ಬೆಂಗಳೂರು : ಬಂದ್ ಬದಲಿಗೆ ಸಾಂಕೇತ ಪ್ರತಿಭಟನೆ ಕೈಗೊಂಡಿರುವ ಕನ್ನಡಪರ ಸಂಘಟನೆಯ ನಾಯಕರು ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕಾಗಿ ಕರೆ ನೀಡಿದ್ದಾರೆ. ಆದ್ರೆ, ಕನ್ನಡ ಕಟ್ಟಾಳು ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನಾ ಜಾಥಾವನ್ನ ಪೊಲೀಸರು ತಡೆದಿದ್ದಾರೆ.
![Kannada organizations protest off, Kannada organizations mass protest off in middle, Kannada organizations protest off in Bengaluru, Karnataka bundh cancel, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಅರ್ಧಕ್ಕೆ ಠುಸ್, ಕನ್ನಡ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಮಧ್ಯದಲ್ಲೇ ಠುಸ್, ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಮಧ್ಯದಲ್ಲೇ ಠುಸ್, ಕರ್ನಾಟಕ ಬಂದ್ ಕ್ಯಾನ್ಸಲ್,](https://etvbharatimages.akamaized.net/etvbharat/prod-images/bng-protes-2_3112newsroom_1640938831_142.jpg)
ಓದಿ: ಕೊಪ್ಪಳದ 'ಡೆತ್ಸ್ಪಾಟ್' ಸಣಾಪುರ ಕೆರೆಯಲ್ಲಿ ಅಸುರಕ್ಷಿತ ದೋಣಿ ವಿಹಾರ
12.30ರ ವೇಳೆಗೆ ಶುರುವಾದ ಪ್ರತಿಭಟನಾ ಮೆರವಣಿಗೆ ಮಧ್ಯದಲ್ಲೇ ಠುಸ್ ಆಗಿದೆ. ವಾಟಾಳ್ ನಾಗರಾಜ್ ಹಾಗೂ ಸಾ ರಾ ಗೋವಿಂದ್ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳು ಭಾಗಿಯಾಗಿದ್ದವು. ಟೌನ್ ಹಾಲ್ನಿಂದ ಕನ್ನಡ ಪರ ಸಂಘಟನೆಗಳ ಮೆರವಣಿಗೆಯಲ್ಲಿ ಮಧ್ಯಾಹ್ನದ ವೇಳೆಗೆ 150 ಪ್ರತಿಭಟನಾಕಾರರು ಕೂಡ ಇರಲಿಲ್ಲ.
![Kannada organizations protest off, Kannada organizations mass protest off in middle, Kannada organizations protest off in Bengaluru, Karnataka bundh cancel, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಅರ್ಧಕ್ಕೆ ಠುಸ್, ಕನ್ನಡ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಮಧ್ಯದಲ್ಲೇ ಠುಸ್, ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಮಧ್ಯದಲ್ಲೇ ಠುಸ್, ಕರ್ನಾಟಕ ಬಂದ್ ಕ್ಯಾನ್ಸಲ್,](https://etvbharatimages.akamaized.net/etvbharat/prod-images/bng-protes-1_3112newsroom_1640938831_356.jpg)
ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ , ಸಾರಾ ಗೋವಿಂದ್ ಹಾಗೂ ಇತರರು ಭಾಗಿಯಾಗಿದ್ದರೂ ಕೂಡ ಬೆಂಬಲ ಸಿಕ್ಕಲ್ಲ. ಹಲಸೂರು ಗೇಟ್ ಬಳಿ ಜಾಥಾ ತಡೆದ ಪೊಲೀಸರು ಪ್ರತಿಭಟನಾಕರರನ್ನ ವಶಕ್ಕೆ ಪಡೆದರು. ಆದ್ರೆ, ಫ್ರೀಡಂ ಪಾರ್ಕ್ವರೆಗೂ ನಡೆಯಬೇಕಿದ್ದ ಈ ಬೃಹತ್ ಜಾಥಾ ಅರ್ಧದಲ್ಲೇ ಠುಸ್ ಆಗಿದೆ.