ETV Bharat / state

ಆಮ್‌ ಆದ್ಮಿ ಪಕ್ಷ ಸೇರಿದ ಕನ್ನಡದ ನಟಿ ಆರೋಹಿತ - actress arohita join aam aadmi party

ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿ ಆಮ್‌ ಆದ್ಮಿ ಪಕ್ಷದ ಯಶಸ್ಸನ್ನು ಮೆಚ್ಚಿ ಕನ್ನಡದ ಯುವ ಹಾಗೂ ಪ್ರತಿಭಾನ್ವಿತ ಸಿನಿಮಾ ನಟಿ ಆರೋಹಿತ ಪಕ್ಷಕ್ಕೆ ಬುಧವಾರ ಸೇರ್ಪಡೆಯಾದರು.

arohita
ಆಮ್‌ ಆದ್ಮಿ ಪಕ್ಷ ಸೇರಿದ ಕನ್ನಡದ ನಟಿ ಆರೋಹಿತ
author img

By

Published : Sep 15, 2022, 11:30 AM IST

Updated : Sep 15, 2022, 11:55 AM IST

ಬೆಂಗಳೂರು: ಯುವ ಹಾಗೂ ಪ್ರತಿಭಾನ್ವಿತ ಸಿನಿಮಾ ನಟಿ ಆರೋಹಿತ (ಮೂಲ ಹೆಸರು ಪ್ರಿಯಾಂಕ) ಆಮ್‌ ಆದ್ಮಿ ಪಾರ್ಟಿಗೆ ಬುಧವಾರ ಸೇರ್ಪಡೆಯಾದರು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಇಂದು ಆರೋಹಿತ ಅವರನ್ನು ಎಎಪಿಗೆ ಸ್ವಾಗತಿಸಿದರು.

ಬಳಿಕ ಮಾತನಾಡಿದ ಪೃಥ್ವಿ ರೆಡ್ಡಿ, ಆರೋಹಿತರಂತಹ ಪ್ರತಿಭಾವನ್ವಿತರು ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಛಲದೊಂದಿಗೆ ಎಎಪಿ ಸೇರುತ್ತಿರುವುದನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಇಂತಹ ನಿಪುಣ ಹಾಗೂ ಪ್ರಬಲ ವ್ಯಕ್ತಿತ್ವಗಳನ್ನು ಆಮ್‌ ಆದ್ಮಿ ಪಾರ್ಟಿ ಮಾತ್ರ ಆಕರ್ಷಿಸಿ, ಕರ್ನಾಟಕದಲ್ಲಿ ಬದಲಾವಣೆ ತರಬಲ್ಲದು ಎಂದು ಹೇಳಿದರು.

arohita
ಆಮ್‌ ಆದ್ಮಿ ಪಕ್ಷ ಸೇರಿದ ಕನ್ನಡದ ನಟಿ ಆರೋಹಿತ

ಕರ್ನಾಟಕದ ಅನೇಕ ಗಣ್ಯ ಹಾಗೂ ಪ್ರಾಮಾಣಿಕ ವ್ಯಕ್ತಿಗಳು ಭ್ರಷ್ಟಾಚಾರ ಹಾಗೂ ಒಡೆದು ಆಳುವ ನೀತಿಯಿಂದ ಬೇಸತ್ತು ಆಮ್‌ ಆದ್ಮಿ ಪಾರ್ಟಿಗೆ ಸೇರುತ್ತಿದ್ದಾರೆ. ಈಗ ಈ ಸಾಲಿಗೆ ನಟಿ ಆರೋಹಿತ ಸೇರ್ಪಡೆಯಾಗಿದ್ದು, ಸ್ವಚ್ಛ ರಾಜಕೀಯವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದರು.

ಇದನ್ನೂ ಓದಿ: AAP ಸೇರಿದ ಕಾಂಗ್ರೆಸ್ ಮುಖಂಡ ಬ್ರಿಜೇಶ್‌ ಕಾಳಪ್ಪ

ಕ್ರೀಡಾಪಟು ಕೂಡ ಆಗಿರುವ ಆರೋಹಿತ: ಬೆಂಗಳೂರಿನ ವಸಂತ ನಗರ ನಿವಾಸಿಯಾಗಿರುವ ಆರೋಹಿತ ಅವರು ಬಿ.ಕಾಂ ಪದವೀಧರರು. ಕರಾಟೆ ಪಟುವಾಗಿರುವ ಇವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಭಿನಯ ತರಂಗ ಸಂಸ್ಥೆಯಲ್ಲಿ ನಾಟಕದಲ್ಲಿ ಅಭಿನಯಿಸುವುದನ್ನು ಕಲಿತು ನಂತರ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಆಟಗಾರ, ರಾಜರಾಜೇಂದ್ರ, ಜಗ್ಗಿ, ಭಾಗ್ಯ ರಾಜ್‌, ಕಿರಿಕ್‌ ಪಾರ್ಟಿ, ಗೌಡ್ರು ಹೋಟೆಲ್‌, ಕಾವೇರಿ, ಆಯುಷ್ಮಾನ್‌ ಭವ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಾಣಿಪ್ರಿಯರಾಗಿರುವ ಆರೋಹಿತ, ತಮ್ಮ ಮನೆಯ ಸುತ್ತಮುತ್ತಲಿನ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಕ್ಷ ಸೇರಿದ ಕನ್ನಡದ ನಟಿ ಆರೋಹಿತ

ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ: ಎಎಪಿ ಸೇರ್ಪಡೆ ಕುರಿತು ಮಾತನಾಡಿದ ನಟಿ ಆರೋಹಿತ, ಕರ್ನಾಟಕ ಹಾಗೂ ದೇಶದೆಲ್ಲೆಡೆ ಯುವ ಜನತೆಯು ಬದಲಾವಣೆ ಬಯಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಬದಲಾವಣೆ ಸಾಧ್ಯವಾಗಬೇಕಾದರೆ ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಬದಲಾವಣೆ ತಂದಿದೆ. ಸ್ವಚ್ಛ ಹಾಗೂ ಗುಣಮಟ್ಟದ ಆಡಳಿತದಿಂದ ಮಾತ್ರ ಇದು ಸಾಧ್ಯ. ಕರ್ನಾಟಕದಲ್ಲೂ ಅಂತಹ ಆಡಳಿತ ಬರಬೇಕು ಎಂಬ ಉದ್ದೇಶದಿಂದ ಎಎಪಿ ಸೇರಿದ್ದೇನೆ ಎಂದರು.

ಇದನ್ನೂ ಓದಿ: ಆಮ್‌ ಆದ್ಮಿ ಪಕ್ಷ ಸೇರಿದ ಹಾಸ್ಯನಟ ಟೆನ್ನಿಸ್‌ ಕೃಷ್ಣ

ವಸಂತನಗರದಿಂದ ಸ್ಪರ್ಧೆ: ಈ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, ತಮ್ಮ ಸ್ವಂತ ವಾರ್ಡ್‌ ವಸಂತ ನಗರದಿಂದ ಆರೋಹಿತ ಅವರು ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಬಯಸಿರುವುದು ಸಂತಸ ತಂದಿದೆ. ಅವರು ಅಲ್ಲಿ ಜಯಗಳಿಸಿ ನವ ಬೆಂಗಳೂರು ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

Last Updated : Sep 15, 2022, 11:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.