ETV Bharat / state

ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಿದೆ : ಸಿಎಂ ಬಸವರಾಜ ಬೊಮ್ಮಾಯಿ - ಕಾನೂನು ನಿಘಂಟು

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರೋತ್ಸಾಹ, ಬೆಂಬಲದಿಂದ ಇವೆಲ್ಲವನ್ನು ಮಾಡಲು ಸಾಧ್ಯವಾಗಿದೆ ಎಂದ ಅವರು, ಈ ಪ್ರಕ್ರಿಯೆ ಮುಂದುವರೆಯಬೇಕು. ಇನ್ನಷ್ಟು ಕನ್ನಡದ ಪದಗಳು ಕಾನೂನಿನಲ್ಲಿ ಬಳಕೆ ಆಗಬೇಕು ಹಾಗೂ ಕಾನೂನಿನಲ್ಲಿ ಬಳಕೆಯಾಗುವ ಪದಗಳು ಕನ್ನಡದಲ್ಲಿ ಬಳಕೆಯಾಗಬೇಕು..

cm-bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Sep 21, 2021, 7:53 PM IST

Updated : Sep 21, 2021, 8:05 PM IST

ಬೆಂಗಳೂರು : ಕಾನೂನಿನಲ್ಲಿ ಕನ್ನಡವನ್ನು ತಂದಿದ್ದರಿಂದ ನ್ಯಾಯಾಲಯಗಳಲ್ಲಿ ಇಂದು ಕನ್ನಡ ಹೆಚ್ಚಾಗಿ ಬಳಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಲಯ ಹೊರ ತಂದಿರುವ ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳನ್ನು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ್ದಾರೆ.

ಕಾನೂನು ನಿಘಂಟು ಕೆಲಸ ಯಶಸ್ವಿಯಾಗಿದೆ. 2003ರಲ್ಲಿ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ ನಂತರ ಅವು ಜನ ಸಾಮಾನ್ಯರಿಗೆ‌ ತಲುಪಿದವು. ಕಾನೂನುಗಳ ಅರ್ಥ ವ್ಯಾಪಕವಾಗಿ ಪ್ರಚಾರವಾಯಿತು.

ಎಲ್ಲಕ್ಕಿಂತ ಮುಖ್ಯವಾಗಿ ನ್ಯಾಯಾಲಯ ಅದನ್ನು ಗುರುತಿಸಿ ಮನ್ನಣೆ ನೀಡಿದೆ. ಅದನ್ನು ಮುಂದುವರೆಸಿ ಇಂದು ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳನ್ನು ಹೊರ ತಂದು ಉತ್ತಮ ಕೆಲಸ ಮಾಡಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರೋತ್ಸಾಹ, ಬೆಂಬಲದಿಂದ ಇವೆಲ್ಲವನ್ನು ಮಾಡಲು ಸಾಧ್ಯವಾಗಿದೆ ಎಂದ ಅವರು, ಈ ಪ್ರಕ್ರಿಯೆ ಮುಂದುವರೆಯಬೇಕು. ಇನ್ನಷ್ಟು ಕನ್ನಡದ ಪದಗಳು ಕಾನೂನಿನಲ್ಲಿ ಬಳಕೆ ಆಗಬೇಕು ಹಾಗೂ ಕಾನೂನಿನಲ್ಲಿ ಬಳಕೆಯಾಗುವ ಪದಗಳು ಕನ್ನಡದಲ್ಲಿ ಬಳಕೆಯಾಗಬೇಕು ಎಂದರು.

ಇದನ್ನೂ ಓದಿ: ಕ್ಯಾಷ್ ಡೆಪಾಸಿಟರ್​ನಲ್ಲಿ ಹಣ ಜಮಾ ಮಾಡುವವರೇ ಇವನ ಟಾರ್ಗೆಟ್​​.. ಹಣ ಗಳಿಕೆಗೆ ಅಡ್ಡದಾರಿಗಿಳಿದ ಬಿಇ ಪದವೀಧರ..

Last Updated : Sep 21, 2021, 8:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.