ಕನ್ನಡ ಚಿತ್ರರಂಗದ ಪ್ರಖ್ಯಾತ ಗೀತ ರಚನೆಕಾರ ತಂಗಾಳಿ ನಾಗರಾಜ್ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ತಂಗಾಳಿ ಎಲ್ಲಿಂದ ಬೀಸುವೆ ಹಾಡಿನಿಂದ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದ ನಾಗರಾಜ್, ಆ ಬಳಿಕ ತಂಗಾಳಿ ನಾಗರಾಜ್ ಎಂದೇ ಪ್ರಖ್ಯಾತಿ ಹೊಂದಿದ್ದರು.
ಕಲಾಸಿಪಾಳ್ಯ ಸಿನಿಮಾದಲ್ಲಿ ಧೂಳ್ ಮಗಾ ಧೂಳ್ ಹಾಡು ಸೇರಿದಂತೆ, ಹಲವಾರು ಸಿನಿಮಾಗಳಿಗೆ ಗೀತರಚನೆ ಬರೆದಿರುವ, ತಂಗಾಳಿ ನಾಗರಾಜ್ ಕಳೆದ 15ವರ್ಷಗಳಿಂದ ಚಿತ್ರರಂಗದಲ್ಲಿ ಎಲೆಮರೆ ಕಾಯಿದಂತೆ ಇದ್ರೂ ಕೂಡ ನೂರಾರು ಸೂಪರ್ ಹಿಟ್ ಹಾಡುಗಳನ್ನ ಬರೆದಿದ್ದಾರೆ.
ಸದ್ಯ ತಂಗಾಳಿ ನಾಗರಾಜ್ ನಿಧನದ ಬಗ್ಗೆ ಗೀತರಚನೆಕಾರ ಕವಿರಾಜ್ ಈ ವಿಷ್ಯವನ್ನ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಸಾಕಷ್ಟು ಜನ ತಂಗಾಳಿ ನಾಗರಾಜ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.