ಬೆಂಗಳೂರು: 'ಮನೆ ಮಾರಾಟಕ್ಕಿದೆ' ಚಿತ್ರ ಯಶಸ್ವಿಯಾಗಿ ಅರ್ಧ ಶತಕ ಪೂರೈಸಿದ್ದು, ಚಿತ್ರದ ತಂಡ 50 ದಿನಗಳ ಸಂಭ್ರಮವನ್ನು ಆಚರಿಸಿತು.
'ಮನೆ ಮಾರಾಟಕ್ಕಿದೆ' ಚಿತ್ರದ 50 ದಿನಗಳ ನೆನಪಿನ ಕಾಣಿಕೆ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾರುಣ್ಯ, ವೇದಿಕೆಯಲ್ಲೇ ಭಾವುಕರಾಗಿ ಕಣ್ಣೀರಿಟ್ಟರು. ನಾನು ಶಾಲಾ ಕಾಲೇಜು ದಿನಗಳಲ್ಲಿ ಸಾಕಷ್ಟು ಮೆಡಲ್ಗಳನ್ನು ಗೆದ್ದಿದ್ದೆ. ಆದರೆ, ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳ ಆದರೂ ನನಗೆ ಯಾವುದೇ ಪ್ರಶಸ್ತಿ ಬಂದಿರಲಿಲ್ಲ ಎಂಬ ಕೊರಗು ಇತ್ತು. ಇದೀಗ ನಾನು ನಟಿಸಿರುವ 'ಮನೆ ಮಾರಟಕ್ಕಿದೆ' ಚಿತ್ರ ಯಶಸ್ವಿಯಾಗಿ 50 ದಿನಗಳ ಪೂರೈಸಿದ್ದು ಸಂತೋಷವಾಗಿದೆ ಎಂದರು.
ಇನ್ನು ನನ್ನ ಸಿನಿ ಜರ್ನಿಯಲ್ಲಿ ಮೊದಲ ಪ್ರಶಸ್ತಿ. ಈಗ ನನಗೆ ಆಸ್ಕರ್ ಅವಾರ್ಡ್ ಸಿಕ್ಕಷ್ಟೆ ಖುಷಿಯಾಗ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.