, ಈ ತಿಂಗಳ 22 ರಂದು ಯುಗಾದಿ ಹಬ್ಬದ ವೇಳೆಗೆ ಬಿಡುಗಡೆ ಮಾಡಲಾಗುತ್ತದೆ.
ನವದೆಹಲಿಯಲ್ಲಿ ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ 224 ಕ್ಷೇತ್ರಗಳ ಪೈಕಿ 125 ಅಭ್ಯರ್ಥಿಗಳ ಹೆಸರನ್ನು ಸುದೀರ್ಘ ಚರ್ಚೆಯ ಬಳಿಕ ಅಂತಿಮಗೊಳಿಸಲಾಗಿದೆ. ಅಭ್ಯರ್ಥಿ ಆಯ್ಕೆ ಕುರಿತ ಸಭೆ ಬಳಿಕ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ 125 ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದ್ದು, ಮಾರ್ಚ್ 22 ರಂದು ಪಟ್ಟಿಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಬಹುತೇಕ ಹಾಲಿ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ತೀರ್ಮಾನ ತಗೆದುಕೊಳ್ಳಲಾಗಿದೆ. ಆದರೆ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಇರುವ ಬೆರಳೆಣಿಕೆಯಷ್ಟು ಹಾಲಿ ಶಾಸಕರಿಗೆ ಟಿಕೆಟ್ ನೀಡದಿರುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ ಎಂದು ಹೇಳಲಾಗಿದೆ. ಶಾಸಕರಾದ ಹರಿಹರ ಕ್ಷೇತ್ರದ ರಾಮಪ್ಪ, ಲಿಂಗಸಗೂರಿನ ಡಿಎಸ್ ಹೂಲಗೇರಿ, ಕುಂದಗೋಳದ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ದೊರೆಯುವುದು ಅನುಮಾನ ಎಂದು ಹೇಳಲಾಗ್ತಿದೆ.
ಶಾಸಕರಾಗಿಯೂ ಬರಲಿರುವ ಚುನಾವಣೆಯಲ್ಲಿ ಸ್ಪರ್ಧೆಗೆ ಇಚ್ಛಿಸದ ಪಾವಗಡ ಶಾಸಕ ವೆಂಕಟರಮಣಪ್ಪ, ಅಫಜಲಪುರ ಶಾಸಕ ಎಂವೈ ಪಾಟೀಲ್ ಶಿಡ್ಲಘಟ್ಟದ ಶಾಸಕ ವಿ ಮುನಿಯಪ್ಪ ನವರು ಸೂಚಿಸುವ ಕುಟುಂಬದವರು ಅಥವಾ ಅವರು ಶಿಫಾರಸು ಮಾಡುವ ವ್ಯಕ್ತಿಗೆ ಟಿಕೆಟ್ ನೀಡುವ ಅಭಿಪ್ರಾಯಕ್ಕೆ ಸಭೆಯಲ್ಲಿ ಬರಲಾಗಿದೆ ಎಂದು ತಿಳಿದುಬಂದಿದೆ.
ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಡಿಜೆಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಅಲ್ಪ ಸಂಖ್ಯಾತರ ವಿರೋಧ ಕಟ್ಟಿಕೊಂಡಿದ್ದರಿಂದ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಕರ ಎನ್ನುವ ಸಮೀಕ್ಷೆ ವರದಿ ಆಧರಿಸಿ ಅವರಿಗೆ ಟಿಕೆಟ್ ನೀಡದಿರುವ ನಿರ್ಧಾರ ತಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 20 ರಂದು ಬೆಳಗಾವಿಗೆ ಭೇಟಿ ನೀಡಿ ತೆರಳಿದ ಬಳಿಕ 125 ಅಭ್ಯರ್ಥಿಗಳ ಮೊದಲ ಕಂತಿನಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಸಭೆಯಲ್ಲಿ ಅಂತಿಮಗೊಳಿಸಲಾದ ಪ್ರಮುಖ ಸಂಭವನೀಯ ಅಭ್ಯರ್ಥಿಗಳ ಕ್ಷೇತ್ರವಾರು ವಿವರ ಹೀಗಿದೆ...
* ಕೋಲಾರ: ಸಿದ್ದರಾಮಯ್ಯ
* ಶ್ರೀನಿವಾಸಪುರ : ರಮೇಶ್ ಕುಮಾರ್
* ಕೆಜಿಎಫ್ : ರೂಪಕಲಾ ಶಶಿಧರ
* ಬಂಗಾರಪೇಟೆ : ನಾರಾಯಣಸ್ವಾಮಿ
* ಮಾಲೂರು : ನಂಜೇಗೌಡ
* ಬ್ಯಾಟರಾಯನಪುರ : ಕೃಷ್ಣಭೈರೇಗೌಡ
* ಹೆಬ್ಬಾಳ : ಸುರೇಶ್ ಭೈರತಿ
* ಸರ್ವಜ್ಙನಗರ : ಕೆ. ಜೆ. ಜಾರ್ಜ್
* ಶಾಂತಿನಗರ : ಹಾರೀಸ್
* ಶಿವಾಜಿನಗರ : ರಿಜ್ವಾನ್ ಹರ್ಷದ್
* ಗಾಂಧಿನಗರ : ದಿನೇಶ್ ಗುಂಡೂರಾವ್
* ವಿಜಯನಗರ : ಎಂ. ಕೃಷ್ಣಪ್ಪ
* ಗೋವಿಂದರಾಜನಗರ : ಪ್ರಿಯಾಕೃಷ್ಣ
* ಬಿಟಿಎಂ ಲೇಔಟ್ : ರಾಮಲಿಂಗಾರೆಡ್ಡಿ
* ಜಯನಗರ : ಸೌಮ್ಯರೆಡ್ಡಿ
* ಆನೇಕಲ್ : ಬಿ. ಶಿವಣ್ಣ
* ಹೊಸಕೋಟೆ : ಶರತ್ ಬಚ್ಚೇಗೌಡ
* ಕನಕಪುರ : ಡಿ. ಕೆ. ಶಿವಕುಮಾರ್
* ಮಾಗಡಿ : ಬಾಲಕೃಷ್ಣ
* ಮಂಗಳೂರು : ಯು.ಟಿ. ಖಾದರ್
* ಮೂಡುಬಿದರೆ : ಮಿಥುನರೈ
* ಬೆಳ್ತಂಗಡಿ : ವಸಂತ ಬಂಗೇರ
* ಬಂಟ್ವಾಳ : ರಮಾನಾಥ ರೈ
* ಪುತ್ತೂರು : ಶಕುಂತಲಾ ಶೆಟ್ಟಿ
* ನಾಗಮಂಗಲ : ಚಲುವರಾಯಸ್ವಾಮಿ
* ಹುಣಸೂರು : ಹೆಚ್. ಪಿ. ಮಂಜುನಾಥ
* ಪಿರಿಯಾಪಟ್ಟಣ : ವೆಂಕಟೇಶ್
* ಕೆ. ಆರ್. ನಗರ : ರವಿಶಂಕರ್
* ಹೆಚ್.ಡಿ. ಕೋಟೆ : ಅನಿಲ್
* ವರುಣ : ಡಾ. ಯತೀಂದ್ರ ಸಿದ್ದರಾಮಯ್ಯ
* ಚಾಮರಾಜನಗರ : ಪುಟ್ಟರಂಗಶೆಟ್ಟಿ
* ಹನೂರು : ನರೇಂದ್ರ
* ಚಿಕ್ಕೋಡಿ – ಗಣೇಶ ಹುಕ್ಕೇರಿ
* ಯಮಕನಮರಡಿ – ಸತೀಶ್ ಜಾರಕಿಹೊಳಿ
* ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್
* ಖಾನಾಪುರ – ಅಂಜಲಿ ನಿಂಬಾಳ್ಕರ್
* ಬೈಲಹೊಂಗಲ : ಮಹಾಂತೇಶ
* ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ
* ಬಬಲೇಶ್ವರ : ಎಂ. ಬಿ. ಪಾಟೀಲ
* ಬಸವನಬಾಗೇವಾಡಿ : ಶಿವಾನಂದ ಪಾಟೀಲ್
* ಇಂಡಿ : ಯಶವಂತಗೌಡ ಪಾಟೀಲ
* ಅಫಜಲಪುರ : ಎಂ. ವೈ. ಪಾಟೀಲ
* ಆಳಂದ : ಬಿ. ಆರ್. ಪಾಟೀಲ
* ಜೇವರ್ಗಿ : ಅಜಯ್ ಸಿಂಗ್
* ಚಿತ್ತಾಪುರ : ಪ್ರಿಯಾಂಕ ಖರ್ಗೆ
* ಷಹಾಪುರ : ಶರಣಪ್ಪ ದರ್ಶನಾಪುರ
* ಹುಮ್ನಾಬಾದ್ : ರಾಜಶೇಖರ ಪಾಟೀಲ
* ಬಾಲ್ಕಿ : ಈಶ್ವರ ಖಂಡ್ರೆ
* ಬೀದರ್ : ರಹೀಂಖಾನ್
* ಮಸ್ಕಿ : ಬಸವನಗೌಡ ತುರ್ವಿಹಾಳ
* ಕುಷ್ಟಗಿ : ಅಮರೇಗೌಡ ಬಯ್ಯಾಪುರ
* ಯಲಬುರ್ಗ : ಬಸವರಾಜ ರಾಯರೆಡ್ಡಿ
* ಕೊಪ್ಪಳ : ರಾಘವೇಂದ್ರ ಹಿಟ್ನಾಳ
* ಗಂಗಾವತಿ : ಇಕ್ಬಾಲ್ ಅನ್ಸಾರಿ
* ಕನಕಗಿರಿ : ಶಿವರಾಜ ತಂಗಡಗಿ
* ಗದಗ : ಹೆಚ್. ಕೆ. ಪಾಟೀಲ
* ರೋಣ : ಜೆ. ಎಸ್. ಪಾಟೀಲ
* ಕಲಘಟಗಿ: ಸಂತೋಷ್ ಲಾಡ್
* ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ
* ಹಾನಗಲ್ : ಶ್ರೀನಾಸ್ ಮಾನೆ
* ಬ್ಯಾಡಗಿ : ಬಸವರಾಜ ಶಿವಣ್ಣನವರ
* ಹಿರೇಕೆರೂರ : ಯು. ಬಿ. ಬಣಕಾರ
* ಹೂವಿನ ಹಡಗಲಿ : ಪರಮೇಶ್ವರನಾಯ್ಕ
* ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ
* ಕಂಪ್ಲಿ : ಗಣೇಶ್
* ಬಳ್ಳಾರಿ ಗ್ರಾಮೀಣ : ನಾಗೇಂದ್ರ
* ಚಿತ್ರದುರ್ಗ : ಕೆ ಸಿ ವೀರೇಂದ್ರ
* ಮೊಳಕಾಲ್ಮೂರು : ಯೋಗೀಶ್ ಬಾಬು
* ಚಳ್ಳಕೆರೆ : ರಘುಮೂರ್ತಿ
* ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ
* ದಾವಣಗೆರೆ ಉತ್ತರ : ಎಸ್. ಎಸ್. ಮಲ್ಲಿಕಾರ್ಜುನ
* ಭದ್ರಾವತಿ : ಸಂಗಮೇಶ್
* ಸೊರಬ : ಮಧು ಬಂಗಾರಪ್ಪ
* ಶೃಂಗೇರಿ : ರಾಜೇಗೌಡ
* ಕುಣಿಗಲ್ : ರಂಗನಾಥ್
* ಕೊರಟಗೆರೆ : ಡಾ. ಪರಮೇಶ್ವರ
* ಗೌರಿಬಿದನೂರು : ಶಿವಶಂಕರರೆಡ್ಡಿ
* ಬಾಗೇಪಲ್ಲಿ : ಸುಬ್ಬಾರೆಡ್ಡಿ
ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ ಸಿವೇಣುಗೋಪಾಲ್, ರಾಜ್ಯ ಚುನಾವಣೆ ಉಸ್ತುವಾರಿ ಸುರ್ಜೇವಾಲಾ, ಮಾಜಿ ಸಿಎಂ ಎಂ ವೀರಪ್ಪ ಮೊಯಿಲಿ ಸೇರಿದಂತೆ ಹಲವರು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಉಪಸ್ಥಿತರಿದ್ದರು.