ETV Bharat / state

ನ್ಯಾಯಾಂಗ ಹೋರಾಟದ ಮೂಲಕ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ: ನಿವೃತ್ತ ನ್ಯಾ. ಅರಳಿ ನಾಗರಾಜ್

author img

By ETV Bharat Karnataka Team

Published : Dec 14, 2023, 10:19 AM IST

ನ್ಯಾಯಾಂಗ ಹೋರಾಟ ನಡೆಸುವ ಮೂಲಕ ನಾವು ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

Kannada schools  saved and nurtured  fighting a legal battle  Retired High Court judge  ನ್ಯಾಯಾಂಗ ಹೋರಾಟ  ಕನ್ನಡ ಶಾಲೆಗಳನ್ನು ಉಳಿಸಿ  ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ  ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ

ಬೆಂಗಳೂರು: ಸರ್ಕಾರಗಳು ನ್ಯಾಯಾಂಗಕ್ಕೆ ಅಂಜುತ್ತವೆ. ಆದ್ದರಿಂದ ಕನ್ನಡ ಶಾಲೆ ಉಳಿಸಿ ಬೆಳೆಸಲು ಅರ್ಜಿ ಸಲ್ಲಿಸಿ. ಪರವಾಗಿ ನಿರ್ಣಯ ಬರುವಂತೆ ವಕೀಲರ ಜೊತೆ ಚರ್ಚಿಸಬೇಕಿದೆ. ಹಕ್ಕೆಂದು ಇದರ ಬಗ್ಗೆ ಕೇಳಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಕನ್ನಡ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಮೂಲಕ ಸಮರ್ಥ ವಾದ ಮಂಡಿಸಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾತಾನಾಡಿದ ಅವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾವು ಸರ್ಕಾರಕ್ಕೆ ವಿನಂತಿಸಬೇಕು. ಪೋಷಕರಲ್ಲಿ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳಿಸುವಂತೆ ಮನವಿ ಮಾಡಬೇಕು. ನಾನು ಕೂಡ ಕನ್ನಡ ಮಾಧ್ಯಮದಲ್ಲಿ ಓದಿಯೇ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದೆ. ಅದೇ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಇಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಸಾಹಿತಿ ಹಂಪಾ ನಾಗರಾಜಯ್ಯ ಮಾತನಾಡಿ ಯಾವ ಸರ್ಕಾರಕ್ಕೂ ಭಾಷೆ, ಕನ್ನಡ, ಶಿಕ್ಷಣ ಆದ್ಯತೆಯಾಗಿ ಇಲ್ಲ. ಎಲ್ಲ ಖಾತೆಗಳನ್ನು ಹಂಚಿದ ಮೇಲೆ ಕೊನೆಗೆ ಶಿಕ್ಷಣ ಇಲಾಖೆಗೆ ಸಚಿವರನ್ನು ಆಯ್ಕೆ ಮಾಡಲಾಗುತ್ತದೆ. ಇನ್ನೊಂದೆಡೆ ಸರ್ಕಾರ ಮರಳಿ ಶಾಲೆಗೆ ಯೋಜನೆಯಲ್ಲಿ ಸೈಕಲ್, ಸಮವಸ್ತ್ರವನ್ನು ಕೊಟ್ಟರೂ ಪೋಷಕರೂ ಸಹ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಸಹ ಕನ್ನಡ ಶಾಲೆಗಳನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಓದಬೇಕು ಎನ್ನುವುದು ಭಾಷಣಕ್ಕೆ ಮಾತ್ರ ಸೀಮಿತವಾಗಿರುವುದು ಸತ್ಯ. ಸಮಾನ ಅವಕಾಶ ಕಲ್ಪಿಸಿ, ವಸ್ತು ಸ್ಥಿತಿಗೆ ಒಗ್ಗಿಕೊಳ್ಳುವಂತೆ ಮಾಡಿದಾಗ ಮಾತ್ರ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ವಾಗ್ಮಿ ಗುರುರಾಜ್ ಕರ್ಜಗಿ ಮಾತನಾಡಿ, ಸದ್ಯಕ್ಕೆ ಜಿಲ್ಲೆಗೊಂದು ಕನ್ನಡ ಮಾಧ್ಯಮದ ಉತ್ತಮ ಶಾಲೆಯಾದರೆ ಸಾಕು. ಅದನ್ನೇ ಮಾದರಿ ಶಾಲೆಯಾಗಿ ಹೊರಹೊಮ್ಮುವಂತೆ ಮಾಡಬೇಕು. ಅದರಲ್ಲಿ ಕಲಿತ ಮಕ್ಕಳಿಗೆ ಸಾಕಷ್ಟು ಅವಕಾಶಗಳು ಸಿಗುವಂತೆ ಮಾಡಬೇಕು. ಆಗ ಮಾತ್ರ ಮಕ್ಕಳನ್ನು ಪೋಷಕರು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಾರೆ ಎಂದು ನುಡಿದರು.

ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಮೆಕಾಲೆ ಶಿಕ್ಷಣ ಪದ್ಧತಿಯನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಸ್ವಾಭಿಮಾನಿ ಭಾರತೀಯರು, ಕನ್ನಡಿಗರು ವಿರೋಧಿಸಿದ್ದರು. ಆದರೆ ಸ್ವಾತಂತ್ರ್ಯ ನಂತರ ಅದನ್ನು ತುಷ್ಟೀಕರಿಸಲಾಯಿತು. ನಮ್ಮಲ್ಲಿ ಕನ್ನಡದ ಬಗೆಗಿನ ತುಡಿತ ಕಡಿಮೆಯಾಗಿದೆ. ವಿದೇಶಗಳಲ್ಲಿ ಕನ್ನಡ ಜನಪ್ರಿಯಗೊಳ್ಳುತ್ತಿದ್ದರೆ ನಮ್ಮ ರಾಜ್ಯದಲ್ಲಿ ಅಸಡ್ಡೆ ತೋರಲಾಗುತ್ತಿದೆ. ಆದ್ದರಿಂದ ಕನ್ನಡ ಶಾಲೆಗಳ ಬಗ್ಗೆ ಜನಾಂದೋಲನ ಒಂದೇ ಪರಿಹಾರ. ಇದರ ಸಂಕಲ್ಪ ಇಲ್ಲಿಯೇ ಅರಭವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವೆ ರಾಣಿ ಸತೀಶ್ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ, ಪ್ರತ್ಯೇಕ ಅನುದಾನವನ್ನು ತೆಗೆದಿಟ್ಟಾಗ ಮಾತ್ರ ಕನ್ನಡ ಶಾಲೆಗಳನ್ನು ಉಳಿಸಬಹುದು. ಆಗ ಮಾತ್ರ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬಹುದು. ಮುಖ್ಯಮಂತ್ರಿಗಳಿಗೆ ಮನವಿ ಮಾಡುವ ನಿಟ್ಟಿನಲ್ಲಿ ಈ ಸಭೆಯಿಂದ ಕಾರ್ಯೋನ್ಮುಖವಾಗಬೇಕಿದೆ ಎಂದು ತಿಳಿಸಿದರು.

ಕವಿ ದೊಡ್ಡರಂಗೆ ಗೌಡ ಅವರು ಮಾತನಾಡಿ, ಯಾವ ಸರ್ಕಾರಕ್ಕೂ ಕನ್ನಡ ಅಧ್ಯತೆಯಾಗಿ ಉಳಿದಿಲ್ಲ. ಇಡೀ ಸಮಸ್ಯೆಯ ಮೂಲ ನಮ್ಮಲ್ಲಿಯೇ ಇದೇ. ಪೋಷಕರು ಶಾಲೆಗಳಲ್ಲಿ ಒಳ್ಳೆಯ ಧಿರಿಸು, ವ್ಯವಸ್ಥೆಯನ್ನು ನೋಡಿ ಮಾತ್ರ ಆಂಗ್ಲ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಅದೇ ಊರಿನ ಕನ್ನಡ ಶಾಲೆಗಳಿಗೆ ಕೂಡ ಮಕ್ಕಳು ಹೋಗುತ್ತಿಲ್ಲ. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಎನ್ನುವು ಮರೀಚಿಕೆಯನ್ನು ಬೆನ್ನತ್ತಿ ಹೊರಟಿದ್ದಾರೆ. ಕನ್ನಡ ಶಾಲೆಗಳನ್ನು ಮಾದರಿ ಶಾಲೆಯಾಗಿ ಮಾಡುವುದು ಮಾತ್ರ ಇದಕ್ಕೆ ಪರಿಹಾರವಾಗಿದೆ ಎಂದು ತಿಳಿಸಿದರು.

ಬಹುಭಾಷಾ ಪಂಡಿತರಾದ ಪ್ರಧಾನ್ ಗುರುದತ್ತ ಅವರು ಮಾತನಾಡಿ, ಕುವೆಂಪು ಅವರು ವಿವಿಗಳಲ್ಲಿ ಕನ್ನಡವನ್ನು ತರಲು ಸಾಕಷ್ಟು ಯತ್ನಿಸಿದರು. ಆದರೆ ನಂತರದ ಸಮಯದಲ್ಲಿ ಅದನ್ನು ಒತ್ತಡ ಹೇರುವಲ್ಲಿ ವಿಫಲರಾದೆವು. ಮುಖ್ಯವಾಗಿ ಕನ್ನಡ ಶಾಲೆಗಳ ಬಗ್ಗೆ ರಾಜಕಾರಣಿಗಳಿಗೆ, ಅಧಿಕಾರಿಗಾರಿಗಳಿಗೆ, ಪೋಷಕರಿಗೆ ಸಹ ಬೇಕಿಲ್ಲ. ಹೊಸತನ್ನು ಸಹ ತರುವಲ್ಲಿ ಸಹ ಸೋತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಹಲವಾರು ಸಾಹಿತಿಗಳು, ಕನ್ನಡ ಪರ ಹೊರಟಗಾರರು ಭಾಗವಹಿಸಿದ್ದರು.

ಕನ್ನಡ ಶಾಲೆ ಉಳಿಕೆಗಾಗಿ ಮಹತ್ವದ ಎರಡು ನಿರ್ಣಯ: ಚಿಂತನಾ ಸಭೆಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಎರಡು ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಲಾಯಿತು. ಅದರಲ್ಲಿ ಕನ್ನಡ ಶಾಲೆಗಳನ್ನು ಉಳಿಸಬೇಕು.ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸ ಬೇಕು. ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರನ್ನು ನೇಮಕ ಮಾಡಬೇಕು ಎಂಬ ಅಗತ್ಯತೆಗಳನ್ನು ಅನುಸರಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಲ್ಲಿಸಬೇಕು ಎಂದು ಸಭೆ ನಿರ್ಣಯಿಸಿತು. ಇದಕ್ಕೆ ಸಭೆಯಲ್ಲಿದ್ದವರೆಲ್ಲರೂ ಒಮ್ಮತದಿಂದ ಒಪ್ಪಿಗೆಯನ್ನು ಸೂಚಿಸಿದರು. ಈ ಕುರಿತು ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲು ತಜ್ಞರ ಸಮಿತಿಯೊಂದನ್ನು ನೇಮಿಸಲು ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

ಓದಿ: ಅತ್ಯಾಚಾರ ಸಂತ್ರಸ್ತೆಯರ ಗರ್ಭಪಾತ ವಿಚಾರ: ತಜ್ಞರ ಸಮಿತಿ ರಚಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.