ಬೆಂಗಳೂರು: ಕೋವಿಡ್ ಕಾರಣ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಶಾಲಾ ಶುಲ್ಕ ಪಡೆಯುವ ಸಂಬಂಧ ಹಲವು ಗೊಂದಲಗಳಿವೆ. ಶಿಕ್ಷಣ ಸಚಿವರು ಕೂಡ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಸರ್ಕಾರ ಒಂದು ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್) ಕಾರ್ಯದರ್ಶಿ ಶಶಿಕುಮಾರ್ ಒತ್ತಾಯಿಸಿದ್ದಾರೆ.
ಅನೇಕ ಪೋಷಕರು ಕಳೆದ 2-3 ವರ್ಷಗಳಿಂದ ಶಾಲಾ ಶುಲ್ಕ ಪಾವತಿಸಿಲ್ಲ. ಕೋವಿಡ್ ಆವರಿಸಿಕೊಂಡ ಮೇಲಂತೂ ತರಗತಿ ನಡೆಸಲಾಗಿದೆ, ಶುಲ್ಕ ಪಡೆಯಲಾಗದೆ. ಖಾಸಗಿ ಶಾಲೆಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶುಲ್ಕ ಪಡೆಯದೆ ಖಾಸಗಿ ಶಾಲೆಗಳನ್ನು ನಡೆಸಲು ಸಾಧ್ಯವಿಲ್ಲ. ಹೆಚ್ಚು ಶುಲ್ಕ ಪಡೆಯುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಶುಲ್ಕವೇ ಪಡೆಯಬೇಡಿ ಎಂದರೆ ಹೇಗೆ? ಎಂದು ಶಶಿಕುಮಾರ್ ಪ್ರಶ್ನಿಸಿದ್ದಾರೆ.
ಪೋಷಕರು ಕನಿಷ್ಠ ಶುಲ್ಕ ಪಾವತಿಸಿ ಮಕ್ಕಳನ್ನು ದಾಖಲಿಸಲು ಅವಕಾಶ ನೀಡಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ದಾಖಲಾತಿ ಪ್ರಕ್ರಿಯೆ ನಡೆಸಲು ಕಷ್ಟವಾಗುತ್ತದೆ. ಶಿಕ್ಷಣ ಇಲಾಖೆ ಕೂಡ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಓದಿ : ಖಾಸಗಿ ಶಾಲೆಗಳ ಶುಲ್ಕ ವಿಚಾರ.. ಸಂಬಂಧ ಪಟ್ಟವರಿಗೆ ನೋಟಿಸ್: ಸಚಿವ ಸುರೇಶ್ ಕುಮಾರ್