ETV Bharat / state

ನಿರ್ಮಾಪಕರಿಗೆ ವಂಚಿಸಿದ ಆರೋಪ : 'ಕಮಲಿ' ಧಾರಾವಾಹಿ ನಿರ್ದೇಶಕ ಅರೆಸ್ಟ್

'ಕಮಲಿ' ಧಾರವಾಹಿಯ ಲಾಭಾಂಶ ನೀಡಿಲ್ಲ ಎಂದು ಆರೋಪಿಸಿ ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ನಿರ್ಮಾಪಕ ರೋಹಿತ್ ಸತತ ಮೂರು ವರ್ಷಗಳಿಂದ ಕಾನೂನು ಹೋರಾಟ ಮಾಡಿದ್ದರು..

ಕಮಲಿ ನಿರ್ದೇಶಕ ಅರವಿಂದ್ ಕೌಶಿಕ್
ಕಮಲಿ ನಿರ್ದೇಶಕ ಅರವಿಂದ್ ಕೌಶಿಕ್
author img

By

Published : Apr 29, 2022, 2:09 PM IST

ಬೆಂಗಳೂರು : ಕನ್ನಡಿಗರ ನೆಚ್ಚಿನ‌ ಧಾರಾವಾಹಿ‌ ಆಗಿರುವ 'ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವಂಚನೆ ಆರೋಪದಡಿ ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ನಿರ್ಮಾಪಕ ರೋಹಿತ್ ನೀಡಿದ್ದ ದೂರಿನನ್ವಯ ನಿರ್ದೇಶಕನ ಬಂಧನವಾಗಿದೆ.

ಅರವಿಂದ್ ಕೌಶಿಕ್ ಕಮಲಿ ಧಾರವಾಹಿ ಮಾತ್ರವಲ್ಲದೆ ಹಲವು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು‌. 'ನಮ್ಮ‌ ಏರಿಯಾದಲ್ಲಿ ಒಂದು ದಿನ', 'ಹುಲಿರಾಯ' ಹಾಗೂ 'ಶಾರ್ದುಲಾ' ಸೇರಿ ಹಲವು ಸಿನಿಮಾಗಳನ್ನು‌ ನಿರ್ದೇಶನ ಮಾಡಿದ್ದರು. ಆದರೆ, ಅರವಿಂದ್ ಕೌಶಿಕ್ ವಿರುದ್ಧ 'ಕಮಲಿ' ಧಾರವಾಹಿ ನಿರ್ಮಾಣಕ್ಕೆ ₹73 ಲಕ್ಷ ಹಣ ಹೂಡಿಕೆ ಮಾಡಿದ್ದ ರೋಹಿತ್ ಸತತ ಮೂರು ವರ್ಷಗಳಿಂದ ಕಾನೂನು ಹೋರಾಟ ಮಾಡಿದ್ದರು.

ಏನಿದು ಪ್ರಕರಣ? : 2018ರಲ್ಲಿ 'ಕಮಲಿ' ಧಾರವಾಹಿ ನಿರ್ಮಾಣಕ್ಕೆ ರೋಹಿತ್ ಹಣ ಹೂಡಿಕೆ ಮಾಡಿದ್ದರು. ಧಾರವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ ಮತ್ತು ಲಾಭಾಂಶ ನೀಡದೇ ವಂಚಸಿರುವ ಆರೋಪ ಕೇಳಿ ಬಂದಿತ್ತು‌. ಈ ಬಗ್ಗೆ ಕೌಶಿಕ್ ವಿರುದ್ಧ ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಿದ್ದರು‌. ಅಂತೆಯೇ ಅರವಿಂದ್ ಕೌಶಿಕ್ ವಿರುದ್ದ 506 ಹಾಗೂ 420ರಡಿ ಪ್ರಕರಣ ದಾಖಲಾಗಿತ್ತು‌. ಅಲ್ಲದೇ, ಈ ಸಂಬಂಧ ಪ್ರಧಾನಮಂತ್ರಿ ಕಚೇರಿ ಮತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ನಿರ್ಮಾಪಕ ಪತ್ರ ಬರೆದಿದ್ದರು.

ಸದ್ಯ ಈ ಬಗ್ಗೆ ನಿರ್ಮಾಪಕ ರೋಹಿತ್ ಪ್ರತಿಕ್ರಿಯಿಸಿದ್ದು, ನಿರ್ದೇಶಕ ಅರವಿಂದ್ ಕೌಶಿಕ್​ನಿಂದ ನನಗೆ ಮೋಸ ಆಗಿದೆ. ನಾನು ಧಾರವಾಹಿ ನಿರ್ಮಾಣಕ್ಕೆ 73 ಲಕ್ಷ ರೂ. ಹೂಡಿದ್ದೆ. ಧಾರವಾಹಿ ಅಧಿಕ ಅದಾಯ ಗಳಿಸುತ್ತಿದ್ದರೂ ಕೂಡ ನನಗೆ ಹಣ ನೀಡರಲಿಲ್ಲ‌. ಖಾಸಗಿ ವಾಹಿನಿಯವರು ಆಗಿರುವ ಲೋಪ ಸರಿಪಡಿಸಬೇಕಾಗಿತ್ತು. ತೆರೆ ಮೇಲೆ ನನ್ನ ನಿರ್ಮಾಪಕ ಅಂತಾ ನನ್ನ ಹೆಸರು ಬರುತ್ತೆ. ಆದರೆ, ಚಾನೆಲ್ ಮತ್ತು ಪ್ರೊಡಕ್ಷನ್​ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಲ್ಲಿ ನನ್ನ ಹೆಸರೇ ಇರಲಿಲ್ಲ ಎಂದರು.

ಧಾರಾವಾಹಿ ನಿರ್ಮಾಣಕ್ಕೆ ಸಂಪೂರ್ಣ ಹಣವನ್ನು ನಾನು ಬ್ಯಾಂಕ್​ಗೆ ಜಮೆ ಮಾಡಿದ್ದೇನೆ. 'ಕಮಲಿ' ಧಾರವಾಹಿ 7 ಕೋಟಿ ರೂ. ಸಂಪಾದನೆ ಮಾಡಿದೆ. ಆದರೆ, ಬಂಡವಾಳ ಹೂಡಿದ ನನಗೆ ಲಾಭಾಂಶವನ್ನು ನೀಡಿಲ್ಲ. ಅಸಲು ಕೂಡ ಕೊಟ್ಟಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ದೇವನಹಳ್ಳಿ ಕೋಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಗರಡಿ ಚಿತ್ರೀಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.