ETV Bharat / state

ಕೊರೊನಾ ಬುಲೆಟಿನ್‌: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 125 - ಹೊದ ಕೊರೊನಾ ಕೇಸ್​ಗಳು

ಬಾಗಲಕೋಟೆಯಲ್ಲಿ ಮತ್ತೊಂದು ಕೋವಿಡ್​​-19 ಪಾಸಿಟಿವ್​ ಪ್ರಕರಣ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸದ್ಯ 125 ತಲುಪಿದೆ.

karanataka-corona-patients-cases-rise-to-125
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
author img

By

Published : Apr 3, 2020, 1:20 PM IST

ಬೆಂಗಳೂರು: ರಾಜ್ಯದಲ್ಲಿಂದು ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್​​ ಪತ್ತೆಯಾಗಿದೆ. ಬಾಗಲಕೋಟೆಯ 75 ವರ್ಷದ ವೃದ್ಧನನ್ನೂ ಸೇರಿಸಿ ಒಟ್ಟು 125 ಜನರಿಗೆ ಸೋಂಕು ತಗುಲಿದೆ.

125 ಸೋಂಕಿತರ ಪೈಕಿ 3 ಜನ ಮರಣಿಸಿದ್ದು, 11 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಟ್ರಾವೆಲ್ ಹಿಸ್ಟರಿ ಹೀಗಿದೆ:
ರೋಗಿ-125 : 75 ವರ್ಷದ ವೃದ್ಧ, ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿದ್ದು, ಇವರ ವಿವರವಾದ ತನಿಖೆ ಪ್ರಗತಿಯಲ್ಲಿದೆ. ಇವರನ್ನು ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ಸೇವಾ ಅವಧಿ ವಿಸ್ತರಣೆ:

ತುರ್ತುಪರಿಸ್ಥಿತಿ ಹಿನ್ನೆಲೆಯಲ್ಲಿ ನಿವೃತ್ತಿ ಹೊಂದಿರುವ ಆರೋಗ್ಯ ಇಲಾಖೆಯ ವೈದ್ಯಕೀಯ ಮತ್ತು ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ನಾನ್ - ಕ್ಲಿನಿಕಲ್ ಸಿಬ್ಬಂದಿ ಸೇವೆಯನ್ನು ಮುಂದಿನ ಮೂರು ತಿಂಗಳ ಅವಧಿ (ಜೂನ್ 30) ವರೆಗೆ ವಿಸ್ತರಿಸಲಾಗಿದೆ. ಹಾಗೇ ಏಪ್ರಿಲ್ ನಲ್ಲಿ ನಿವೃತ್ತಿ ಹೊಂದುವವರ ಸೇವೆಯನ್ನು 2 ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.